ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ 365 ರನ್ಗಳಿಗೆ ಆಲೌಟ್ ಆಗಿದೆ.
89 ರನ್ಗಳ ಮುನ್ನಡೆ ಪಡೆದುಕೊಂಡ ಭಾರತ ಮೂರನೇ ದಿನ ಬ್ಯಾಟಿಂಗ್ ಆರಂಭಿಸಿತ್ತು. ನಿನ್ನೆ ಕ್ರೀಸ್ನಲ್ಲಿದ್ದ ಸುಂದರ್ ಹಾಗೂ ಅಕ್ಸರ್ ಪಟೇಲ್ ಇಂದು ತಮ್ಮ ಆಟ ಮುಂದುವರೆಸಿದರು. ನಿನ್ನೆ 6 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡ ಇಂದು 4 ವಿಕೆಟ್ ಕಳೆದುಕೊಂಡು 71 ರನ್ ಗಳಿಸಿತು. ಟೀಮ್ ಇಂಡಿಯಾ ಪರ ವಾಷಿಂಗ್ಟನ್ ಸುಂದರ್ 96* ರನ್ಗಳಿಸಿದರೆ, ಅಕ್ಸರ್ ಪಟೇಲ್ 43 ರನ್ಗಳಿಸಿ ಮಿಂಚಿದರು. ಇನ್ನುಳಿದಂತೆ ಇಶಾಂತ್ ಶರ್ಮಾ ಹಾಗೂ ಸಿರಾಜ್ ಶ್ಯೂನ್ಯಕ್ಕೆ ಔಟಾದರು. ಕೊನೆಯದಾಗಿ ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ 365 ರನ್ಗಳಿಗೆ ಆಲೌಟ್ ಆಯಿತು.
-
INNINGS BREAK#TeamIndia all out 365, secure a 160-run lead in the 4⃣th @Paytm #INDvENG Test! @RishabhPant17 1⃣0⃣1⃣@Sundarwashi5 9⃣6⃣*
— BCCI (@BCCI) March 6, 2021 " class="align-text-top noRightClick twitterSection" data="
Follow the match 👉 https://t.co/9KnAXjaKfb pic.twitter.com/CNcVedSZAo
">INNINGS BREAK#TeamIndia all out 365, secure a 160-run lead in the 4⃣th @Paytm #INDvENG Test! @RishabhPant17 1⃣0⃣1⃣@Sundarwashi5 9⃣6⃣*
— BCCI (@BCCI) March 6, 2021
Follow the match 👉 https://t.co/9KnAXjaKfb pic.twitter.com/CNcVedSZAoINNINGS BREAK#TeamIndia all out 365, secure a 160-run lead in the 4⃣th @Paytm #INDvENG Test! @RishabhPant17 1⃣0⃣1⃣@Sundarwashi5 9⃣6⃣*
— BCCI (@BCCI) March 6, 2021
Follow the match 👉 https://t.co/9KnAXjaKfb pic.twitter.com/CNcVedSZAo
ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ 205 ರನ್ಗಳಿಕೆ ಮಾಡಿದೆ. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಕೊಹ್ಲಿ ಪಡೆ ಮೊನ್ನೆ 1ವಿಕೆಟ್ನಷ್ಟಕ್ಕೆ 24 ರನ್ಗಳಿಕೆ ಮಾಡಿತ್ತು. ನಿನ್ನೆ ಬ್ಯಾಟಿಂಗ್ ಮುಂದುವರಿಸಿದ ಭಾರತ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿತ್ತು.
ಓದಿ: ನಾಳೆಯಿಂದ ಭಾರತ-ದಕ್ಷಿಣ ಆಫ್ರಿಕಾ ಏಕದಿನ ಸರಣಿ: ಭಾರತ ಮಹಿಳಾ ತಂಡದಿಂದ ಭರ್ಜರಿ ತಯಾರಿ
ಈ ಮಧ್ಯೆ ಉತ್ತಮವಾಗಿ ಬ್ಯಾಟ್ ಬೀಸಿದ ರೋಹಿತ್ ಶರ್ಮಾ 49 ರನ್, ರಿಷಭ್ ಪಂತ್ ಆಕರ್ಷಕ 101ರನ್ ಹಾಗೂ ವಾಷಿಂಗ್ಟನ್ ಸುಂದರ್ ಅಜೇಯ 60 ರನ್ಗಳಿಕೆ ಮಾಡಿ ತಂಡ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತ ತಂಡ 2ನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 294 ರನ್ಗಳಿಕೆ ಮಾಡಿದ್ದು, 89ರನ್ಗಳ ಮುನ್ನಡೆ ಪಡೆದುಕೊಂಡಿತ್ತು.
ಟೀಂ ಇಂಡಿಯಾ ಪರ ಶುಬ್ಮನ್ ಗಿಲ್ (0), ಚೇತೇಶ್ವರ್ ಪೂಜಾರಾ (17), ವಿರಾಟ್ ಕೊಹ್ಲಿ (0),ರಹಾನೆ (27), ಆರ್.ಅಶ್ವಿನ್ (13)ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಇದೀಗ ಸುಂದರ್ ಹಾಗೂ ಅಕ್ಸರ್ ಪಟೇಲ್ ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.
ಇಂಗ್ಲೆಂಡ್ ಪರ ಆ್ಯಂಡರ್ಸನ್ 3 ವಿಕೆಟ್, ಬೆನ್ ಸ್ಟೋಕ್ಸ್ 4 ಹಾಗೂ ಜಾಕ್ ಲೆಚ್ 2 ವಿಕೆಟ್ ಪಡೆದುಕೊಂಡಿದ್ದಾರೆ.