ಚೆನ್ನೈ: ಇಂಗ್ಲೆಂಡ್ ತಂಡ ಪ್ರಸ್ತುತ ಭಾರತ ಪ್ರವಾಸದಲ್ಲಿದ್ದು, ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ. ಇಂಗ್ಲೆಂಡ್ ತಂಡದ ನಾಯಕನಿಗೆ ಇದು ನೂರನೇ ಟೆಸ್ಟ್ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ಜೋ ರೂಟ್ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಜೋ ರೂಟ್ ವಿಶೇಷ ದಾಖಲೆ ಬರೆದಿದ್ದಾರೆ.
-
GREATNESS.
— England Cricket (@englandcricket) February 6, 2021 " class="align-text-top noRightClick twitterSection" data="
Scorecard: https://t.co/Gczmsuw2oJ#INDvENG #R100T pic.twitter.com/A0EUchFwbJ
">GREATNESS.
— England Cricket (@englandcricket) February 6, 2021
Scorecard: https://t.co/Gczmsuw2oJ#INDvENG #R100T pic.twitter.com/A0EUchFwbJGREATNESS.
— England Cricket (@englandcricket) February 6, 2021
Scorecard: https://t.co/Gczmsuw2oJ#INDvENG #R100T pic.twitter.com/A0EUchFwbJ
ಜೋ ರೂಟ್, ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ 100ನೇ ಪಂದ್ಯದಲ್ಲಿ ಅಮೋಘ ದ್ವಿಶತಕ ಸಾಧನೆ ಮಾಡಿದ್ದಾರೆ. ಒಟ್ಟಾರೆ ಟೆಸ್ಟ್ ಕ್ರಿಕೆಟ್‌ನಲ್ಲಿ 5ನೇ ದ್ವಿಶತಕ ಬಾರಿಸಿದ್ದಾರೆ. ಭಾರತ ವಿರುದ್ಧ ಭಾರತದ ನೆಲದಲ್ಲೇ ಟೆಸ್ಟ್ ಕ್ರಿಕೆಟ್ಗೆ ಕಾಲಿಟ್ಟಿದ್ದ ರೂಟ್, ಈಗ ಭಾರತದಲ್ಲೇ ತಮ್ಮ ವೃತ್ತಿ ಜೀವನದ 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಾಧನೆ ಮಾಡಿದ್ದಾರೆ. ಈ ಮೂಲಕ 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ.
-
The first cricketer ever to score a double century in his 100th Test match! 💯💯
— England Cricket (@englandcricket) February 6, 2021 " class="align-text-top noRightClick twitterSection" data="
Scorecard: https://t.co/dS83GpOl0T#INDvENG #R100T pic.twitter.com/B0m2gGNpc3
">The first cricketer ever to score a double century in his 100th Test match! 💯💯
— England Cricket (@englandcricket) February 6, 2021
Scorecard: https://t.co/dS83GpOl0T#INDvENG #R100T pic.twitter.com/B0m2gGNpc3The first cricketer ever to score a double century in his 100th Test match! 💯💯
— England Cricket (@englandcricket) February 6, 2021
Scorecard: https://t.co/dS83GpOl0T#INDvENG #R100T pic.twitter.com/B0m2gGNpc3
ಮೊದಲ ದಿನದಾಟದಲ್ಲೇ ಶತಕ ಸಾಧನೆ ಮಾಡಿರುವ ರೂಟ್, ಮತ್ತದೇ ಅಮೋಘ ಲಯವನ್ನು ಮುಂದುವರಿಸಿ ಎರಡನೇ ದಿನ ವಿರಾಮದ ವೇಳೆಗೆ 150 ರನ್ಗಳ ಗಡಿ ದಾಟಿದ್ದ ರೂಟ್ ಈಗ ದ್ವಿಶತಕ ಸಿಡಿಸಿದ್ದಾರೆ.
-
Just Joe from Yorkshire living his dream ❤️
— England Cricket (@englandcricket) February 6, 2021 " class="align-text-top noRightClick twitterSection" data="
Scorecard: https://t.co/dPbGFoBkTr#INDvENG #R100T pic.twitter.com/oxosxs7tYT
">Just Joe from Yorkshire living his dream ❤️
— England Cricket (@englandcricket) February 6, 2021
Scorecard: https://t.co/dPbGFoBkTr#INDvENG #R100T pic.twitter.com/oxosxs7tYTJust Joe from Yorkshire living his dream ❤️
— England Cricket (@englandcricket) February 6, 2021
Scorecard: https://t.co/dPbGFoBkTr#INDvENG #R100T pic.twitter.com/oxosxs7tYT
ಅಶ್ವಿನ್ ಬೌಲಿಂಗ್ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಜೋ ರೂಟ್ ದ್ವಿಶತಕವನ್ನು ಬಾರಿಸಿದರು. ಈ ಮೂಲಕ ಸಿಕ್ಸರ್ ಮೂಲಕ ದ್ವಿಶತಕ ತಲುಪಿದ ಇಂಗ್ಲೆಂಡ್‌ನ ಮೊದಲ ಬ್ಯಾಟ್ಸ್‌ಮನ್ ಎಂಬ ಹೇಗ್ಗಳಿಕೆಗೂ ಪಾತ್ರರಾದರು.
ಓದಿ : ಟೆಸ್ಟ್ ಕ್ರಿಕೆಟ್‌ನಲ್ಲಿ ಜೋ ನಡೆದಿದ್ದೇ 'ರೂಟ್' : ವಿಶೇಷ ದಾಖಲೆ ಬರೆದ ಇಂಗ್ಲೆಂಡ್ ಕ್ಯಾಪ್ಟನ್
ಕಳೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ರೂಟ್ ತಮ್ಮ ಬ್ಯಾಟ್‌ನಿಂದ ಎರಡನೇ ದ್ವಿಶತಕ ಸಿಡಿಸಿ ಸಾಧನೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧ ನಡೆದ ಸರಣಿಯಲ್ಲೂ ಡಬಲ್ ಸೆಂಚುರಿ ಬಾರಿಸಿದ್ದರು.
ಈ ಮೊದಲು 98,99 ಹಾಗೂ 100ನೇ ಟೆಸ್ಟ್ ಪಂದ್ಯಗಳಲ್ಲಿ ಶತಕ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದರು.