ಸಿಡ್ನಿ (ಆಸ್ಟ್ರೇಲಿಯಾ): 'ನಾನು ತಂಡಕ್ಕಾಗಿ ಪಿಟ್ ಅಲ್ಲ ಎಂದು ಆಯ್ಕೆಗಾರರಿಗೆ ಎನಿಸಿದರೆ ಕೈ ಬಿಡಲಿ. ಆದರೆ ತಂಡಕ್ಕಾಗಿ ರನ್ ಗಳಿಸುವ ದಾಹ ನನ್ನಲ್ಲಿ ಆರಿಲ್ಲ' ಎಂದು ಆಸಿಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಹೇಳಿದ್ದಾರೆ. ಈ ಮೂಲಕ ಆಯ್ಕೆಗಾರರು ತಂಡಕ್ಕೆ ಸೇರ್ಪಡೆ ಮಾಡದಿದ್ದರೆ ನಿವೃತ್ತಿಯ ಚಿಂತನೆ ಮಾಡಲಿದ್ದಾರೆ ಎಂಬ ಮುನ್ಸೂಚನೆಯನ್ನೂ ಇಟ್ಟಿದ್ದಾರೆ. ಆದರೆ ವೈಟ್ ಬಾಲ್ನಲ್ಲಿ ಇನ್ನಷ್ಟು ಆಡುವ ಹುಮ್ಮಸ್ಸನ್ನೂ ತೋರಿದ್ದಾರೆ.
ಗಾಯದ ಸಮಸ್ಯೆಯಿಂದ ಎರಡೇ ಟೆಸ್ಟ್ನ ಮೊದಲ ಇನ್ನಿಂಗ್ಸ್ ನಂತರ ತಂಡದಿಂದ ಹೊರಗುಳಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ದೆಹಲಿಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಸಿರಾಜ್ ಬೌಲಿಂಗ್ ವೇಳೆ ಬೌನ್ಸ್ ಬಾಲ್ ಮೊಣಕೈಗೆ ತಗುಲಿ ಗಾಯವಾಗಿತ್ತು. ಇದರಿಂದ ಚಿಕಿತ್ಸೆಯ ಸಲುವಾಗಿ ಸ್ವದೇಶಕ್ಕೆ ಮರಳಿದ್ದರು.
ಬ್ಯಾಟಿಂಗ್ನಲ್ಲಿ ಸತತ ವಿಫಲತೆ ಕಾಣುತ್ತಿರುವ ವಾರ್ನರ್ ಫಾರ್ಮ್ ಬಗ್ಗೆ ಇತ್ತೀಚೆಗೆ ಟೀಕೆಗಳು ಕೇಳಿ ಬರುತ್ತಿದೆ. ಇತ್ತೀಚೆಗೆ ವಾರ್ನರ್ ಆಟದ ಬಗ್ಗೆ ಆಸಿಸ್ ತಂಡದ ಇನ್ನೊಬ್ಬ ಆರಂಭಿಕ ಬ್ಯಾಟರ್ ಖವಾಜಾ ಕೇವಲ ಮೂರು ಇನ್ನಿಂಗ್ಸ್ನಿಂದ ಬ್ಯಾಟಿಂಗ್ ಅಳೆಯ ಬಾರದು ಎಂದು ವಾರ್ನರ್ ಪರ ಮಾತನಾಡಿದ್ದರು. ಹಿಂದಿನ ಮೂರು ವರ್ಷಗಳಲ್ಲಿ ಕೇವಲ ಒಂದು ಟೆಸ್ಟ್ ಶತಕವನ್ನು ಗಳಿಸಿದ್ದಾರೆ. 36 ವರ್ಷದ ವಾರ್ನರ್ ಈ ವರ್ಷದ ಆಶಸ್ ಪ್ರವಾಸದಲ್ಲಿ ಆರಂಭಿಕರಾಗಿ ಕಣಕ್ಕಿಳಿಯುವ ಇಚ್ಚೆ ಹೊಂದಿದ್ದಾರೆ. ಆದರೆ, ಸತತ ವೈಫಲ್ಯ ಕಾಣುತ್ತಿರುವ ಬ್ಯಾಟರ್ ವಾರ್ನರ್ಗೆ ಆಯ್ಕೆಗಾರರು ಮಣೆ ಹಾಕುತ್ತಾರ ಎಂಬುದು ಪ್ರಶ್ನೆಯಾಗಿದೆ.
