ETV Bharat / sports

WTC Final: ಆಯ್ಕೆಯ ಮಾನದಂಡ ಆಟಗಾರನ ಅರ್ಹತೆಯೋ, ಮೈದಾನವೋ? : ಸುನಿಲ್​ ಗವಾಸ್ಕರ್​​ - ETV Bharath Kannada news

ನಂ.1 ಶ್ರೇಯಾಂಕದ ಬ್ಯಾಟರ್​​​ನ್ನು ಪಿಚ್​ ಆಧಾರದಲ್ಲಿ ತಂಡದಿಂದ ಹೊರಗಿಡುತ್ತಾರಾ?, ಬೌಲರ್​ಗೆ ಮಾತ್ರ ಏಕೆ ಈ ನಿಯಮ ಎಂದು ಸುನಿಲ್​ ಗವಾಸ್ಕರ್​​​ ಅಶ್ವಿನ್​ ಅವರನ್ನು ಡಬ್ಲ್ಯೂಟಿಸಿ ಆಡಿಸದಿದ್ದಕ್ಕೆ ಪ್ರಶ್ನಿಸಿದ್ದಾರೆ.

Sunil Gavaskar
ಸುನಿಲ್​ ಗವಾಸ್ಕರ್​​
author img

By

Published : Jun 13, 2023, 1:01 PM IST

ನವದೆಹಲಿ: 2023ರ ಟೆಸ್ಟ್​ ಚಾಂಪಿಯನ್​ಶಿಪ್​ ಸೋಲಿನ ನಂತರ ಪರಾಜಯಕ್ಕೆ ಒಂದೊಂದೇ ಕಾರಣಗಳನ್ನು ಹುಡುಕಲಾಗುತ್ತಿದೆ. ಬ್ಯಾಟಿಂಗ್​ ವೈಫಲ್ಯದ ಜೊತೆಗೆ ಹನ್ನೊಂದರ ಬಳಗದಲ್ಲಿ ರವಿಚಂದ್ರನ್​ ಅಶ್ವಿನ್​ ಅವರನ್ನು ಆಡಿಸದೇ ಇರುವುದು ಸಹ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಟಾಸ್​ ಗೆದ್ದು ತಂಡ ಪ್ರಕಟಗೊಂಡ ಕೂಡಲೇ ಹಿರಿಯ ಆಟಗಾರರು ಅಶ್ವಿನ್​ ಕೈಬಿಟ್ಟಿದ್ದು ತಪ್ಪು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸೋಲಿನ ನಂತರ ಈಗ ಮತ್ತೆ ಇದೇ ಮಾತು ಚರ್ಚೆಗೆ ಕಾರಣವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಅಶ್ವಿನ್ ಐಸಿಸಿ ಟೆಸ್ಟ್​ ರ್‍ಯಾಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿದ್ದರೂ ಅವರನ್ನು ಆಡಿಸಿಲ್ಲ ಎಂಬುದು. ಅಲ್ಲದೇ ಐಪಿಎಲ್​ ಸಮಯದಲ್ಲಿ ಅಶ್ವಿನ್​ ಡ್ಯೂಕ್​ ಬಾಲ್​ನಲ್ಲಿ ಅಭ್ಯಾಸವನ್ನು ಮಾಡುತ್ತಿದ್ದರು. ಅಲ್ಲದೇ ಇಂಗ್ಲೆಂಡ್​ನ ಸಮಯಕ್ಕೆ ಆಹಾರ ಸೇವನೆ, ನಿದ್ರೆ ಮಾಡಿ ಅನಾರೋಗ್ಯಕ್ಕೆ ತುತ್ತಾಗ ರೀತಿಯನ್ನು ಮೊದಲೇ ಪೂರ್ವ ತಯಾರಿಯನ್ನೂ ಮಾಡಿಕೊಂಡಿದ್ದರು. ಎಲ್ಲರೂ ಐಪಿಎಲ್​ ಗುಂಗಿನಲ್ಲಿದ್ದರೆ ಅಶ್ವಿನ್​ ಮಾತ್ರ ಡಬ್ಲ್ಯೂಟಿಸಿ ತಯಾರಿಯಲ್ಲಿದ್ದರು.

