ETV Bharat / sports

'ಇದು ಸೂಕ್ತ ಸಮಯವಾಗಿರಲಿಲ್ಲ'..ವಾರ್ನ್ ಬಗ್ಗೆ ಅನಗತ್ಯ ಹೇಳಿಕೆ ನೀಡಿ ಪಶ್ಚಾತ್ತಾಪ ಪಟ್ಟ ಗವಾಸ್ಕರ್‌! - ಹೃದಯಾಘಾತದಿಂದ ಶೇನ್ ವಾರ್ನ್ ನಿಧನ

ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್​ ಸಾವಿನ ಬೆನ್ನಲ್ಲೇ ಅವರ ಬಗ್ಗೆ ಅನಗತ್ಯ ಹೇಳಿಕೆ ನೀಡಿ, ಟೀಕೆಗೊಳಗಾಗಿದ್ದ ಸುನಿಲ್ ಗವಾಸ್ಕರ್ ಇದೀಗ ಪಶ್ಚಾತ್ತಾಪ ಪಟ್ಟಿದ್ದಾರೆ.

Gavaskar on Warne
Gavaskar on Warne
author img

By

Published : Mar 8, 2022, 12:37 PM IST

Updated : Mar 8, 2022, 12:49 PM IST

ಹೈದರಾಬಾದ್​: ಹೃದಯಾಘಾತದಿಂದ ಕ್ರಿಕೆಟ್ ದಿಗ್ಗಜ ಶೇನ್​ ವಾರ್ನ್(53)​ ಸಾವನ್ನಪ್ಪಿದ್ದು, ಇದಕ್ಕೆ ಅನೇಕ ಕ್ರಿಕೆಟ್​ ಸ್ಟಾರ್ಸ್​​ ಸೇರಿದಂತೆ ಇಡೀ ವಿಶ್ವವೇ ಮರುಗಿದೆ. ಇವರ ಸಾವಿಗೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಸುನಿಲ್​ ಗವಾಸ್ಕರ್ ಸಹ ಸಂತಾಪ ಸೂಚಿಸಿದ್ದರು. ಆದರೆ ಈ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ಕೊಟ್ಟಿದ್ದು, ಈ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಹೀಗೆ ಮಾತನಾಡಬಾರದಿತ್ತು ಎಂದಿದ್ದಾರೆ.

ಸುನಿಲ್ ಗವಾಸ್ಕರ್ ಹೇಳಿದ್ದೇನು?: ಲೆಜೆಂಡರಿ ಸ್ಪಿನ್ನರ್​ ಕ್ರಿಕೆಟ್​ನ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಭಾರತದಲ್ಲಿ ಶೇನ್​ ವಾರ್ನ್​​ ಅವರ ಪ್ರದರ್ಶನ ತೀರಾ ಸಾಮಾನ್ಯವಾಗಿತ್ತು ಎಂದು ಬ್ಯಾಟಿಂಗ್ ಐಕಾನ್ ಸುನೀಲ್ ಗವಾಸ್ಕರ್​ ಅಭಿಪ್ರಾಯಪಟ್ಟಿದ್ದರು. ಅವರು ಶ್ರೇಷ್ಠರಲ್ಲ ಎಂದು ನಾನು ಹೇಳುವುದಿಲ್ಲ, ಆದರೆ, ನನ್ನ ಪ್ರಕಾರ ಭಾರತೀಯ ಸ್ಪಿನ್ನರ್​ಗಳು ಮತ್ತು ಮುತ್ತಯ್ಯ ಮುರಳೀಧರನ್​ ಅವರು ಖಂಡಿತವಾಗಿ ಶೇನ್​ ವಾರ್ನ್​ ಅವರಿಗಿಂತಲೂ ಉತ್ತಮ ಸ್ಪಿನ್ನರ್​ಗಳಾಗಿದ್ದಾರೆ ಎಂದಿದ್ದರು.

ಇದನ್ನೂ ಓದಿರಿ: ವಾರ್ನ್ ಮ್ಯಾಜಿಕ್ ಎಸೆತಗಳ ಸೃಷ್ಟಿಕರ್ತ ನಿಜ, ಆದರೆ ವಿಶ್ವದ ಶ್ರೇಷ್ಠ ಸ್ಪಿನ್ನರ್ ಎನ್ನಲಾಗದು: ಗವಾಸ್ಕರ್​

ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಜೊತೆಗೆ ಅವರ ಹೇಳಿಕೆಯನ್ನ ಟ್ರೋಲ್ ಸಹ ಮಾಡಲಾಗಿತ್ತು. ಇದಕ್ಕೆ ಪಶ್ಚಾತ್ತಾಪ ಪಟ್ಟಿರುವ ಅವರು, ಈ ಸಮಯದಲ್ಲಿ ನಾನು ಈ ರೀತಿಯಾಗಿ ಉತ್ತರಿಸಬಾರದಿತ್ತು. ಯಾರು ಶ್ರೇಷ್ಠ ಎಂದು ವಾದ ಮಾಡಲು ಇದು ಸೂಕ್ತ ಸಮಯವಾಗಿರಲಿಲ್ಲ. ಕ್ರಿಕೆಟ್​ ಆಡಿರುವ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಶೇನ್​ ವಾರ್ನ್​ ಕೂಡ ಒಬ್ಬರು ಎಂದಿದ್ದಾರೆ.

ಆಸ್ಟ್ರೇಲಿಯಾ ಪರ 145 ಟೆಸ್ಟ್​ ಪಂದ್ಯಗಳಿಂದ 708 ವಿಕೆಟ್​ ಮತ್ತು 194 ಏಕದಿನ ಪಂದ್ಯಗಳಿಂದ 293 ವಿಕೆಟ್ ಪಡೆದಿರುವ ವಾರ್ನ್​ ಅವರು ನೀವು ಕಂಡ ಶ್ರೇಷ್ಠ ಸ್ಪಿನ್ನರ್ ಎನ್ನಬಹುದೇ? ಎಂದು ಕೇಳಿದ್ದಕ್ಕೆ ಉತ್ತರಿಸಿರುವ ಭಾರತ ತಂಡದ ಮಾಜಿ ನಾಯಕ ಗವಾಸ್ಕರ್, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮತ್ತು ಭಾರತೀಯ ಸ್ಪಿನ್ನರ್​ಗಳು ವಾರ್ನ್​ಗಿಂತ ಸಾಕಷ್ಟು ಉತ್ತಮರು ಎಂದಿದ್ದರು.

Last Updated : Mar 8, 2022, 12:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.