ETV Bharat / sports

ಧವನ್ ಅಲ್ಲ, ಹಾರ್ದಿಕ್ ಪಾಂಡ್ಯ ಭಾರತ ತಂಡದ ನಾಯಕನಾಗಬೇಕಿತ್ತು: ಪಾಂಡ್ಯ ಕೋಚ್

ಪಾಂಡ್ಯರನ್ನು ತಂಡದಲ್ಲಿ ಕೇವಲ ಆಲ್​ರೌಂಡರ್ ಎಂದು ನೋಡುವುದಕ್ಕಿಂತ ಹೆಚ್ಚಿನ ಪ್ರದರ್ಶನವನ್ನು ಅವರಿಂದ ನಾನು ಬಯಸುತ್ತಿದ್ದೇನೆ. ಆತನ ಬೌಲಿಂಗ್ ಶೈಲಿ ಉತ್ತಮವಾಗಿದೆ. ಜೊತೆಗೆ ಸಂಪೂರ್ಣ ಗುಣಮಟ್ಟವುಳ್ಳ ಬ್ಯಾಟ್ಸ್​ಮನ್ ಕೂಡ ಆಗಿದ್ದಾರೆ. ಸಮಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುವ ಕಲೆ ಅವರು ಹೊಂದಿದ್ದಾರೆ..

ಹಾರ್ದಿಕ್ ಪಾಂಡ್ಯ- ಶಿಖರ್ ಧವನ್
ಹಾರ್ದಿಕ್ ಪಾಂಡ್ಯ- ಶಿಖರ್ ಧವನ್
author img

By

Published : Jul 14, 2021, 6:06 PM IST

ಮುಂಬೈ : ಮುಂಬರುವ ಶ್ರೀಲಂಕಾ ವಿರುದ್ಧದ ಸೀಮಿತ ಓವರ್​ಗಳ ಸರಣಿಯಲ್ಲಿ ನಾಯಕತ್ವ ಸ್ಪರ್ಧೆಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಶಿಖರ್ ಧವನ್​ ನಡುವೆ ತೀವ್ರ ಪೈಪೋಟಿಯಿತ್ತು. ಆದರೆ, ಆಯ್ಕೆ ಸಮಿತಿ ಧವನ್​ಗೆ ಮಣೆ ಹಾಕಿದ್ದರೂ ಇದಕ್ಕೆ ಯಾವ ಕಾರಣವನ್ನೂ ನೀಡಿರಲಿಲ್ಲ. ವಾಸ್ತವವಾಗಿ ತಂಡದಲ್ಲಿ ಹೆಚ್ಚು ಅನುಭವಿ ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿಲಾಗಿತ್ತು.

ಶ್ರೀಲಂಕಾ ಸರಣಿಗೂ ಮುನ್ನ ಹಾರ್ದಿಕ್ ಪಾಂಡ್ಯ ಬಾಲ್ಯದ ಕೋಚ್​ ಜಿತೇಂದರ್ ಸಿಂಗ್ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ್ದು, ಪಾಂಡ್ಯರನ್ನು ಈ ಸರಣಿಯಲ್ಲಿ ನಾಯಕರನ್ನಾಗಿ ಆಯ್ಕೆ ಮಾಡದಿರುವುದು ನಿರಾಶೆ ತಂದಿದೆ ಎಂದು ತಿಳಿಸಿದ್ದಾರೆ.

"ಹಾರ್ದಿಕ್ ಪಾಂಡ್ಯರನ್ನು ಶ್ರೀಲಂಕಾ ಪ್ರವಾಸದಲ್ಲಿ ನಾಯಕನಾಗಿ ಆಯ್ಕೆ ಮಾಡದಿರುವುದಕ್ಕೆ ನನಗೆ ಆಶ್ಚರ್ಯ ತಂದಿದೆ. ಅವರು ಭಾರತ ತಂಡದ ವೈಟ್​ ಬಾಲ್ ತಂಡದ ಖಾಯಂ ಸದಸ್ಯರಾಗಿದ್ದಾರೆ. ಅಲ್ಲದೆ ಮುಂದಿನ 5-7 ವರ್ಷಗಳವರೆಗೆ ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂದಿದ್ದಾರೆ.

ಅವರಲ್ಲಿ ಹೊಸ ಆಲೋಚನೆಗಳಿವೆ ಮತ್ತು ಸಾಕಷ್ಟು ಸಾಮರ್ಥ್ಯವಿದೆ. ಆತನು ನಾಯಕತ್ವಕ್ಕೆ ಸೂಕ್ತವಾದ ವ್ಯಕ್ತಿ. ವಿಶೇಷವಾಗಿ ವೈಟ್ ಬಾಲ್ ಸ್ವರೂಪದಲ್ಲಿ ನಾಯಕತ್ವಕ್ಕೆ ಹೇಳಿ ಮಾಡಿಸಿದ ಆಟಗಾರ" ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಪಾಂಡ್ಯರನ್ನು ತಂಡದಲ್ಲಿ ಕೇವಲ ಆಲ್​ರೌಂಡರ್ ಎಂದು ನೋಡುವುದಕ್ಕಿಂತ ಹೆಚ್ಚಿನ ಪ್ರದರ್ಶನವನ್ನು ಅವರಿಂದ ನಾನು ಬಯಸುತ್ತಿದ್ದೇನೆ. ಆತನ ಬೌಲಿಂಗ್ ಶೈಲಿ ಉತ್ತಮವಾಗಿದೆ. ಜೊತೆಗೆ ಸಂಪೂರ್ಣ ಗುಣಮಟ್ಟವುಳ್ಳ ಬ್ಯಾಟ್ಸ್​ಮನ್ ಕೂಡ ಆಗಿದ್ದಾರೆ. ಸಮಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುವ ಕಲೆ ಅವರು ಹೊಂದಿದ್ದಾರೆ. ಯಾವುದೇ ವಿಷಯವನ್ನು ಬೇಗ ಕಲಿಯುವ ಸಾಮರ್ಥ್ಯ ಅವರಿಗಿದೆ. ಹಾಗಾಗಿ, ಈ ಸರಣಿಯಲ್ಲಿ ಹಾರ್ದಿಕ್​ರನ್ನು ನಾಯಕರನ್ನಾಗಿ ಪರಿಗಣಿಸಬೇಕಿತ್ತೆಂದು ಸಿಂಗ್​ ತಿಳಿಸಿದ್ದಾರೆ.

ಹಾರ್ದಿಕ್ ಭಾರತ ಪರ 11 ಟೆಸ್ಟ್​, 60 ಏಕದಿನ ಮತ್ತು 48 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಬೆನ್ನು ಶಸ್ತ್ರಚಿಕಿತ್ಸೆಯ ನಂತರ ಕಳೆದ ಎರಡು ಐಪಿಎಲ್ ಆವೃತ್ತಿಯಲ್ಲಿ ಮತ್ತು ಭಾರತ ಪರವೂ ಪಾಂಡ್ಯ ಬೌಲಿಂಗ್ ಮಾಡುತ್ತಿಲ್ಲ. ಹಾಗಾಗಿ, ಟೆಸ್ಟ್ ತಂಡದಿಂದ ಅವರನ್ನು ಹೊರಗಿಡಲಾಗಿದೆ.

ಇದನ್ನು ಓದಿ: ಮೊದಲ ಬಾರಿಗೆ ಟೀಂ ಇಂಡಿಯಾ ಜರ್ಸಿಯಲ್ಲಿ ಮಿಂಚಿದ ದೇವದತ್​ ಪಡಿಕ್ಕಲ್!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.