ಲಂಡನ್: ಬಿಬಿಸಿಯ ಟಿವಿ ಶೋ ಚಿತ್ರೀಕರಣದ ಸಂದರ್ಭದಲ್ಲಿ ಕಾರು ಅಪಘಾತಕ್ಕೀಡಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಆಂಡ್ರ್ಯೂ ಫ್ಲಿಂಟಾಫ್ ಗಾಯಗೊಂಡಿದ್ದಾರೆ. ಅವರನ್ನು ಘಟನಾ ಸ್ಥಳದಿಂದ ಏರ್‌ಲಿಫ್ಟ್ ಮಾಡಲಾಗಿದೆ. ಇಂಗ್ಲೆಂಡ್ನ ಸರ್ರೆಯ ಡನ್ಸ್‌ಫೋಲ್ಡ್ ಪಾರ್ಕ್ ಏರೋಡ್ರೋಮ್‌ನಲ್ಲಿ ಮಂಜುಗಡ್ಡೆಯಲ್ಲಿ 'ಟಾಪ್ ಗೇರ್' ಶೋ ಚಿತ್ರೀಕರಣದಲ್ಲಿ ಅವರು ಪಾಲ್ಗೊಂಡಿದ್ದರು.
ಫ್ಲಿಂಟಾಫ್ ಜೀವಕ್ಕೆ ಅಪಾಯವಿಲ್ಲ. ಅವರು ಟ್ರ್ಯಾಕ್‌ನಲ್ಲಿ ನಿಧಾನವಾಗಿಯೇ ಕಾರು ಚಲಾಯಿಸುತ್ತಿದ್ದರು. ಅಪಘಾತದಲ್ಲಿ ಚೇತರಿಸಿಕೊಂಡ ಸ್ವಲ್ಪ ಸಮಯದ ನಂತರ ಏರ್ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಚಿತ್ರೀಕರಣವನ್ನು ಮುಂದೂಡಲಾಗಿದೆ. ಈ ಸಂದರ್ಭದಲ್ಲಿ ನಟ ಕ್ರಿಸ್ ಹ್ಯಾರಿಸ್ ಕೂಡ ಇದ್ದರು ಎಂದು ತಿಳಿದು ಬಂದಿದೆ.
ಮೂರು ವರ್ಷಗಳ ಹಿಂದೆ ಇದೇ ಶೋ ಚಿತ್ರೀಕರಣದ ಸಮಯದಲ್ಲೂ ಫ್ಲಿಂಟಾಫ್ ಕಾರು ಅಪಘಾತಕ್ಕೀಡಾಗಿತ್ತು. ಆಗ ಕಾರು 125 ಕಿ.ಮೀ ವೇಗದಲ್ಲಿತ್ತು. ಅದೃಷ್ಟವಶಾತ್ ಅವರು ಬದುಕುಳಿದಿದ್ದರು. 2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಫ್ಲಿಂಟಾಫ್, 79 ಟೆಸ್ಟ್ ಮತ್ತು 141 ಸೀಮಿತ ಓವರ್ಗಳ ಪಂದ್ಯಗಳಲ್ಲಿ ಆಡಿದ್ದಾರೆ.
ಇದನ್ನು ಓದಿ: ಚುಮು ಚುಮು ಚಳಿಯ ಆಹ್ಲಾದ ಸವಿದ ಸೂರ್ಯಕುಮಾರ್ ಯಾದವ್.. ಪತ್ನಿಯ ಜೊತೆ ಪ್ರವಾಸ