ETV Bharat / sports

ಕೌಟುಂಬಿಕ ದೌರ್ಜನ್ಯ: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮೈಕಲ್ ಸ್ಲೇಟರ್ ಬಂಧನ - Domestic Violence case

ಕೌಟುಂಬಿಕ ದೌರ್ಜನ್ಯ ಆರೋಪದ ಮೇಲೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಮಾಜಿ ಆಟಗಾರನನ್ನು ಪೊಲೀಸರು ಬಂಧಿಸಿದ್ದಾರೆ.

ex-cricketer-michael-slater-arrested
ಮಾಜಿ ಕ್ರಿಕೆಟಿಗ ಮೈಕಲ್ ಸ್ಲೇಟರ್
author img

By

Published : Oct 20, 2021, 10:42 AM IST

ಸಿಡ್ನಿ(ಆಸ್ಟ್ರೇಲಿಯಾ): ಆಸಿಸ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೈಕಲ್ ಸ್ಲೇಟರ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಪೊಲೀಸರು ನಿನ್ನೆ ಅವರನ್ನು ಬಂಧಿಸಿದ್ದಾರೆ. ಕಳೆದ ವಾರ ನಡೆದಿದ್ದ ದೌರ್ಜನ್ಯ ಪ್ರಕರಣ ಸಂಬಂಧ ಕ್ರಿಕೆಟಿಗನನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಕ್ಟೋಬರ್‌ 12ರಂದು ನಡೆದಿದೆ ಎನ್ನಲಾದ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ 51 ವರ್ಷದ ಮೈಕಲ್ ಸ್ಲೇಟರ್​ ಬಂಧಿಸಲಾಗಿದೆ ಎಂದು ಸೌತ್ ವೇಲ್ಸ್​ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಸ್ಲೇಟರ್ ಆಸ್ಟ್ರೇಲಿಯಾ ಪರ 5,312 ರನ್ ಸಾಧನೆ ಮಾಡಿದ್ದಾರೆ. 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ವಿದಾಯ ಘೋಷಿಸಿದ್ದರು.

ಇದನ್ನೂ ಓದಿ: ಧೋನಿ ತಂಡದಲ್ಲಿರುವುದನ್ನ ಇಷ್ಟಪಡುತ್ತೇವೆ, ಅವರ ಪ್ರತಿ ಸಲಹೆ ಬಳಸಿಕೊಳ್ಳುತ್ತೇವೆ: ಕೆ. ಎಲ್.​ ರಾಹುಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.