ಮುಂಬೈ: ಕ್ರಿಕೆಟ್ ದೇವರೆಂದೇ ಹೆಸರಾದ ಸಚಿನ್ ತೆಂಡೂಲ್ಕರ್ ಜಗತ್ತಿನಾದ್ಯಂತ ಅಭಿಮಾನಿಗಳು ಹೊಂದಿದ್ದಾರೆ. ಅವರು ಕ್ರಿಕೆಟ್ ಆಡುತ್ತಿದ್ದಾಗ ಮೈದಾನಕ್ಕೆ ನುಗ್ಗಿ ಬಂದು ಅಭಿಮಾನಿಗಳು ಅವರ ಕಾಲಿಗೆ ನಮಸ್ಕರಿಸಿದ್ದನ್ನು ನೋಡಿದ್ದೇವೆ. ಆದರೆ, ಐಪಿಎಲ್ನ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ಖ್ಯಾತ ಮಾಜಿ ಕ್ರಿಕೆಟಿಗರೊಬ್ಬರು ಸಚಿನ್ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ.
ಹೌದು, ಜಗತ್ತಿನ ಅತ್ಯದ್ಭುತ ಫೀಲ್ಡರ್, ಪ್ರಸ್ತುತ ಪಂಜಾಬ್ ಕಿಂಗ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿರುವ ಜಾಂಟಿ ರೋಡ್ಸ್(52) ಅವರೇ ಸಚಿನ್(48) ಕಾಲಿಗೆ ಎರಗಿದವರು. ಪಂಜಾಬ್- ಮುಂಬೈ ಮಧ್ಯೆ ನಡೆದ ಪಂದ್ಯದ ಬಳಿಕ ಆಟಗಾರರು ಪರಸ್ಪರ ಹಸ್ತಲಾಘವ ಮಾಡುತ್ತಿದ್ದಾಗ ಎದುರಾದ ಸಚಿನ್ ಕಾಲಿಗೆ ಜಾಂಟಿ ರೋಡ್ಸ್ ಎರಗಲು ಮುಂದಾಗಿದ್ದಾರೆ. ಈ ವೇಳೆ ಅವರ ಕೈ ಹಿಡಿದ ಸಚಿನ್ ತಡೆಯಲು ಮುಂದಾದರು. ಆದರೂ ಜಾಂಟಿ ರೋಡ್ಸ್ ಬಾಗಿ ಸಚಿನ್ ಕಾಲು ಮುಟ್ಟಿದರು.
-
i missed this last night why is he like this😭 pic.twitter.com/AnlnoyZgOp
— m. (@idyyllliic) April 14, 2022 " class="align-text-top noRightClick twitterSection" data="
">i missed this last night why is he like this😭 pic.twitter.com/AnlnoyZgOp
— m. (@idyyllliic) April 14, 2022i missed this last night why is he like this😭 pic.twitter.com/AnlnoyZgOp
— m. (@idyyllliic) April 14, 2022
ಬಳಿಕ ಸಚಿನ್, ಜಾಂಟಿ ರೋಡ್ಸ್ ಅವರನ್ನು ತಬ್ಬಿಕೊಂಡು ಅಭಿನಂದಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಬ್ಬರು ರನ್ ಶಿಖರ ಕಟ್ಟಿ ಕ್ರಿಕೆಟ್ ದಂತಕತೆಯಾದರೆ, ಇನ್ನೊಬ್ಬರು ಜಗತ್ತಿನ ಅದ್ಭುತ ಫೀಲ್ಡರ್ ಆಗಿ ಗುರುತಿಸಿಕೊಂಡ ಈ ಮಾಜಿ ಕ್ರಿಕೆಟಿಗರ ಅವಿನಾಭಾವ ಸಂಬಂಧವನ್ನು ಕಂಡು ಅಲ್ಲಿದ್ದ ಯುವ ಕ್ರಿಕೆಟಿಗರೇ ಅಚ್ಚರಿಗೊಳಗಾಗಿದ್ದಾರೆ.
ಇನ್ನು ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಕಂಡಿದೆ. ಈ ಋತುವಿನ ಐಪಿಎಲ್ನಲ್ಲಿ ಮುಂಬೈ ತಂಡ ತಾನಾಡಿದ ಐದೂ ಪಂದ್ಯಗಳಲ್ಲಿ ಸೋಲು ಕಂಡು ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಇದನ್ನೂ ಓದಿ: ಸರಣಿ ಸೋಲುಗಳ ಬಳಿಕ ಇಂಗ್ಲೆಂಡ್ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಜೋ ರೂಟ್