ETV Bharat / sports

ಆಸ್ಟ್ರೇಲಿಯಾದ ಡೆನಿಸ್ ಎಮರ್ಸನ್ ದಾಖಲೆ ಸರಿಗಟ್ಟಿದ ದೀಪ್ತಿ ಶರ್ಮಾ - ETV Bharath Kannada news

Deepti Sharma equalled a world record: ಮೊದಲ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ದೀಪ್ತಿ ಶರ್ಮಾ ಪಾತ್ರರಾಗಿದ್ದಾರೆ.

Deepti Sharma
Deepti Sharma
author img

By ETV Bharat Karnataka Team

Published : Dec 22, 2023, 10:36 PM IST

ಮುಂಬೈ(ಮಹಾರಾಷ್ಟ್ರ): ಭಾರತದ ಮಹಿಳಾ ಕ್ರಿಕೆಟರ್​ ದೀಪ್ತಿ ಶರ್ಮಾ ಶುಕ್ರವಾರ ವಿಶ್ವದಾಖಲೆ ಸರಿಗಟ್ಟಿದರು. ಆಸ್ಟ್ರೇಲಿಯಾದ ಡೆನಿಸ್ ಎಮರ್ಸನ್ ನೀ ಅಲ್ಡರ್ಮನ್ ಅವರ ಪಟ್ಟಿ ಸೇರಿಕೊಂಡಿದ್ದಾರೆ. ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ತನ್ನ ಮೊದಲ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆ ದೀಪ್ತಿ ಅವರಿಗೆ ಸಂದಿದೆ.

ವಾಂಖೆಡೆ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯ ಮಹಿಳಾ ತಂಡದ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್‌ನ ಎರಡನೇ ದಿನದಾಟದ ಮುಕ್ತಾಯಕ್ಕೆ ದೀಪ್ತಿ 70 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ದ್ವಿತೀಯ ದಿನದ ಅಂತ್ಯದ ವೇಳೆಗೆ ದೀಪ್ತಿ ಮತ್ತು ವೇಗಿ ಪೂಜಾ ವಸ್ತ್ರಾಕರ್ ಜೋಡಿ ಎಂಟನೇ ವಿಕೆಟ್​​ಗೆ 102 ರನ್ ಪಾಲುದಾರಿಕೆ ಹಂಚಿಕೊಂಡಿದೆ.

ಟೀ ವಿರಾಮಕ್ಕೂ ಮುನ್ನ ಭಾರತದ ನಾಲ್ಕು ವಿಕೆಟ್​ಗಳು ಪತನವಾದವು. ಕೇವಲ 14 ರನ್​ ಅಂತರದಲ್ಲಿ ರಿಚಾ ಘೋಷ್, ಹರ್ಮನ್​ಪ್ರೀತ್​ ಕೌರ್, ಯಾಸ್ತಿಕ ಭಾಟಿಯಾ ಮತ್ತು ಜೆಮಿಮಾ ರಾಡ್ರಿಗಸ್ ವಿಕೆಟ್​ ಕೊಟ್ಟರು. ನಂತರ ಒಂದಾದ ಈ ಜೋಡಿ ಮೂರನೇ ಇನ್ನಿಂಗ್ಸ್​ ಸಂಪೂರ್ಣವಾಗಿ ಆಡಿದ್ದಲ್ಲದೇ 100 ರನ್​ ಕಲೆಹಾಕಿತು. ಇದರಿಂದ ಭಾರತ 157 ರನ್​ಗಳ ಮುನ್ನಡೆ ಪಡೆದುಕೊಂಡಿದೆ.

