ದುಬೈ: ಐಸಿಸಿ ಟಿ-20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಕೊಹ್ಲಿ ಪಡೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೋಲು ಕಂಡಿದೆ. ಈ ಮೂಲಕ ವಿಶ್ವಕಪ್ನಲ್ಲಿ 29 ವರ್ಷಗಳ ನಂತರ ಭಾರತದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ.
ದುಬೈನಲ್ಲಿ ನಡೆದ ಪಂದ್ಯದಲ್ಲಿ 10 ವಿಕೆಟ್ಗಳ ಸೋಲು ಕಂಡಿರುವ ಕೊಹ್ಲಿ ಪಡೆ, ಮುಂದಿನ ಪಂದ್ಯಕ್ಕಾಗಿ ಹೊಸ ತಂತ್ರದೊಂದಿಗೆ ಕಣಕ್ಕಿಳಿದು, ಕಮ್ಬ್ಯಾಕ್ ಮಾಡುವ ಇರಾದೆಯಲ್ಲಿದೆ. ಪಾಕ್ ವಿರುದ್ಧದ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ವಿರಾಟ್, ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡಿರುವುದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿತು ಎಂದರು. ಪಾಕಿಸ್ತಾನ ತಂಡವನ್ನ ಒತ್ತಡಕ್ಕೆ ಸಿಲುಕಿಸುವಲ್ಲಿ ಯಾವುದೇ ರೀತಿಯಲ್ಲೂ ನಮಗೆ ಆಸ್ಪಂದ ನೀಡಲಿಲ್ಲ ಎಂದು ಟೀಂ ಇಂಡಿಯಾ ಕ್ಯಾಪ್ಟನ್ ತಿಳಿಸಿದರು.
-
Kohli said "Will you drop Rohit Sharma from T20 team, unbelievable". #IndvsPak pic.twitter.com/kHcrh0Gbja
— Naveen MB Vizag (@MbVizag) October 24, 2021 " class="align-text-top noRightClick twitterSection" data="
">Kohli said "Will you drop Rohit Sharma from T20 team, unbelievable". #IndvsPak pic.twitter.com/kHcrh0Gbja
— Naveen MB Vizag (@MbVizag) October 24, 2021Kohli said "Will you drop Rohit Sharma from T20 team, unbelievable". #IndvsPak pic.twitter.com/kHcrh0Gbja
— Naveen MB Vizag (@MbVizag) October 24, 2021
ಇದನ್ನೂ ಓದಿರಿ: ಸೋತರೂ, ವಿಶ್ವಕಪ್ನಲ್ಲಿ ವಿಶ್ವ ದಾಖಲೆ ಬರೆದ ವಿರಾಟ್... ಗೇಲ್ ರೆಕಾರ್ಡ್ ಬ್ರೇಕ್
ಪಾಕ್ ಪತ್ರಕರ್ತನ ವಿಚಿತ್ರ ಪ್ರಶ್ನೆ
ಸುದ್ದಿಗೋಷ್ಠಿಯಲ್ಲಿ ವಿರಾಟ್ ಭಾಗಿಯಾಗಿದ್ದ ವೇಳೆ ಪಾಕಿಸ್ತಾನದ ಪತ್ರಕರ್ತನೋರ್ವ, ರೋಹಿತ್ ಶರ್ಮಾ ಅವರನ್ನ ಕೈಬಿಡುತ್ತೀರಾ? ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ವಿರಾಟ್ ತೀಕ್ಷ್ಣವಾಗಿ ತಿರುಗೇಟು ನೀಡಿದರು.
ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಅಭ್ಯಾಸ ಪಂದ್ಯಗಳಲ್ಲಿ ಇಶಾನ್ ಕಿಶನ್ ಉತ್ತಮವಾಗಿ ಆಡಿದ್ದರು. ಆಡುವ 11ರ ಬಳಗದಲ್ಲಿ ರೋಹಿತ್ ಶರ್ಮಾ ಅವರನ್ನ ಸೇರಿಸಿಕೊಳ್ಳುವ ಮೂಲಕ ತಂಡ ತಪ್ಪು ಮಾಡಿದೆಯೆ? ಎಂದು ಪಾಕ್ ಪತ್ರಕರ್ತ ಪ್ರಶ್ನೆ ಕೇಳುತ್ತಿದ್ದಂತೆ ತಮ್ಮ ತಾಳ್ಮೆ ಕಳೆದುಕೊಳ್ಳದ ವಿರಾಟ್, ನಗುಮುಖದಿಂದಲೇ ನಂಬಲು ಅಸಾಧ್ಯ. ನೀವೂ ಧೈರ್ಯಶಾಲಿ ಎಂದು ನಕ್ಕರು. ಆ ಪ್ರಶ್ನೆಯನ್ನ ಮತ್ತೊಮ್ಮೆ ಪತ್ರಕರ್ತನ ಬಳಿ ಕೇಳಿ, ನೀವೂ ಏನು ಯೋಚಿಸುತ್ತೀರಿ ಸರ್? ನನ್ನ ಪ್ರಕಾರ ಇದು ಬಲಿಷ್ಠವಾದ ತಂಡ. ಹಿಂದಿನ ಪಂದ್ಯಗಳಲ್ಲಿ ಅವರು ಹೇಗೆ ಆಡಿದ್ದಾರೆ ಎಂಬುದನ್ನ ನೋಡಿಲ್ಲವೆ? ವಿವಾದಾತ್ಮಕ ಪ್ರಶ್ನೆ ಕೇಳುವುದಕ್ಕೂ ಮುಂಚಿತವಾಗಿ ಸಂಪರ್ಕಿಸಿ, ನಾನು ಎಲ್ಲದಕ್ಕೂ ಸಿದ್ಧನಾಗಿ ಬರುತ್ತೇನೆ ಎಂದು ಹಾಸ್ಯಚಟಾಕಿ ಹಾರಿಸಿದರು.