ಈಗಿನ ಕ್ರಿಕೆಟ್​ ಕಾಲಘಟ್ಟದಲ್ಲಿ ಅಶ್ವಿನ್​ ಜೊತೆ ನಡೆದುಕೊಂಡಂತೆ ಬೇರಾವ ಆಟಗಾರನ್ನು ನಡೆಸಿಕೊಂಡಿಲ್ಲ. ಒಂದು ವೇಳೆ ತಂಡದಲ್ಲಿ ನಂ.1 ಶ್ರೇಯಾಂಕ್ ಬ್ಯಾಟರ್​ ಇದ್ದಲ್ಲಿ ಅವರನ್ನು ತಂಡದಿಂದ ಹೊರಗಿಟ್ಟು ಆಡಿಸಲು ಸಾಧ್ಯವಾಗುತ್ತಿತ್ತೇ? ಬ್ಯಾಟರ್​ ಹಿಂದೆ ಯಾವ ರೀತಿಯ ಪಿಚ್​ನಲ್ಲಿ ರನ್​ಗಳಿಸಿದ್ದಾನೆ ಎಂದು ನೋಡಿ ಕಣಕ್ಕಿಳಿಸುತ್ತಾರಾ? ಇಲ್ಲ ಇದು ಖಂಡಿತಾ ನಡೆಯುವುದಿಲ್ಲ ಎಂದು ಪತ್ರಿಕೆ ಒಂದರ ಲೇಖನದಲ್ಲಿ ಬರೆದಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತವು ಅಶ್ವಿನ್​ ಅವರನ್ನು ಹೊರಗಿಟ್ಟು ನಾಲ್ವರು ವೇಗದ ಬೌಲರ್‌ಗಳಿಗೆ ಆದ್ಯತೆ ನೀಡಿತು. ಆದರೆ ಅಶ್ವಿನ್​ ಅವರ ರೆಕಾರ್ಡ್​ನಲ್ಲಿ ಅತಿ ಹೆಚ್ಚ ಎಡಗೈ ಬ್ಯಾಟರ್​ಗಳನ್ನು ಕಾಡಿದ ದಾಖಲೆ ಇದೆ. ಆದರೆ ಇದು ಲೆಕ್ಕಕ್ಕೆ ಬರಲಿಲ್ಲ. ಆಸ್ಟ್ರೇಲಿಯಾ ಐವರು ಎಡಗೈ ಬ್ಯಾಟರ್​ಗಳೊಂಡಿಗೆ ಕಣಕ್ಕಿಳಿದಿತ್ತು, ಅಶ್ವಿನ್​ ಇದ್ದಿದ್ದರೆ ವೇಗಿಗಳಿಗಿಂತೆ ಹೆಚ್ಚು ಪರಿಣಾಮಕಾರಿಯಾಗುತ್ತಿದ್ದರು. ಅಲ್ಲದೇ ಎರಡನೇ ಇನ್ನಿಂಗ್ಸ್​​ನ ಕೊನೆಯಲ್ಲಿ ಸಾರ್ಕ್​ 43 ರನ್​ ಗಳಿಸಿ 93 ರನ್​ನ ಜೊತೆಯಾಟ ಮಾಡಿದ್ದರು. ಇದು ಎರಡನೇ ಇನ್ನಿಂಗ್ಸ್​ನ ಬೃಹತ್​ ಮೊತ್ತಕ್ಕೆ ಕಾರಣವಾಯತು.

ಅಶ್ವಿನ್​ 92 ಪಂದ್ಯದಲ್ಲಿ 174 ಇನ್ನಿಂಗ್ಸ್​ ಆಡಿದ್ದು, 51.8 ಸ್ಟ್ರೈಕ್ ರೇಟ್‌ನಲ್ಲಿ 474 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಏಳು ಬಾರಿ 10 ವಿಕೆಟ್​ ಮತ್ತು 32 ಬಾರಿ ಐದು ವಿಕೆಟ್ ಪಡೆದುಕೊಂಡಿದ್ದಾರೆ. ಇಷ್ಟು ಉತ್ತಮ ರೆಕಾರ್ಡ್​ ಇದ್ದರೂ ಅಶ್ವಿನ್​ ಅವರನ್ನು ಪಿಚ್​ನ ಕಾರಣಕ್ಕೆ ಆಡಿಸಿಲ್ಲ ಎಂದರೆ ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ.

ಬ್ಯಾಟಿಂಗ್​ ಬಗ್ಗೆಯೂ ಬರೆದಿರುವ ಗವಾಸ್ಕರ್​ ನಾಯಕ ರೋಹಿತ್​ ಶರ್ಮಾ ಮತ್ತು ಅನುಭವಿ ಚೇತೇಶ್ವರ ಪೂಜಾರ ಔಟ್​ ಆಎದ ಬಾಲ್​ಗೆ ಆವರು ಆಡಿದ ಶಾಟ್​ನ್ನು ಪ್ರಶ್ನಿಸಿದ್ದಾರೆ. ಇಂತಹ ಮಹತ್ವದ ಪಂದ್ಯದಲ್ಲಿ ತಾಳ್ಮೆಯಿಂದ ಬಾಲ್​ನ್ನು ಸಮಗ್ರವಾಗಿ ಗಮನಿಸಿ ಆಡಬೇಕಾದ ಆಟಗಾರರೇ ನಿರ್ಲಕ್ಷ್ಯದ ರೀತಿಯ ಶಾಟ್​ ಸೆಲೆಕ್ಟ್​ ಮಾಡಿದ್ದಾರೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: Sourav Ganguly: ವಿರಾಟ್​ ಕೊಹ್ಲಿ ಟೆಸ್ಟ್​ ನಾಯಕತ್ವ ಯಾಕೆ ಬಿಟ್ರು ಎಂಬುದೇ ಪ್ರಶ್ನೆ: ಸೌರವ್ ಗಂಗೂಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.