ETV Bharat / sports

ಆರ್​ಸಿಬಿ ನೂತನ ನಾಯಕ ಫಾಫ್​ ಡು ಪ್ಲೆಸಿಸ್​ ಕೌಶಲ್ಯ ಹೊಗಳಿದ ವಿರಾಟ್​ ಕೊಹ್ಲಿ

author img

By

Published : Mar 22, 2022, 3:20 PM IST

ಡ್ರೆಸ್ಸಿಂಗ್ ರೂಮ್​ನಲ್ಲಿ ಆಟಗಾರರ ಮನಸ್ಥಿತಿ ಅರಿಯುವ ನಾಯಕನ ಅಗತ್ಯ ತಂಡಕ್ಕಿದೆ. ನಾಯಕನಾದವನು ತಂಡವನ್ನು ಸರಿಯಾದ ನಿಟ್ಟಿನಲ್ಲಿ ಕೊಂಡೊಯ್ಯಬೇಕು. ಆ ಛಾತಿ ಪ್ಲೆಸಿಸ್​ ಅವರಲ್ಲಿದೆ. ಅದನ್ನು ಈ ಬಾರಿಯ ಐಪಿಎಲ್​ನಲ್ಲಿ ನೋಡಲಿದ್ದೀರಿ ಎಂದು ಹೇಳಿದ್ದಾರೆ..

ಮುಂಬೈ : ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನೂತನ ನಾಯಕರಾಗಿ ಆಯ್ಕೆಯಾಗಿರುವ ದಕ್ಷಿಣ ಆಫ್ರಿಕಾದ ಫಾಫ್​ ಡು ಪ್ಲೆಸಿಸ್​ ಅವರ ನಾಯಕತ್ವದ ಬಗ್ಗೆ ಮಾಜಿ ನಾಯಕ ವಿರಾಟ್​ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಅನುಭವವು ತಂಡ ಟ್ರೋಫಿ ಗೆಲ್ಲಲು ನೆರವಾಗಲಿದೆ ಎಂದಿದ್ದಾರೆ.

ಫಾಫ್​ ಡು ಪ್ಲೆಸಿಸ್​ ಅವರು ಅದ್ಭುತ ನಾಯಕತ್ವ ಕೌಶಲ್ಯಗಳನ್ನು ಹೊಂದಿದ್ದಾರೆ. ಇದಕ್ಕಾಗಿ ಅವರನ್ನು ಹರಾಜಿನ ವೇಳೆ ಖರೀದಿ ಮಾಡಲೇಬೇಕು ಎಂದು ಯೋಜಿಸಲಾಗಿತ್ತು. ಅದರಂತೆ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಅವರ ಕೌಶಲ್ಯಗಳು ತಂಡ ಟ್ರೋಫಿ ಗೆಲ್ಲಲು ನೆರವಾಗಲಿದೆ ಎಂದು ಆರ್​ಸಿಬಿ ಪೋಸ್ಟ್​ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.

ಡ್ರೆಸ್ಸಿಂಗ್ ರೂಮ್​ನಲ್ಲಿ ಆಟಗಾರರ ಮನಸ್ಥಿತಿ ಅರಿಯುವ ನಾಯಕನ ಅಗತ್ಯ ತಂಡಕ್ಕಿದೆ. ನಾಯಕನಾದವನು ತಂಡವನ್ನು ಸರಿಯಾದ ನಿಟ್ಟಿನಲ್ಲಿ ಕೊಂಡೊಯ್ಯಬೇಕು. ಆ ಛಾತಿ ಪ್ಲೆಸಿಸ್​ ಅವರಲ್ಲಿದೆ. ಅದನ್ನು ಈ ಬಾರಿಯ ಐಪಿಎಲ್​ನಲ್ಲಿ ನೋಡಲಿದ್ದೀರಿ ಎಂದು ಹೇಳಿದ್ದಾರೆ.

ಪ್ಲೆಸಿಸ್​ ಈಗಾಗಲೇ ದಕ್ಷಿಣ ಆಫ್ರಿಕಾದ ಟೆಸ್ಟ್​ ತಂಡದ ನಾಯಕರಾಗಿ ಯಶಸ್ವಿಯಾಗಿದ್ದಾರೆ. ಅವರೊಂದಿಗೆ ನಾವೆಲ್ಲರೂ ಹೊಂದಿಕೊಳ್ಳುತ್ತೇವೆ. ತಂಡಕ್ಕೆ ಟ್ರೋಫಿ ತಂದು ಕೊಡುವುದೇ ನಮ್ಮ ಉದ್ದೇಶ ಎಂದಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್​ ತಂಡದಲ್ಲಿದ್ದ ಫಾಫ್ ಡು ಪ್ಲೆಸಿಸ್​ ಈ ಬಾರಿಯ ಮೆಗಾ ಹರಾಜಿಗೆ ಲಭ್ಯವಿದ್ದರು. ಆರ್​ಸಿಬಿ ಅವರನ್ನು 7 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಇನ್ನು ಇದೇ 26ರಿಂದ ಐಪಿಎಲ್​ 15ನೇ ಆವೃತ್ತಿಯು ಆರಂಭವಾಗಲಿದ್ದು, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮಧ್ಯೆ ಉದ್ಘಾಟನಾ ಪಂದ್ಯ ನಡೆಯಲಿದೆ.

ಓದಿ: ಮಹಿಳಾ ವಿಶ್ವಕಪ್​: ಬಾಂಗ್ಲಾ ವಿರುದ್ಧ ಭಾರತದ ವನಿತೆಯರಿಗೆ 110 ರನ್​ಗಳ ಭರ್ಜರಿ ಜಯ.. ಸೆಮಿ ಆಸೆ ಜೀವಂತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.