ಶಾರ್ಜಾ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಈ ಜಯದ ಮೂಲಕ ಅಗ್ರ 2 ಸ್ಥಾನ ಪಡೆಯುವುದಕ್ಕೆ ಮತ್ತಷ್ಟು ಹತ್ತಿರವಾಗಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 129 ರನ್ಗಳಿಸಿತ್ತು. ಡೆಲ್ಲಿ ತಂಡ 19.1 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಪ್ಲೇ ಆಫ್ಗೆ ಪ್ರವೇಶಿಸಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಮುಂಬೈ ತಂಡದ ಬ್ಯಾಟ್ಸ್ಮನ್ಗಳು ನೀರಸ ಪ್ರದರ್ಶನ ತೋರಿದರು. ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿ ಸೇರಿದಂತೆ 33 ರನ್ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು. ಇವರನ್ನು ಹೊರೆತುಪಡಿಸಿದರೆ ಮುಂಬೈ ತಂಡದ ಯಾವೊಬ್ಬ ಬ್ಯಾಟ್ಸ್ಮನ್ 20ರ ಗಡಿ ದಾಟಿಲಿಲ್ಲ.
-
That Winning Feeling! 👌 👌@DelhiCapitals held their nerve to beat #MI by 4⃣ wickets & registered their 9th win of the #VIVOIPL. 👏 👏 #MIvDC
— IndianPremierLeague (@IPL) October 2, 2021 " class="align-text-top noRightClick twitterSection" data="
Scorecard 👉 https://t.co/Kqs548PStW pic.twitter.com/XCM9OUDxwD
">That Winning Feeling! 👌 👌@DelhiCapitals held their nerve to beat #MI by 4⃣ wickets & registered their 9th win of the #VIVOIPL. 👏 👏 #MIvDC
— IndianPremierLeague (@IPL) October 2, 2021
Scorecard 👉 https://t.co/Kqs548PStW pic.twitter.com/XCM9OUDxwDThat Winning Feeling! 👌 👌@DelhiCapitals held their nerve to beat #MI by 4⃣ wickets & registered their 9th win of the #VIVOIPL. 👏 👏 #MIvDC
— IndianPremierLeague (@IPL) October 2, 2021
Scorecard 👉 https://t.co/Kqs548PStW pic.twitter.com/XCM9OUDxwD
ನಾಯಕ ರೋಹಿತ್(7), ಡಿಕಾಕ್(19), ಸೌರಭ್ ತಿವಾರಿ(15), ಪೊಲಾರ್ಡ್(6), ಹಾರ್ದಿಕ್ ಪಾಂಡ್ಯ(17),ಕೌಲ್ಟರ್ ನೈಲ್(1)ಜಯಂತ್ ಯಾದವ್(11) ಮತ್ತು ಕೃನಾಲ್ ಪಾಂಡ್ಯ ಅಜೇಯ 13 ರನ್ಗಳಿಸಿದರು.
ಡೆಲ್ಲಿ ಪರ ಅದ್ಭುತ ಬೌಲಿಂಗ್ ನಡೆಸಿದ ಆವೇಶ್ ಖಾನ್ 15ಕ್ಕೆ 3, ಅಕ್ಷರ್ ಪಟೇಲ್ 21ಕ್ಕೆ 3, ಎನ್ರಿಚ್ ನಾರ್ಟ್ಜ್ 19ಕ್ಕೆ1 ಮತ್ತು ಅಶ್ವಿನ್ 41ಕ್ಕೆ 1 ವಿಕೆಟ್ ಪಡೆದು ಹಾಲಿ ಚಾಂಪಿಯನ್ನರು ದೊಡ್ಡ ಮೊತ್ತ ಪೇರಿಸದಂತೆ ತಡೆದರು.
ಇನ್ನು 130ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಡೆಲ್ಲೂ ಕೂಡ ಆರಂಭದಲ್ಲೇ ಪೃಥ್ವಿ ಶಾ(6), ಶಿಖರ್ ಧವನ್(8) ಮತ್ತು ಸ್ಟೀವ್ ಸ್ಮಿತ್(9) ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು.
ಆದರೆ ಶ್ರೇಯಸ್ ಅಯ್ಯರ್ 33 ಎಸೆತಗಳಲ್ಲಿ 2 ಬೌಂಡರಿ ಸಹಿತ ಅಜೇಯ 33 ಮತ್ತು ಅಶ್ವಿನ್ 21 ಎಸೆತಗಳಲ್ಲಿ ಅಜೇಯ 20 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ನಾಯಕ ರಿಷಭ್ ಪಂತ್ 26 ಮತ್ತು ಹೆಟ್ಮಾಯರ್ 15 ರನ್ಗಳಿಸಿ ಔಟಾದರು.
ಮುಂಬೈ ಪರ ಬೌಲ್ಟ್ 24ಕ್ಕೆ1, ಜಯಂತ್ ಯಾದವ್ 31ಕ್ಕೆ1, ಕೃನಾಲ್ ಪಾಂಡ್ಯ 18ಕ್ಕೆ1, ಜಸ್ಪ್ರೀತ್ ಬುಮ್ರಾ 29ಕ್ಕೆ1, ಕೌಲ್ಟರ್ ನೈಲ್ 19ಕ್ಕೆ 1ವಿಕೆಟ್ ಪಡೆದರು.