ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎರಡನೇ ದಿನದಲ್ಲಿಯೇ ಸೋಲಿನ ಸುಳಿಗೆ ಸಿಲುಕಿದೆ. ಇಂಗ್ಲೆಂಡ್ನ ಮೊದಲ ಇನಿಂಗ್ಸ್ನ 415 ರನ್ಗಳ ಗುರಿ ಬೆನ್ನಟ್ಟಿ 151 ರನ್ಗೆ ಆಲೌಟ್ ಆಯಿತು. ಬಳಿಕ 2ನೇ ಇನಿಂಗ್ಸ್ ಆರಂಭಿಸಿದ್ದು ವಿಕೆಟ್ ನಷ್ಟವಿಲ್ಲದೇ 23 ರನ್ ಗಳಿಸಿದೆ.
ಮೊದಲ ಇನಿಂಗ್ಸ್ ಪತನ: ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ನ ಅವಳಿ ಬೌಲರ್ಗಳಾದ ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆ್ಯಂಡರ್ಸನ್ರ ದಾಳಿಗೆ ಸಿಲುಕಿ 53 ಓವರ್ಗಳಲ್ಲಿ 151 ರನ್ಗಳಿಸಿ ಮೊದಲ ಇನಿಂಗ್ಸ್ನಲ್ಲಿ ಪತನ ಹೊಂದಿತು.
-
Another day that has belonged to England 👊#WTC23 | #ENGvSA | Scorecard: https://t.co/cBe15RhzM9 pic.twitter.com/ToJxLFRo4X
— ICC (@ICC) August 26, 2022 " class="align-text-top noRightClick twitterSection" data="
">Another day that has belonged to England 👊#WTC23 | #ENGvSA | Scorecard: https://t.co/cBe15RhzM9 pic.twitter.com/ToJxLFRo4X
— ICC (@ICC) August 26, 2022Another day that has belonged to England 👊#WTC23 | #ENGvSA | Scorecard: https://t.co/cBe15RhzM9 pic.twitter.com/ToJxLFRo4X
— ICC (@ICC) August 26, 2022
ಇನಿಂಗ್ಸ್ನಲ್ಲಿ ಯಾವೊಬ್ಬ ಆಟಗಾರನೂ ಕನಿಷ್ಠ ಅರ್ಧಶತಕ ಕೂಡ ದಾಖಲಿಸಲಿಲ್ಲ. ಬೌಲರ್ ರಬಾಡಾ 36 ರನ್ ಗಳಿಸಿದ್ದೇ ತಂಡದ ಆಟಗಾರರ ಗರಿಷ್ಠ ಸ್ಕೋರ್. ಹರಿಣಗಳ ಬ್ಯಾಟಿಂಗ್ ಬೆನ್ನೆಲುಬು ಮುರಿದ ಜೇಮ್ಸ್ - ಬ್ರಾಡ್ ತಲಾ 3 ವಿಕೆಟ್ ಪಡೆದರು. ಇವರಿಗೆ ಸಾಥ್ ನೀಡಿದ ನಾಯಕ ಸ್ಟೋಕ್ಸ್ 2 ವಿಕೆಟ್ ಕಿತ್ತರು.
ಸ್ಟೋಕ್ಸ್, ಫೋಕ್ಸ್ ಶತಕ: ಸಾಧಾರಣ ಗುರಿ ಪಡೆದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತು ಬೆನ್ ಫೋಕ್ಸ್ರ ಶತಕದ ಬಲದಿಂದ 9 ವಿಕೆಟ್ ನಷ್ಟಕ್ಕೆ 415 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಬೆನ್ ಸ್ಟೋಕ್ಸ್ 103 ರನ್, ಬೆನ್ ಫೋಕ್ಸ್ ಔಟಾಗದೇ 113 ರನ್ ಮಾಡಿದರು. ಜಾನಿ ಬೈರ್ಸ್ಟೋವ್ 49 ರನ್ಗಳಿಸಿ ಅರ್ಧಶತಕದಿಂದ ವಂಚಿತರಾದರು. ಡಿಕ್ಲೇರ್ ಘೋಷಿಸಿರುವ ಇಂಗ್ಲೆಂಡ್ 264 ರನ್ಗಳ ಮುನ್ನಡೆ ಪಡೆದಿದೆ. ಆಫ್ರಿಕಾ ಪರವಾಗಿ ಆನ್ರಿಚ್ ನೋರ್ಟ್ಜೆ 3 ವಿಕೆಟ್ ಪಡೆದರು.
ಬಳಿಕ ಎರಡನೇ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ವಿಕೆಟ್ ನಷ್ಟವಿಲ್ಲದೇ ದಿನದಾಟದ ಕೊನೆಯಲ್ಲಿ 23 ರನ್ ಗಳಿಸಿದೆ. ಇನ್ನೂ ಮೂರು ದಿನದ ಆಟ ಬಾಕಿ ಉಳಿದಿದ್ದು, ಇಂಗ್ಲೆಂಡ್ ಗೆಲುವಿನಲ್ಲ ಮುಖ ಮಾಡಿದೆ.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ 151 ಆಲೌಟ್, ಜೇಮ್ಸ್ ಆ್ಯಂಡರ್ಸನ್ 3, ಸ್ಟುವರ್ಟ್ ಬ್ರಾಡ್ 3; ಇಂಗ್ಲೆಂಡ್ ಮೊದಲ ಇನಿಂಗ್ಸ್- 415/9, ಬೆನ್ ಸ್ಟೋಕ್ಸ್ 103, ಬೆನ್ ಫೋಕ್ಸ್ 113*, ಆನ್ರಿಚ್ ನೋರ್ಟ್ಜೆ 3 ವಿಕೆಟ್: ಎರಡನೇ ಇನಿಂಗ್ಸ್ 23-0.
ಓದಿ: ಮಹಾರಾಜ ಟ್ರೋಫಿ ಫೈನಲ್.. ಚಾಂಪಿಯನ್ ಪಟ್ಟ ಮುಡಿಗೇರಿಸಿ ಕೊಂಡ ಗುಲ್ಬರ್ಗ ಮಿಸ್ಟಿಕ್ಸ್