ಗುವಾಹಟಿ:ಅಂಡರ್ 19 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಯಶ್ ಧುಲ್ ರಣಜಿ ಪದಾರ್ಪಣೆ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ನಲ್ಲೂ ಸತಕ ಸಿಡಿಸಿ ಕ್ರಿಕೆಟ್ ವಲಯದಲ್ಲಿ ಸುದ್ದಿಯಲ್ಲಿದ್ದಾರೆ.
ಯಶ್ ಧುಲ್ ಭಾನುವಾರ ಡ್ರಾನಲ್ಲಿ ಅಂತ್ಯವಾದ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಅವಳಿ ಶತಕ ಸಿಡಿಸಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ 113 ರನ್ಗಳಿಸಿದರೆ, 2ನೇ ಇನ್ನಿಂಗ್ಸ್ನಲ್ಲಿ ಅಜೇಯ 113 ರನ್ಗಳಿಸಿದರು. ಈ ವೇಳೆ ಪಂದ್ಯವನ್ನು ಡ್ರಾ ಎಂದು ಘೋಷಿಸಿಲಾಯಿತು. ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿದ್ದ ತಮಿಳುನಾಡು ತಂಡ 3 ಅಂಕ ಪಡೆದುಕೊಂಡಿತು. ದೆಹಲಿ ಕೇವಲ ಒಂದು ಅಂಕ ಪಡೆಯಿತಾದರೂ19 ವರ್ಷದ ಯುವಕನ ಬ್ಯಾಟಿಂಗ್ಗೆ ಕ್ರಿಕೆಟ್ ಲೋಕ ಶಹಬ್ಬಾಸ್ ಗಿರಿ ನೀಡಿದೆ.
ಆಟದ ಪ್ರಕಾರ ಧುಲ್ ಭಾರತ ತಂಡಕ್ಕಾಗಿ ಆಡುವುದಕ್ಕೆ ಸಿದ್ಧವಾಗಿದ್ದಾರೆ ಎಂದು ಡೆಲ್ಲಿ ಹಾಗೂ ವಿರಾಟ್ ಕೊಹ್ಲಿಯ ಬಾಲ್ಯದ ಕೋಚ್ ಆಗಹಿರುವ ರಾಜ್ ಕುಮಾರ್ ಶರ್ಮಾ ಅಭಿಪ್ರಾಯಪಟ್ಟಿದ್ದು, ಧುಲ್ ಅವರನ್ನು ಆದಷ್ಟು ಬೇಗ ಭಾರತ ತಂಡಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಎಂದಿದ್ದಾರೆ.
" ಆತನ ಆಟವನ್ನು ಗಮನಿಸಿದರೆ ಸೀನಿಯರ್ ಹಂತದಲ್ಲಿ ಆಡುವುದಕ್ಕೆ ಸಿದ್ಧನಾಗಿದ್ದಾನೆ. ಆತನನ್ನು ಆದಷ್ಟು ಬೇಗ ಟ್ರ್ಯಾಕ್ ಮಾಡಬೇಕೆಂದು ನಾನು ಭಾವಿಸುತ್ತೇನೆ. ಭಾರತ ತಂಡದಲ್ಲಿ ಹಿರಿಯ ಆಟಗಾರರೊಂದಿಗೆ ಪಳಗಿದರೆ, ಯಶ್ ಒಬ್ಬ ಅದ್ಭುತ ಆಟಗಾರನಾಗಿ ರೂಪುಗೊಳ್ಳುತ್ತಾನೆ" ಎಂದು ಶರ್ಮಾ ಪಂದ್ಯದ ನಂತರ ಪಿಟಿಐಗೆ ತಿಳಿಸಿದ್ದಾರೆ.
ಯಶ್ ಈಗಾಗಲೇ ವೈಟ್ ಬಾಲ್ ಸ್ವರೂಪದಲ್ಲಿ ತಾವೂ ಪ್ರಾಬಲ್ಯ ಸಾಧಿಸಬಹುದೆಂದು ತೋರಿಸಿಕೊಟ್ಟಿದ್ದಾರೆ. ಇದೀಗ ದೀರ್ಘ ಮಾದರಿಯಲ್ಲೂ ಉತ್ತಮ ಪ್ರದರ್ಶನ ತೋರಿದ್ದಾರೆ. ಇದು ಅವರಿಗೆ ಡ್ರೀಮ್ ಡೆಬ್ಯೂಟ್ ಆಗಿದೆ. ತಮಿಳುನಾಡು ನಮ್ಮನ್ನು ಆರಂಭದಿಂದಲೇ ಒತ್ತಡಕ್ಕೀಡು ಮಾಡಿತ್ತು. ಆದರೆ ಯಶ್ ಪ್ರದರ್ಶನ ಮಾತ್ರ ಆಕರ್ಷಣೀಯವಾಗಿತ್ತು ಎಂದು ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ: ಸೀನಿಯರ್ ಭಾರತ ತಂಡದಲ್ಲಿ ಆಡುವುದಕ್ಕೆ 18 ತಿಂಗಳ ಟಾರ್ಗೆಟ್ ಸಿದ್ಧಪಡಿಸಿಕೊಂಡಿದ್ದೇನೆ: U19 ಸ್ಟಾರ್ ಯಶ್ ಧುಲ್