ಕಳೆದ ವಾರ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್‌ನಲ್ಲಿ ದೀಪ್ತಿ 67 ಮತ್ತು 20 ರನ್ ಗಳಿಸಿದ್ದರು. 2021ರಲ್ಲಿ ಬ್ರಿಸ್ಟಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ತನ್ನ ಚೊಚ್ಚಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 54 ರನ್ ಗಳಿಸಿದ್ದರು. ಅವರ ಅರ್ಧಶತಕ ಅಂದು ಭಾರತ ಪಂದ್ಯ ಡ್ರಾ ಸಾಧಿಸುವಲ್ಲಿ ನೆರವಾಗಿತ್ತು. ಸೆಪ್ಟೆಂಬರ್ 2021ರಲ್ಲಿ ಕರಾರಾದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ದೀಪ್ತಿ ಮೊದಲ ಇನ್ನಿಂಗ್ಸ್‌ನಲ್ಲಿ 66 ರನ್ ಗಳಿಸಿದ್ದರು. ಭಾರತವು ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 377/8 ರನ್ ಗಳಿಸಿತ್ತು.

ಡಿವೈ ಪಾಟೀಲ್ ಮತ್ತು ವಾಂಖೆಡೆ ಅವರ ಅರ್ಧಶತಕಗಳು ಮೊದಲ ನಾಲ್ಕು ಟೆಸ್ಟ್‌ಗಳಲ್ಲಿ ಅರ್ಧಶತಕಗಳನ್ನು ಗಳಿಸುವ ಮೂಲಕ ದಾಖಲೆ ಮಾಡಿದ್ದಾರೆ ಮತ್ತು ಡೆನಿಸ್ ಎಮರ್ಸನ್ ಅವರ ಸಾಲಿಗೆ ಸೇರಿದ್ದಾರೆ. 1984 ಡಿಸೆಂಬರ್ ಮತ್ತು ಜನವರಿ 1985 ರಲ್ಲಿ ಇಂಗ್ಲೆಂಡ್ ವಿರುದ್ಧದ ತನ್ನ ಮೊದಲ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಡೆನಿಸ್ 84, 131, 84 ಮತ್ತು 58 ರನ್ ಗಳಿಸಿದ್ದರು.

ಸತತ ನಾಲ್ಕು ಅರ್ಧಶತಕ: ಈ ಮೂಲಕ ದೀಪ್ತಿ ಮಹಿಳಾ ಕ್ರಿಕೆಟ್‌ನಲ್ಲಿ ಸತತ ನಾಲ್ಕು ಅರ್ಧಶತಕಗಳನ್ನು ಗಳಿಸಿದ ಒಂಬತ್ತನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಪೆಟಾ ವರ್ಕೊ ಮತ್ತು ಭಾರತದ ಹೇಮಲತಾ ಕಲಾ ಜಂಟಿಯಾಗಿ ಸತತ ಐದು ಅರ್ಧಶತಕಗಳ ದಾಖಲೆಯನ್ನು ಹೊಂದಿದ್ದಾರೆ. ವೆರ್ಕೊ ಐದು ಟೆಸ್ಟ್‌ಗಳಲ್ಲಿ 68, 81, 67, 105 ಮತ್ತು 78 ರನ್ ಗಳಿಸಿದರು. ನ್ಯೂಜಿಲೆಂಡ್ ವಿರುದ್ಧ ಒಂದು (1979) ಮತ್ತು 1984 ರಲ್ಲಿ ಭಾರತದ ವಿರುದ್ಧ ನಾಲ್ಕು ಅವರ ಬ್ಯಾಟ್​​ನಿಂದ ಅರ್ಧಶತಕ ದಾಖಲಾಗಿತ್ತು. ಹೇಮಲತಾ 2002 ರಿಂದ 2006ರ ನಡುವಿನ ಐದು ಪಂದ್ಯಗಳಲ್ಲಿ 110, 64, 62, 110 ಮತ್ತು 68 ರನ್ ಗಳಿಸಿದ್ದರು.

ಇದನ್ನೂ ಓದಿ: ಮಹಿಳಾ ಕ್ರಿಕೆಟ್ ಟೆಸ್ಟ್​​: ದೀಪ್ತಿ, ಪೂಜಾ ಆಸರೆಯ ಇನ್ನಿಂಗ್ಸ್​; ಭಾರತಕ್ಕೆ ಭಾರಿ ಮುನ್ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.