ಕೊಲಂಬೊ: ಆರ್.ಪ್ರೇಮದಾಸ ಮೈದಾನದಲ್ಲಿ ನಡೆಯುತ್ತಿರುವ ಕೊನೆಯ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಘಾತಕ್ಕೊಳಗಾಗಿದ್ದು, 5 ವಿಕೆಟ್ ಕಳೆದುಕೊಂಡಿದೆ. ಮೊದಲ 4 ಓವರ್ನಲ್ಲೇ ಪ್ರಮುಖ 4 ವಿಕೆಟ್ ಕಳೆದುಕೊಂಡು ಸರಣಿ ಸೋಲುವ ಭೀತಿಗೊಳಗಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಆರಂಭದ 4 ಓವರ್ಗಳಲ್ಲೇ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತು. ಆರಂಭಿಕ ಓವರ್ನಲ್ಲಿ ಶಿಖರ್ ಧವನ್ (0) ವಿಕೆಟ್ ಒಪ್ಪಿಸಿದರೆ, ಇವರ ಬೆನ್ನಲ್ಲೇ ಗಾಯ್ಕವಾಡ(14), ಪಡಿಕ್ಕಲ್(9) ಹಾಗೂ ಸಂಜು ಸ್ಯಾಮನ್ಸ್(0) ವಿಕೆಟ್ ಒಪ್ಪಿಸಿದರು.
ಒಂದೇ ಓವರ್ನಲ್ಲಿ ಎರಡು ವಿಕೆಟ್ ಪಡೆದುಕೊಳ್ಳುವ ಮೂಲಕ ಹಸರಂಗ ತಂಡಕ್ಕೆ ಮೆಲುಗೈ ತಂದುಕೊಟ್ಟರು. ಹಸರಂಗ ಎಸೆದ 4ನೇ ಓವರ್ನಲ್ಲಿ ಗಾಯ್ಕವಾಡ ಹಾಗೂ ಸಂಜು ಸ್ಯಾಮನ್ಸ್ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ನಿತೀಶ್ ರಾಣಾ ಕೂಡ 6ರನ್ಗಳಿಕೆ ಮಾಡಿ ಔಟ್ ಆದರು. ಸದ್ಯ ಟೀಂ ಇಂಡಿಯಾ ಉಪನಾಯಕ ಭುವನೇಶ್ವರ್ ಕುಮಾರ್ ಹಾಗೂ ಕುಲ್ದೀಪ್ ಯಾದವ್ ಮೈದಾನದಲ್ಲಿದ್ದಾರೆ.
ಇದೀಗ ಬಂದಿರುವ ಮಾಹಿತಿಯಂತೆ, 12 ಓವರ್ ಮುಕ್ತಾಯಕ್ಕೆ ಟೀಂ ಇಂಡಿಯಾ 45 ರನ್ ಗಳಿಸಿದ್ದು 5 ವಿಕೆಟ್ ಕಳೆದುಕೊಂಡಿದೆ. ಬೌಲರ್ಗಳಾದ ಭುವನೇಶ್ವರ್ ಕುಮಾರ್ ಹಾಗು ಕುಲ್ದೀಪ್ ಯಾದವ್ ಕ್ರೀಸ್ನಲ್ಲಿದ್ದಾರೆ.