ನವದೆಹಲಿ: ಏಷ್ಯಾಕಪ್ ಸರಣಿಯ ಸೂಪರ್ ಫೋರ್ ಹಂತದ ಮೂರನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಣಸಲಿವೆ. ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ನಡೆಯಲಿರುವ ಪಂದ್ಯದ ಬಗ್ಗೆ ಭಾರತದ ಮಾಜಿ ಕ್ರಿಕೆಟರ್ ರಾಬಿನ್ ಉತ್ತಪ್ಪ, ಭಾರತದ ಬ್ಯಾಟಿಂಗ್ ಲೈನ್ ಅಪ್ ಸಾಂಪ್ರದಾಯಿಕ ಎದುರಾಳಿಗಳ ಬೌಲಿಂಗ್ ಲೈನ್‌ಅಪ್ ಅನ್ನು ಅಚ್ಚುಕಟ್ಟಾಗಿ ನಿಭಾಯಿಸಬಲ್ಲದು ಎಂದು ಹೇಳಿದ್ದಾರೆ.
-
Schedule of Super 4 matches in Asia Cup 2023:
— Johns. (@CricCrazyJohns) September 6, 2023 " class="align-text-top noRightClick twitterSection" data="
Sept 6 - PAK vs BAN
Sept 9 - SL vs BAN
Sept 10 - IND vs PAK
Sept 12 - IND vs SL
Sept 14 - PAK vs SL
Sept 15 - IND vs BAN
Which teams will play in the finals of the Asia Cup? pic.twitter.com/tmgOLmaBys
">Schedule of Super 4 matches in Asia Cup 2023:
— Johns. (@CricCrazyJohns) September 6, 2023
Sept 6 - PAK vs BAN
Sept 9 - SL vs BAN
Sept 10 - IND vs PAK
Sept 12 - IND vs SL
Sept 14 - PAK vs SL
Sept 15 - IND vs BAN
Which teams will play in the finals of the Asia Cup? pic.twitter.com/tmgOLmaBysSchedule of Super 4 matches in Asia Cup 2023:
— Johns. (@CricCrazyJohns) September 6, 2023
Sept 6 - PAK vs BAN
Sept 9 - SL vs BAN
Sept 10 - IND vs PAK
Sept 12 - IND vs SL
Sept 14 - PAK vs SL
Sept 15 - IND vs BAN
Which teams will play in the finals of the Asia Cup? pic.twitter.com/tmgOLmaBys
ಜಿಯೋ ಸಿನಿಮಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪಾಕಿಸ್ತಾನದಲ್ಲಿ ನುರಿತ ವೇಗದ ಬೌಲರ್‌ಗಳಿದ್ದಾರೆ. ಅದರಲ್ಲೂ ಶಾಹೀನ್ ಶಾ ಆಫ್ರಿದಿ ಇತ್ತೀಚೆಗೆ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಹಾರಿಸ್ ರೌಫೂ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಅವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಬ್ಯಾಟರ್ಗಳು ನಮ್ಮ ಭಾರತ ತಂಡದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
-
INDIA vs PAKISTAN ON SEPTEMBER 10th.
— Johns. (@CricCrazyJohns) September 4, 2023 " class="align-text-top noRightClick twitterSection" data="
- Time for Round 2 in Asia cup. pic.twitter.com/RPOfGAptDA
">INDIA vs PAKISTAN ON SEPTEMBER 10th.
— Johns. (@CricCrazyJohns) September 4, 2023
- Time for Round 2 in Asia cup. pic.twitter.com/RPOfGAptDAINDIA vs PAKISTAN ON SEPTEMBER 10th.
— Johns. (@CricCrazyJohns) September 4, 2023
- Time for Round 2 in Asia cup. pic.twitter.com/RPOfGAptDA
ಮಾಜಿ ಕ್ರಿಕೆಟಿಗ ಅಭಿಷೇಕ್ ನಾಯರ್ ಕಳೆದ ವಾರದ ಪಂದ್ಯದ ಬಳಿಕ, ಪಾಕಿಸ್ತಾನ ವಿರುದ್ಧದ ಮುಂದಿನ ಪಂದ್ಯದಲ್ಲಿ ರೋಹಿತ್ ಪಡೆ ಉತ್ತಮ ಪ್ರದರ್ಶನ ನೀಡಲಿದೆ ಎಂದು ಹೇಳಿದ್ದರು. ಪಾಕ್ ಬಳಿ ವೇಗಿಗಳಿದ್ದರೆ, ಆ ವೇಗಿಗಳ ನಿಭಾಯಿಸಬಲ್ಲ ಬ್ಯಾಟ್ಸ್‌ಮನ್‌ಗಳು ನಮ್ಮಲ್ಲಿದ್ದಾರೆ. ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಕೊಹ್ಲಿ ಹೇಗೆ ಬ್ಯಾಟ್ ಬೀಸಿದ್ದರು ಎಂಬುದನ್ನು ನಾವು ನೋಡಿದ್ದೇವೆ. ಸದ್ಯ ಎರಡೂ ತಂಡಗಳು ಒಳ್ಳೆ ಫಾರ್ಮ್ನಲ್ಲಿವೆ. ಭಾರತ ಕೂಡ ಒತ್ತಡದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ತಿಳಿದಿದೆ ಎಂದು ಹೇಳಿದ್ದಾರೆ.
