ಎರಡು ಬಾರಿಯ ವಿಶ್ವಕಪ್ ವಿಜೇತ ತಂಡದ ಸದಸ್ಯೆ, ಅದ್ಭುತ ಬೌಲರ್ ಇಂಗ್ಲೆಂಡ್‌ನ 30 ವರ್ಷದ ಮಹಿಳಾ ಕ್ರಿಕೆಟರ್ ಅನ್ಯಾ ಶ್ರುಬ್ಸೋಲ್ ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಅವರು ತಮ್ಮ 14 ವರ್ಷಗಳ ಕ್ರಿಕೆಟ್ ಬದುಕಿನಿಂದ ಹಿಂದೆ ಸರಿದಿದ್ದಾರೆ.
2008 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅನ್ಯಾ ಶ್ರುಬ್ಸೋಲ್ ಇಲ್ಲಿಯವರೆಗೂ ಇಂಗ್ಲೆಂಡ್ ಪರವಾಗಿ ಮೂರೂ ಮಾದರಿಯ ಕ್ರಿಕೆಟ್ನಲ್ಲಿ 173 ಪಂದ್ಯಗಳಾಡಿದ್ದು, 227 ವಿಕೆಟ್ ಪಡೆದಿದ್ದಾರೆ. ಏಕದಿನ ತಂಡದ ಯಶಸ್ವಿ ಬೌಲರ್ ಆಗಿದ್ದ ಅನ್ಯಾ ಇಂಗ್ಲೆಂಡ್‌ನ ನಾಲ್ಕನೇ ಅತಿಹೆಚ್ಚು ವಿಕೆಟ್ ಟೇಕರ್ ಆಗಿದ್ದಾರೆ.
-
England superstar Anya Shrubsole has announced her retirement from international cricket.
— ICC (@ICC) April 14, 2022 " class="align-text-top noRightClick twitterSection" data="
Details 👇
">England superstar Anya Shrubsole has announced her retirement from international cricket.
— ICC (@ICC) April 14, 2022
Details 👇England superstar Anya Shrubsole has announced her retirement from international cricket.
— ICC (@ICC) April 14, 2022
Details 👇
2017 ರ ವಿಶ್ವಕಪ್ ಹೀರೋ: ಎರಡು ಬಾರಿಯ ಆ್ಯಶಸ್ ವಿಜೇತ ತಂಡದ ಸದಸ್ಯರಾಗಿದ್ದ ಅನ್ಯಾ ಶ್ರುಬ್ಸೋಲ್ ತವರು ನೆಲದಲ್ಲಿ 2017 ರಲ್ಲಿ ನಡೆದಿದ್ದ ವಿಶ್ವಕಪ್ನ ಹೀರೋ ಆಗಿದ್ದರು. ಭಾರತ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಅನ್ಯಾ ದಾಖಲೆಯ 6 ವಿಕೆಟ್‌ಗಳನ್ನು ಪಡೆದು ತಂಡದ ಜಯಕ್ಕೆ ಕಾರಣರಾಗಿದ್ದರು. ಅಲ್ಲದೇ ಇದು ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಸ್ಮರಣೀಯ ಪ್ರದರ್ಶನವಾಗಿದೆ.
ಇನ್ನು ಕಳೆದ ತಿಂಗಳು ನ್ಯೂಜಿಲ್ಯಾಂಡ್ನಲ್ಲಿ ನಡೆದ ವಿಶ್ವಕಪ್ನ ಫೈನಲ್ ಪಂದ್ಯ ಅನ್ಯಾರ ಕೊನೆ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಸೋಲು ಕಂಡು ವಿಶ್ವಕಪ್ ಕೈ ಚೆಲ್ಲಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ಬೈ ಹೇಳಿದ ಅನ್ಯಾ ಶ್ರುಬ್ಸೋಲ್ ದೇಶೀಯ ಟೂರ್ನಿಗಳಾದ ರಾಚೆಲ್ ಹೇಹೋ ಫ್ಲಿಂಟ್ ಟ್ರೋಫಿ, ಚಾರ್ಲೆಟ್ ಎಡ್ವರ್ಡ್ಸ್ ಕಪ್ ಮತ್ತು ದಿ ಹಂಡ್ರೆಡ್‌ನಲ್ಲಿ ಆಡುವುದನ್ನು ಮುಂದುವರಿಸಲಿದ್ದೇನೆ ಎಂದಿದ್ದಾರೆ.
ಕಳೆದ 14 ವರ್ಷಗಳಿಂದ ನನ್ನ ದೇಶವನ್ನು ಪ್ರತಿನಿಧಿಸಲು ಸಾಧ್ಯವಾಗಿರುವುದು ನನಗೆ ಅಪಾರ ಅಭಿಮಾನವಿದೆ ಎಂದು ಅನ್ಯಾ ಶ್ರುಬ್ಸೋಲ್ ವಿದಾಯ ಭಾಷಣದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ನೋಡಿ: ವಯಸ್ಸಲ್ಲಿ ಹಿರಿಯನಾದ್ರೂ 'ಕ್ರಿಕೆಟ್ ದೇವರ' ಪಾದಮುಟ್ಟಿ ನಮಿಸಿದ ಶ್ರೇಷ್ಠ ಕ್ರಿಕೆಟಿಗ!