ಅಹಮದಾಬಾದ್: ಇತ್ತೀಚಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಆಟಗಾರರ ಹರಾಜಿನಲ್ಲಿ ತಾವು ಮಾರಾಟವಾಗದಿರುವುದು ಅನಿರೀಕ್ಷಿತವಲ್ಲ ಎಂದು ಇಂಗ್ಲಿಷ್ ಸ್ಪಿನ್ನರ್ ಆದಿಲ್ ರಶೀದ್ ಹೇಳಿದ್ದಾರೆ.
"ನಾನು ನಿರಾಶಾದಾಯಕ ಎಂದು ಹೇಳುವುದಿಲ್ಲ, ನಿಸ್ಸಂಶಯವಾಗಿ ಅಲ್ಲಿ ಸಾಕಷ್ಟು ಸ್ಪಿನ್ನರ್‌ಗಳು ಇದ್ದಾರೆ, ಭಾರತಕ್ಕೂ ತಮ್ಮದೇ ಆದ ಸ್ಥಳೀಯ ಸ್ಪಿನ್ನರ್‌ಗಳು ಸಿಕ್ಕಿದ್ದಾರೆ, ಹಾಗಾಗಿ ನನ್ನನ್ನು ಆರಿಸಿಕೊಳ್ಳಬೇಕೆಂದು ನಾನು ನಿಜವಾಗಿಯೂ ನಿರೀಕ್ಷಿಸಿರಲಿಲ್ಲ" ಎಂದು ಎರಡನೇ ಟಿ 20 ಅಂತರರಾಷ್ಟ್ರೀಯ ಮುನ್ನಾ ದಿನದಂದು ರಶೀದ್ ಹೇಳಿದ್ದಾರೆ.
ರಶೀದ್ ಇತ್ತೀಚಿನ ವರ್ಷಗಳಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ಗಾಗಿ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಆದರೆ, ಅವರ ಯೋಗ್ಯ ಪ್ರದರ್ಶನದ ಹೊರತಾಗಿಯೂ, 33 ವರ್ಷದ ಈ ಆಟಗಾರ ಐಪಿಎಲ್ ಪ್ರಾಂಚೈಸಿಗಳ ಗಮನ ಸೆಳೆಯಲು ಸಾಧ್ಯವಾಗಿಲ್ಲ.
ಓದಿ : 2022 ರಿಂದ ಐಪಿಎಲ್ನಲ್ಲಿ 10 ತಂಡಗಳು ಭಾಗಿ
ಭಾರತ ವಿರುದ್ಧದ ಐದು ಪಂದ್ಯಗಳ ಟಿ- 20 ಸರಣಿಯ ಮೊದಲ ಪಂದ್ಯದಲ್ಲಿ ರಶೀದ್ 1 ವಿಕೆಟ್ ಪಡೆದು ಮಿಂಚಿದ್ದರು. ಪ್ರಸ್ತುತ ಟಿ- 20 ಸರಣಿಯಲ್ಲಿ ಇಂಗ್ಲೆಂಡ್ ತಂಡ 1-0 ದಿಂದ ಮುನ್ನಡೆ ಸಾಧಿಸಿದೆ.