ಭಾರತದ ಮಾಜಿ ಎಡಗೈ ವೇಗಿ ಆರ್‌ಪಿ ಸಿಂಗ್, ಭಾರತ - ಪಾಕಿಸ್ತಾನ ನಡುವಿನ ಸ್ಪರ್ಧೆಯು ಅತ್ಯುತ್ತಮ ಬೌಲಿಂಗ್ ಲೈನ್‌ಅಪ್ ಮತ್ತು ಅತ್ಯುತ್ತಮ ಬ್ಯಾಟಿಂಗ್ ಲೈನ್‌ಅಪ್ ನಡುವಿನ ಪಂದ್ಯವಾಗಿರಲಿದೆ. ಪಾಕಿಸ್ತಾನ ಬೌಲಿಂಗ್ ವಿಭಾಗದಲ್ಲಿ ಮೇಲುಗೈ ಹೊಂದಿರಬಹುದು ನಾವು ಬ್ಯಾಟಿಂಗ್ ವಿಭಾಗದಲ್ಲಿ ಮೇಲುಗೈ ಹೊಂದಿದ್ದೇವೆ. ಪಾಕ್ನ ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಮತ್ತು ನಸೀಮ್ 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಆದ್ದರಿಂದ ಬೌಲಿಂಗ್ ವಿಭಾಗದಲ್ಲಿ ತಂಡ ಉತ್ತಮವಾಗಿ ಕಾಣುತ್ತದೆ ಎಂದು ಹೇಳಿದ್ದಾರೆ.
-
- Beat Nepal by 238 runs.
— Johns. (@CricCrazyJohns) September 6, 2023 " class="align-text-top noRightClick twitterSection" data="
- Points shared vs India.
- Qualified into Super 4 as the first team.
- Beat Bangladesh by 7 wickets.
Pakistan is playing some fantastic cricket in Asia Cup 2023. pic.twitter.com/xA22lhDBV4
">- Beat Nepal by 238 runs.
— Johns. (@CricCrazyJohns) September 6, 2023
- Points shared vs India.
- Qualified into Super 4 as the first team.
- Beat Bangladesh by 7 wickets.
Pakistan is playing some fantastic cricket in Asia Cup 2023. pic.twitter.com/xA22lhDBV4- Beat Nepal by 238 runs.
— Johns. (@CricCrazyJohns) September 6, 2023
- Points shared vs India.
- Qualified into Super 4 as the first team.
- Beat Bangladesh by 7 wickets.
Pakistan is playing some fantastic cricket in Asia Cup 2023. pic.twitter.com/xA22lhDBV4
ಪಲ್ಲೆಕೆಲೆಯಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಆ ಪಂದ್ಯದಲ್ಲಿ ಭಾರತ 48.5 ಓವರ್‌ಗಳಲ್ಲಿ 266 ರನ್ ಕಲೆ ಹಾಕಿತ್ತು. ಹಾರ್ದಿಕ್ ಪಾಂಡ್ಯ 90 ಎಸೆತಗಳಲ್ಲಿ 87 ರನ್ ಗಳಿಸಿದರೆ, ಇಶಾನ್ ಕಿಶನ್ 81 ಎಸೆತಗಳಲ್ಲಿ 82 ರನ್ ಗಳಿಸಿ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ್ದರು. ಈ ಪಂದ್ಯದಲ್ಲಿ ಪಾಕ್ ಪರ ವೇಗದ ಬೌಲರ್‌ಗಳಾದ ಶಾಹೀನ್ ಶಾ ಆಫ್ರಿದಿ 4, ನಸೀಮ್ ಶಾ 3, ಮತ್ತು ಹ್ಯಾರಿಸ್ ರೌಫ್ 3 ವಿಕೆಟ್ ಕಬಳಿಸಿದ್ದರು.
ಭಾರತ ಮತ್ತು ಪಾಕಿಸ್ತಾನದ ನಡುವಿನ ಸೂಪರ್ ಫೋರ್ ಪಂದ್ಯ ಕೊಲಂಬೊದ ಆರ್ ಪ್ರೇಮದಾಸ್ ಮೈದಾನದಲ್ಲಿ ಸೆಪ್ಟಂಬರ್ 10ರಂದು ಭಾನುವಾರ ನಡೆಯಲಿದೆ.
ಇದನ್ನೂ ಓದಿ: ಏಷ್ಯಾಕಪ್ನಲ್ಲಿ ಮಿಂಚುತ್ತಿರುವ ಪಾಕ್ ಬೌಲರ್ಸ್: ಆಡಿರುವ ಮೂರು ಪಂದ್ಯಗಳಲ್ಲಿ 23 ವಿಕೆಟ್ ಉರುಳಿಸಿರುವ ವೇಗಿಗಳು