ಮುಂಬೈ(ಮಹಾರಾಷ್ಟ್ರ): ವಿರಾಟ್ ಕೊಹ್ಲಿ ಅವರ ಟೀಂ ಇಂಡಿಯಾ ನಾಯಕತ್ವ ಕುರಿತಂತೆ ಆಯ್ಕೆ ಸಮಿತಿಯ ಪರವಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಟೀಂ ಇಂಡಿಯಾದ ಮಾಜಿ ನಾಯಕ ದಿಲೀಪ್ ವೆಂಗ್‌ಸರ್ಕಾರ್ ಹೇಳಿದ್ದು, ವಿವಾದಕ್ಕೆ ನಾಂದಿ ಹಾಡಿದೆ.
ದಕ್ಷಿಣ ಆಫ್ರಿಕಾ ಪ್ರವಾಸದ ಮುನ್ನ ವಿರಾಟ್ ಕೊಹ್ಲಿ ಮಾಧ್ಯಮಗೋಷ್ಟಿಯೊಂದರಲ್ಲಿ ಮಾತನಾಡುತ್ತಾ, ಬಿಸಿಸಿಐನಿಂದ ಯಾರೂ ಟಿ-20 ನಾಯಕತ್ವವನ್ನು ತೊರೆಯಬೇಡಿ ಎಂದು ಹೇಳಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಈಗ ಈ ವಿಚಾರದಲ್ಲಿ ಮಾತನಾಡಲು ಗಂಗೂಲಿಗೆ ಅಧಿಕಾರವಿಲ್ಲ ಎಂದು ವೆಂಕಸರ್ಕರ್ ಹೇಳಿದ್ದಾರೆ.
ಗಂಗೂಲಿಗೆ ಆಯ್ಕೆ ಸಮಿತಿಯ ಪರವಾಗಿ ಮಾತನಾಡುವುದು ಸರಿಯಲ್ಲ. ಅವರು ಬಿಸಿಸಿಐ ಅಧ್ಯಕ್ಷರಾಗಿದ್ದಾರೆ. ಆಯ್ಕೆ ಅಥವಾ ನಾಯಕತ್ವದ ಬಗ್ಗೆ ಯಾವುದೇ ಸಮಸ್ಯೆಯಿದ್ದರೂ, ಆಯ್ಕೆ ಸಮಿತಿಯ ಅಧ್ಯಕ್ಷ ಚೇತನ್ ಶರ್ಮಾ ಮಾತನಾಡಬೇಕು ಎಂದು ವೆಂಗ್‌ಸರ್ಕರ್ ಅಭಿಪ್ರಾಯಪಟ್ಟಿದ್ದಾರೆ.
ನಾವು ವಿರಾಟ್‌ಗೆ ಟಿ20 ನಾಯಕತ್ವದಿಂದ ಕೆಳಗಿಳಿಯದಂತೆ ವಿನಂತಿ ಮಾಡಿದ್ದೆವು. ಆದರೆ ಅವರು ನಾಯಕನಾಗಿ ಮುಂದುವರಿಯಲು ಬಯಸಲಿಲ್ಲ ಎಂದು ಸೌರವ್ ಗಂಗೂಲಿ ಕೆಲವು ದಿನಗಳ ಹಿಂದೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವೆಂಗ್‌ಸರ್ಕರ್ ಯಾವುದೇ ಆಟಗಾರನನ್ನು ಆಯ್ಕೆ ಮಾಡುವ ಅಥವಾ ಕೈಬಿಡುವ ಅಧಿಕಾರವು ಕೇವಲ ಆಯ್ಕೆ ಸಮಿತಿಗೆ ಮಾತ್ರ ಇರುತ್ತದೆ ಎಂದು ವೆಂಗ್‌ಸರ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಇದರ ಜೊತೆಗೆ ನಾಯಕನ್ನು ಆಯ್ಕೆ ಮಾಡುವುದು ಅಥವಾ ತೆಗೆದುಹಾಕುವುದು ಆಯ್ಕೆ ಸಮಿತಿಗೆ ಬಿಟ್ಟಿದ್ದು, ಸೌರವ್ ಗಂಗೂಲಿಗೆ ಆ ಅಧಿಕಾರವಿಲ್ಲ ಎಂದು ವೆಂಗ್‌ಸರ್ಕರ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತ ತಂಡ ದಕ್ಷಿಣ ಆಫ್ರಿಕಾದ ಈ ಬೌಲರ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು: ಜಾಫರ್ ಸಲಹೆ