ಪುಣೆ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ್ದ ಟೀಂ ಇಂಡಿಯಾ, ಎರಡನೇ ಪಂದ್ಯದಲ್ಲಿ ಮುಗ್ಗರಿಸಿತ್ತು. ಮೂರು ಪಂದ್ಯಗಳ ಸರಣಿಯಲ್ಲಿ 1-1 ರಿಂದ ಸಮಬಲವಾಗಿದ್ದು, ಇಂದು ಅಂತಿಮ ಪಂದ್ಯಕ್ಕೆ ಅಖಾಡ ಸಿದ್ಧವಾಗಿದೆ.
-
England win toss and choose to bowl in the final ODI 🏏
— ICC (@ICC) March 28, 2021 " class="align-text-top noRightClick twitterSection" data="
What target will India set for them?#INDvENG pic.twitter.com/n1PsQD9dBY
">England win toss and choose to bowl in the final ODI 🏏
— ICC (@ICC) March 28, 2021
What target will India set for them?#INDvENG pic.twitter.com/n1PsQD9dBYEngland win toss and choose to bowl in the final ODI 🏏
— ICC (@ICC) March 28, 2021
What target will India set for them?#INDvENG pic.twitter.com/n1PsQD9dBY
ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕಮ್ಬ್ಯಾಕ್ ಮಾಡಿ ಗೆಲುವು ಸಾಧಿಸುವ ಮೂಲಕ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದ್ದರೆ, ಆಂಗ್ಲರ ತಂಡ ಒಂದು ಸರಣಿಯನ್ನಾದರೂ ಉಳಿಸಿಕೊಳ್ಳಲು ಸಜ್ಜಾಗಿದೆ.
ಇಂದು 3ನೇ ಪಂದ್ಯ ಆರಂಭವಾಗಿದ್ದು, ಮಹಾರಾಷ್ಟ್ರದ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಈಗಾಗಲೇ ವಿರಾಟ್ ಕೊಹ್ಲಿ ನಾಯಕತ್ವದ ಭಾರತೀಯತಂಡ ಟೆಸ್ಟ್ ಹಾಗೂ ಟಿ-20 ಸರಣಿ ಗೆದ್ದು ಬೀಗಿದ್ದು, ಏಕದಿನ ಸರಣಿ ಗೆಲ್ಲುವ ಉತ್ಸುಕತೆಯಲ್ಲಿದೆ.
ಇದನ್ನೂ ಓದಿ: ಇಂಡೋ-ಆಂಗ್ಲ ಫೈನಲ್ ಕದನ: ಪಂದ್ಯ ಗೆದ್ದು, ಹ್ಯಾಟ್ರಿಕ್ ಸರಣಿ ಗೆಲ್ಲುವ ತವಕದಲ್ಲಿ ಕೊಹ್ಲಿ ಪಡೆ!
ಭಾರತ ತಂಡ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಶಿಖರ್ ಧವನ್, ರಿಷಭ್ ಪಂತ್, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಕೆ.ಎಲ್. ರಾಹುಲ್, (ವಿಕೆಟ್ ಕೀಪರ್), ಪ್ರಸಿದ್ಧ್ ಕೃಷ್ಣ, ಟಿ. ನಟರಾಜನ್, ಶಾರ್ದುಲ್ ಠಾಕೂರ್, ಭುವನೇಶ್ವರ್ ಕುಮಾರ್.
ಇಂಗ್ಲೆಂಡ್ ತಂಡ:
ಜೋಸ್ ಬಟ್ಲರ್ (ನಾಯಕ), ಮೋಯಿನ್ ಅಲಿ, ಜಾನಿ ಬೈರ್‌ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಸ್ಯಾಮ್ ಕರ್ರನ್, ಮಾರ್ಕ್ ವುಡ್, ಆದಿಲ್ ರಶೀದ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲೆ, ಲಿಯಾಮ್ ಲಿವಿಂಗ್ಸ್ಟೋನ್.