ETV Bharat / sports

IND vs ENG 2nd ODI: 4 ವಿಕೆಟ್​ ಕಿತ್ತು ಮಿಂಚಿದ ಚಹಲ್​; ಭಾರತದ ಗೆಲುವಿಗೆ 247ರನ್​ ಟಾರ್ಗೆಟ್​ - ಇಂಡಿಯಾ ವರ್ಸಸ್ ಇಂಗ್ಲೆಂಡ್ ಏಕದಿನ ಕ್ರಿಕೆಟ್

ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್​ 246ರನ್​​ಗಳಿಗೆ ಆಲೌಟ್​ ಆಗಿದೆ. ಈ ಮೂಲಕ ರೋಹಿತ್ ಬಳಗದ ಗೆಲುವಿಗೆ 247ರನ್​ಗಳ ಸುಲಭ ಟಾರ್ಗೆಟ್ ನೀಡಿದೆ.

IND vs ENG 2nd ODI
IND vs ENG 2nd ODI
author img

By

Published : Jul 14, 2022, 9:37 PM IST

ಲಾರ್ಡ್ಸ್​​(ಇಂಗ್ಲೆಂಡ್​): ಕ್ರಿಕೆಟ್ ಕಾಶಿ ಲಾರ್ಡ್ಸ್​ ಮೈದಾನದಲ್ಲಿ ಭಾರತ - ಇಂಗ್ಲೆಂಡ್ ನಡುವೆ ಎರಡನೇ ಏಕದಿನ ಪಂದ್ಯ ನಡೆಯುತ್ತಿದ್ದು, ಟಾಸ್​ ಸೋತು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡ 246 ರನ್​​ಗಳಿಕೆ ಮಾಡಿದೆ. ಈ ಮೂಲಕ ಭಾರತದ ಗೆಲುವಿಗೆ 247 ರನ್​​ ಟಾರ್ಗೆಟ್ ನೀಡಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದರೆ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ ಮಾಡಿಕೊಳ್ಳಲಿದೆ.

ಆರಂಭಿಕರಾಗಿ ಕಣಕ್ಕಿಳಿದ ಜೇಸನ್ ರಾಯ್ ​- ಬೈರ್​ಸ್ಟೋ 41ರನ್​ಗಳ ಜೊತೆಯಾಟವಾಡಿತು. ಈ ವೇಳೆ 23ರನ್​ಗಳಿಸಿದ್ದ ರಾಯ್​​ ಹಾರ್ದಿಕ್​ ಓವರ್​​ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ 38 ರನ್​​ಗಳಿಕೆ ಮಾಡಿದ್ದ ಬೈರ್​​ಸ್ಟೋ ಕೂಡ ಚಹಲ್​ ಓವರ್​​ನಲ್ಲಿ ಔಟಾದರು.

4 ವಿಕೆಟ್ ಪಡೆದು ಮಿಂಚಿದ ಚಹಲ್​​
4 ವಿಕೆಟ್ ಪಡೆದು ಮಿಂಚಿದ ಚಹಲ್​​

ಮಧ್ಯಮ ಕ್ರಮಾಂಕದಲ್ಲಿ ಕುಸಿತ: ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಜೋ ರೂಟ್​(11), ಸ್ಟೋಕ್ಸ್​(21) ಹಾಗೂ ಬಟ್ಲರ್​(4) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಹೀಗಾಗಿ ತಂಡ 102 ರನ್​​ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡಿತು.

ಲಿವಿಗ್​ಸ್ಟೋನ್, ಮೊಯಿನ್​ ಅಲಿ, ವಿಲ್ಲೆ ಆಸರೆ: ಇಂಗ್ಲೆಂಡ್ ತಂಡ ಮಧ್ಯಮ ಕ್ರಮಾಂಕದಲ್ಲಿ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. ಈ ವೇಳೆ, ತಂಡಕ್ಕೆ ಲಿವಿಗ್​​ಸ್ಟೋನ್​(33), ಮೊಯಿನ್ ಅಲಿ(47) ಹಾಗೂ ವಿಲ್ಲೆ(41) ತಂಡಕ್ಕೆ ಆಸರೆಯಾದರು. ಹೀಗಾಗಿ ತಂಡ ಸ್ಪರ್ಧಾತ್ಮಕ ರನ್​ಗಳಿಕೆ ಮಾಡಿತು. ತಂಡ ಕೊನೆಯದಾಗಿ 49 ಓವರ್​​​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು 246ರನ್​​ಗಳಿಕೆ ಮಾಡಿದೆ.

ಭಾರತದ ಪರ ಬೌಲಿಂಗ್​​ನಲ್ಲಿ ಮಿಂಚಿದ ಚಹಲ್​ 4 ವಿಕೆಟ್ ಪಡೆದರೆ, ಬುಮ್ರಾ, ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್​ ಹಾಗೂ ಶಮಿ, ಪ್ರಸಿದ್ಧ್ ಕೃಷ್ಣ 1 ವಿಕೆಟ್ ಕಿತ್ತರು.

ಉತ್ತಮ ಪ್ರದರ್ಶನ ನೀಡಿದ ಚಹಲ್​: ಸ್ಪಿನ್ನರ್ ಯಜುವೇಂದ್ರ ಚಹಲ್ ಇಂದಿನ ಪಂದ್ಯದಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದರು. ತಾವು ಎಸೆದ 10 ಓವರ್​​ಗಳಲ್ಲಿ 47 ರನ್​ ನೀಡಿ, ಪ್ರಮುಖ 4 ವಿಕೆಟ್ ಪಡೆದುಕೊಂಡರು. ಇದರಲ್ಲಿ ಬೈರ್​ಸ್ಟೋ,ರೂಟ್, ಸ್ಟೋಕ್ಸ್ ಹಾಗೂ ಮೊಯಿನ್ ಅಲಿ ವಿಕೆಟ್ ಸೇರಿಕೊಂಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.