ಓವಲ್(ಇಂಗ್ಲೆಂಡ್) : ಕ್ರಿಕೆಟ್ ಅಭಿಮಾನಿ ಜಾರ್ವೋ ಮತ್ತೊಮ್ಮೆ ಕ್ರೀಡಾಂಗಣಕ್ಕೆ ಎಂಟ್ರಿ ಕೊಟ್ಟಿದ್ದಾನೆ. ಭಾರತ-ಇಂಗ್ಲೆಂಡ್ ನಡುವೆ ನಡೆಯುತ್ತಿರುವ 4ನೇ ಟೆಸ್ಟ್ನ ಎರಡನೇ ದಿನದಾಟದಲ್ಲಿ ಈ ಬಾರಿ ಮೈದಾನಕ್ಕೆ ಬಂದ ಜಾರ್ವೋ ಬೌಲಿಂಗ್ ಮಾಡಲು ಮುಂದಾಗಿದ್ದಾನೆ.
ಭಾರತದ ಜರ್ಸಿ ಧರಿಸಿ ಮೈದಾನ ಪ್ರವೇಶಿಸಿದ ಜಾರ್ವೋ ಇಂಗ್ಲೆಂಡ್ ಬ್ಯಾಟ್ಸ್ಮನ್ ಬೈರ್ಸ್ಟೋಗೆ ಡಿಕ್ಕಿ ಹೊಡೆದಿದ್ದಾನೆ. ಈ ರೀತಿ ಜಾರ್ವೋ ಮೈದಾನಕ್ಕೆ ಇಳಿದಿರುವುದು ಮೂರನೇ ಬಾರಿಯಾಗಿದೆ. ಇದರಿಂದಾಗಿ ಮತ್ತೆ 'ಜಾರ್ವೋ 69' ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ.
-
Unique action but effective. pic.twitter.com/pYyocOCrD4
— Dennis Jarvo (@DennisCricket_) September 3, 2021 " class="align-text-top noRightClick twitterSection" data="
">Unique action but effective. pic.twitter.com/pYyocOCrD4
— Dennis Jarvo (@DennisCricket_) September 3, 2021Unique action but effective. pic.twitter.com/pYyocOCrD4
— Dennis Jarvo (@DennisCricket_) September 3, 2021
ಇದಕ್ಕೂ ಮೊದಲು ಲಾರ್ಡ್ಸ್ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ರೋಹಿತ್ ಶರ್ಮಾ ಔಟಾದಾಗ, ಜಾರ್ವೋ ಬ್ಯಾಟಿಂಗ್ ಸಮವಸ್ತ್ರ ಧರಿಸಿ ಕ್ರೀಡಾಂಗಣಕ್ಕೆ ಪ್ರವೇಶ ಮಾಡಿದ್ದನು. ಟೀಂ ಇಂಡಿಯಾ ಫೀಲ್ಡಿಂಗ್ ಮಾಡುತ್ತಿದ್ದ ವೇಳೆಯೂ ಒಮ್ಮೆ ಜಾರ್ವೋ ಫೀಲ್ಡಿಗೆ ಎಂಟ್ರಿ ಕೊಟ್ಟಿದ್ದನು.
ಈಗ ಓವಲ್ ಟೆಸ್ಟ್‌ನಲ್ಲೂ ಉಮೇಶ್ ಯಾದವ್ 34ನೇ ಓವರ್ ಮಾಡುತ್ತಿದ್ದಾಗ, ಜಾರ್ವೋ ಚೆಂಡು ಹಿಡಿದು ಮೈದಾನದಲ್ಲಿ ಓಡುತ್ತಿರುವುದು ಕಂಡು ಬಂತು. ಜಾರ್ವೋ ವೇಗವಾಗಿ ಓಡಿ ಬಂದು ಬೌಲ್ ಮಾಡಿದ್ದಾರೆ. ಇದಷ್ಟೇ ಅಲ್ಲದೇ ಬೇರ್ಸ್ಟೋಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಉಮೇಶ್ ಯಾದವ್ ಓವರ್ ಮುಗಿಸುವುದು ವಿಳಂಬವಾಗಿದೆ.
69 ನಂಬರ್ ಭಾರತೀಯ ಜರ್ಸಿಯನ್ನು ತೊಟ್ಟು ಲಾರ್ಡ್ಸ್ ಟೆಸ್ಟ್ ವೇಳೆ ಮೈದಾನಕ್ಕೆ ಆಗಮಿಸಿದ್ದ ಜಾರ್ವೋ ಎಲ್ಲರ ಹುಬ್ಬೇರುವಂತೆ ಮಾಡಿದ್ದ. ನಂತರ 3ನೇ ಟೆಸ್ಟ್ ವೇಳೆ ಬ್ಯಾಟ್ ಹಿಡಿದು ಮೈದಾನಕ್ಕೆ ಆಗಮಿಸಿದ್ದರಿಂದ ಯಾರ್ಕ್ಷೈರ್ ಕ್ರಿಕೆಟ್ ಕ್ಲಬ್ ಭದ್ರತಾ ಉಲ್ಲಂಘನೆಯ ಪ್ರಕರಣ ದಾಖಲಿಸಿದ್ದು, ಆತನಗೆ ಲೀಡ್ಸ್ ಕ್ರೀಡಾಂಗಣದಿಂದ ಅಜೀವ ನಿಷೇಧ ಏರಿದೆ ಮತ್ತು ದೊಡ್ಡ ಪ್ರಮಾಣದ ದಂಡವನ್ನು ವಿಧಿಸಿದೆ.
ಇದನ್ನೂ ಓದಿ: Eng vs Ind Test: 90 ರನ್ ಮುನ್ನಡೆ ಪಡೆದು ಇಂಗ್ಲೆಂಡ್ ಆಲೌಟ್; ರೋಹಿತ್-ರಾಹುಲ್ ತಾಳ್ಮೆಯ ಆಟ