ದುಬೈ: ಅಕ್ಟೋಬರ್ 17ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ನಲ್ಲಿ ಅಂಪೈರ್ ತೀರ್ಮಾನ ಪರಾಮರ್ಶೆ ವ್ಯವಸ್ಥೆಯನ್ನು (DRS)ಬಳಸಲು ಐಸಿಸಿ ತೀರ್ಮಾನಿಸಿದೆ. ಇದೀಗ ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡಿಆರ್‌ಎಸ್ ಬಳಕೆಯಾಗಲಿದೆ ಎಂದು ಐಸಿಸಿ(ICC) ಆಡಳಿತ ಮಂಡಳಿ ಭಾನುವಾರ ತಿಳಿಸಿದೆ.
ಪುರುಷರ ವಿಶ್ವಕಪ್ ಒಮಾನ್ ಮತ್ತು ಯುಎಇಯಲ್ಲಿ ನಡೆಯಲಿದೆ. ಅಕ್ಟೋಬರ್ 17ರಿಂದ ನವೆಂಬರ್ 14ರವರೆ ಈ ಚುಟುಕು ಸಮರ ಜರುಗಲಿದ್ದು, ಒಟ್ಟು 16 ತಂಡಗಳು ಭಾಗವಹಿಸಲಿವೆ.
ಕೋವಿಡ್ 19 ಭೀತಿಯ ಪರಿಣಾಮ ಪರಿಣಿತ ಅಂಪೈರ್ಗಳ ಕೊರತೆ ಉಂಟಾಗಿದ್ದರಿಂದ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಹೆಚ್ಚುವರಿ ಐಸಿಸಿ ಡಿಆರ್‌ಎಸ್ ರಿವ್ಯೂವ್ ತೆಗೆದುಕೊಳ್ಳಲು ಅವಕಾಶ ಕೊಟ್ಟು ಅನುಮೋದನೆ ನೀಡಿತ್ತು. ಅದರಂತೆ ಸೀಮಿತ ಓವರ್ ಪಂದ್ಯಗಳ ಪಂದ್ಯದ ಪ್ರತಿ ಇನ್ನಿಂಗ್ಸ್ನಲ್ಲಿ 2 ಅವಕಾಶ ಮತ್ತು ಟೆಸ್ಟ್ನಲ್ಲಿ 3 ರಿವ್ಯೂವ್ಗಳಿಗೆ ಏರಿಕೆ ಮಾಡಲಾಗಿತ್ತು. ಇದೀಗ ವಿಶ್ವಕಪ್ನಲ್ಲಿ ಎರಡೂ ತಂಡಗಳೂ ಪ್ರತಿ ಇನ್ನಿಂಗ್ಸ್ನಲ್ಲಿ ತಲಾ ಎರಡು ರಿವ್ಯೂವ್ಗಳನ್ನು ಪಡೆಯಲಿವೆ.
ಭಾರತದಲ್ಲಿ 2016ರಲ್ಲಿ ನಡೆದಿದ್ದ ಪುರುಷರ ಟಿ20 ವಿಶ್ವಕಪ್ನಲ್ಲಿ ಡಿಆರ್‌ಎಸ್ ವ್ಯವಸ್ಥೆ ಇರಲಿಲ್ಲ. ಇದೀಗ ಮೊದಲ ಬಾರಿಗೆ ಟಿ20 ವಿಶ್ವಕಪ್ನಲ್ಲಿ ಇದು ಬಳಕೆಯಾಗಲಿದೆ. 2018ರ ಮಹಿಳೆಯರ ಟಿ20 ವಿಶ್ವಕಪ್ ಮೂಲಕ ಡಿಆರ್‌ಎಸ್ ಚುಟುಕು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿತ್ತು.
ಇದನ್ನು ಓದಿ:ಟಿ20 ವಿಶ್ವಕಪ್ ಗೆದ್ದವರಿಗೆ ಸಿಗಲಿದೆ ₹12 ಕೋಟಿ.. ಸೆಮಿಫೈನಲ್ಸ್ ತಂಡಗಳಿಗೂ ಬಂಪರ್..