ಲಂಡನ್: ಭಾರತದಲ್ಲಿ ನಡೆಯಲಿರುವ ವಿಶ್ವಕಪ್ಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಆಂಗ್ಲರ ಪ್ರಮುಖ ವೇಗಿ ಜೋಫ್ರಾ ಆರ್ಚರ್ ಮೀಸಲು ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಗಾಯದಿಂದಾಗಿ ವರ್ಷಗಳ ಕಾಲ ಹೊರಗಿದ್ದ ಅವರು ವಿಶ್ವಕಪ್ ವೇಳೆ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಿಂದ ಅವರನ್ನು 15 ಜನರ ತಂಡದ ಬದಲಾಗಿ ಮೀಸಲು ಆಟಗಾರನಾಗಿ ಪ್ರಕಟಿಸಲಾಗಿದೆ.
ಇಂದು (ಸೋಮವಾರ) ಇಂಗ್ಲೆಂಡ್‌ನ ರಾಷ್ಟ್ರೀಯ ತಂಡದ ಆಯ್ಕೆಗಾರ ಲ್ಯೂಕ್ ರೈಟ್ 28 ವರ್ಷದ ವೇಗಿ ಆರ್ಚರ್ ತಂಡದೊಂದಿಗೆ ಮೀಸಲು ಆಟಗಾರನಾಗಿ ಪ್ರಯಾಣಿಸಲಿದ್ದಾರೆ ಎಂದು ದೃಢಪಡಿಸಿದ್ದಾರೆ. "ಜೋಫ್ರಾ ಆರ್ಚರ್ ಭಾರತಕ್ಕೆ ತಂಡದೊಂದಿಗೆ ಪ್ರಯಾಣಿಸಲಿದ್ದಾರೆ. ಅವರು ಮೀಸಲುಗಳಲ್ಲಿ ಒಬ್ಬರು ಆದರೆ ನಾವು ಅವರನ್ನು ನೋಡಿಕೊಳ್ಳಬೇಕು, ಅವರ ಪುನರ್ವಸತಿ ಬಗ್ಗೆ ಗಮನಹರಿಸಬೇಕು" ಎಂದು ಸ್ಪಷ್ಟಪಡಿಸಿದ್ದಾರೆ.
-
Harry Brook is IN!
— ICC (@ICC) September 18, 2023 " class="align-text-top noRightClick twitterSection" data="
England's final @cricketworldcup squad 📝
More 👉 https://t.co/wxyjfP2Pbw pic.twitter.com/8XyIogsw61
">Harry Brook is IN!
— ICC (@ICC) September 18, 2023
England's final @cricketworldcup squad 📝
More 👉 https://t.co/wxyjfP2Pbw pic.twitter.com/8XyIogsw61Harry Brook is IN!
— ICC (@ICC) September 18, 2023
England's final @cricketworldcup squad 📝
More 👉 https://t.co/wxyjfP2Pbw pic.twitter.com/8XyIogsw61
ಆಂಗ್ಲ ಬಳಗದಲ್ಲಿ ಇನ್ನೊಂದು ಪ್ರಮುಖ ಬದಲಾವಣೆ ಎಂದರೆ ಯುವ ಆಟಗಾರ ಹ್ಯಾರಿ ಬ್ರೂಕ್ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವುದು. ವಿಶ್ವಕಪ್ ತಯಾರಿಗಾಗಿ ನ್ಯೂಜಿಲೆಂಡ್ ವಿರುದ್ಧ ನಡೆದ ನಾಲ್ಕು ಪಂದ್ಯಗಳ ಏಕದಿನ ಸರಣಿಯ ವೇಳೆ ಜೇಸನ್ ರಾಯ್ ಬೆನ್ನು ನೋವಿನ ಕಾರಣ ತಂಡದಿಂದ ಹೊರಗುಳಿದಿದ್ದರು. ಈ ವೇಳೆ ಹ್ಯಾರಿ ಬ್ರೂಕ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ನ್ಯೂಜಿಲೆಂಡ್ ವಿರುದ್ಧ ಮೂರು ಇನ್ನಿಂಗ್ಸ್ನಿಂದ ಕೇವಲ 37 ರನ್ ಕಲೆ ಹಾಕಿದ್ದರು. ಆದರು ಅವರ ಹಳೆಯ ಪ್ರದರ್ಶನವನ್ನು ಪರಿಗಣಿಸಿ ತಂಡದಲ್ಲಿ ಸ್ಥಾನ ನೀಡಲಾಗಿದೆ.
ವಿಶ್ವಕಪ್ ಹಿನ್ನೆಲೆಯಲ್ಲಿ ನಾಯಕ ಬಟ್ಲರ್ ಒತ್ತಾಯದ ಮೇರೆಗೆ ನಿವೃತ್ತಿಯನ್ನು ಹಿಂಪಡೆದು ತಂಡಕ್ಕೆ ಮರಳಿದ ಬೆನ್ ಸ್ಟೋಕ್ಸ್ ನ್ಯೂಜಿಲೆಂಡ್ ವಿರುದ್ಧ 124 ಎಸೆತಗಳಲ್ಲಿ 182 ರನ್ ಗಳಿಸಿದ್ದರು. ಈ ಮೂಲಕ ಏಕದಿನ ವಿಶ್ವಕಪ್ಗೂ ಮುನ್ನ ಬೆಸ್ಟ್ ಕಮ್ಬ್ಯಾಕ್ ಮಾಡಿದರು. 182 ಏಕದಿನದಲ್ಲಿ ಇಂಗ್ಲೆಂಡ್ ಪುರುಷರ ಆಟಗಾರನೊಬ್ಬನ ಗರಿಷ್ಠ ಸ್ಕೋರ್ ಆಗಿದೆ. ಡೇವಿಡ್ ಮಲಾನ್ ಸಹ ನ್ಯೂಜಿಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನಿಡಿದರು. ನ್ಯೂಜಿಲೆಂಡ್ ಸರಣಿಯಲ್ಲಿ ಕೇವಲ ಒಂದು ಪಂದ್ಯವನ್ನಾಡಿದ್ದ ಸ್ಪಿನ್ನರ್ ಆದಿಲ್ ರಶೀದ್ ಕೂಡ ತಂಡದಲ್ಲಿ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆ್ಯಶಸ್ ಸರಣಿಯಿಂದ ಚೇತರಿಸಿಕೊಂಡ ಸೀಮರ್ ಮಾರ್ಕ್ ವುಡ್ ತಂಡಕ್ಕೆ ಮರಳಿದ್ದಾರೆ.
ವಿಶ್ವಕಪ್‌ಗಾಗಿ ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋ, ಸ್ಯಾಮ್ ಕರ್ರಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್. (ಎಎನ್ಐ)
ಇದನ್ನೂ ಓದಿ: ಆಸ್ಟ್ರೇಲಿಯಾ ಸರಣಿಗೆ ಇಂದು ಪ್ರಕಟಗೊಳ್ಳಲಿದೆ ತಂಡ.. ವಿರಾಟ್, ಸಿರಾಜ್, ಬುಮ್ರಾ, ಶಮಿಗೆ ವಿಶ್ರಾಂತಿ?