ಈ ಬಗ್ಗೆ ಮಾತನಾಡಿರುವ ವಾರ್ನರ್,'2024 ವರೆಗೆ ಬ್ಯಾಟ್ ಬೀಸುವ ಬಗ್ಗೆ ನಾನು ದೃಢವಾಗಿದ್ದೇನೆ. ಆದರೆ, ಆಯ್ಕೆಗಾರರು ನನ್ನನ್ನು ತಂಡಕ್ಕೆ ಸೇರಿಸುತ್ತಾರಾ ಎಂಬುದು ಗೊತ್ತಿಲ್ಲ. ಆದರೆ, ಚುಟುಕು ಮತ್ತು ಏಕದಿನ ತಂಡದಲ್ಲಿ ಅವಕಾಶ ಸಿಗದಿದ್ದರೂ, ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆಯಲು ಬಯಸುತ್ತೇನೆ. ಮುಂದಿನ 12 ತಿಂಗಳು ಆಸ್ಟ್ರೇಲಿಯಾ ತಂಡ ಬಹಳಷ್ಟು ಪಂದ್ಯಗಳನ್ನು ಆಡಲಿದೆ. ಅವುಗಳಲ್ಲಿ ನನ್ನ ಸ್ಥಾನದಲ್ಲಿ ನಾನು ಉತ್ತಮ ಕ್ರಿಕೆಟ್ ಆಡಲು ಬಯಸುತ್ತೇನೆ. ಆರಂಭಿಕನಾಗಿ ತಂಡಕ್ಕೆ ಹೆಚ್ಚಿನ ರನ್ ಗಳಿಸ ಬೇಕು ಎಂಬ ಬಯಕೆ ಇದೆ' ಎಂದಿದ್ದಾರೆ.
'36 ರಿಂದ 37 ವರ್ಷ ವಯಸ್ಸಾಗಿದೆ ಎಂದು ಪಾರ್ಮ್ ಬಗ್ಗೆ ಮಾತನಾಡುವವರು ಟೀಕಿಸುತ್ತಾರೆ ಮತ್ತು 35ರ ನಂತರ ಹೆಚ್ಚಿನವರು ನಿವೃತ್ತಿ ಘೋಷಿಸಿದ್ದಾರೆ. ಆದರೆ, ನಾನು ಇನ್ನೂ ತಂಡದ ಭಾಗವಾಗಿರಲು ಬಯಸುತ್ತೇನೆ ಮತ್ತು ಮಿಕ್ಕ ಆಟಗಾರರ ಒತ್ತಡವನನ್ನು ಕಡಿಮೆ ಮಾಡಲು ಬಯಸುತ್ತೇನೆ. ನನಗೆ ತಂಡದಲ್ಲಿ ಈ ರೀತಿಯ ಜವಾಬ್ದಾರಿ ತೆಗೆದುಕೊಳ್ಳುವ ಬಗ್ಗೆ ಹೆಚ್ಚು ಆಸಕ್ತಿ ಇದೆ' ಎಂದು ಹೇಳಿದ್ದಾರೆ.
'ಭಾರತದ ಎದುರಿನ ಉಳಿದೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಹೇಗೆ ಆಡುತ್ತದೆ ಎಂದು ಹೇಳಲಾಗದು. ಆದರೆ, ಬಹಳಷ್ಟನ್ನು ಕಲಿಯಲಿದ್ದಾರೆ. ಜೂನ್ ತಿಂಗಳಿನಲ್ಲಿ ಆಯೋಜನೆ ಆಗಲಿರುವ ಆಸಿಸ್-ಇಂಗ್ಲೆಂಡ್ ನಡುವಣ ಆ್ಯಶಸ್ ಸರಣಿಗಾಗಿ ಬದ್ಧವಾಗಿದ್ದೇವೆ. ಬಲಿಷ್ಠ ತಂಡವನ್ನು ಕಟ್ಟಿ ಸರಣಿ ಗೆಲ್ಲುವ ಬಗ್ಗೆ ಚಿಂತನೆ ಇದೆ. ಟೆಸ್ಟ್ ಸರಣಿಗಾಗಿ ಅತ್ಯುತ್ತಮ ಫಿಟ್ ಆಗಿರುವ ಆಟಗಾರರನ್ನು ಆಯ್ಕೆ ಮಾಡಲಾಗುವುದು. ಹೋಮ್ ಸೀರೀಸ್ನಲ್ಲಿ ಆಡಲು ನಾವು ತುಂಬಾ ಉತ್ಸುಕರಾಗಿದ್ದೇವೆ ಎಂದು ವಾರ್ನರ್ ಹೇಳಿದ್ದಾರೆ.
ಆಸ್ಟ್ರೇಲಿಯಾಕ್ಕೆ ಬಾರ್ಡರ್ - ಗವಾಸ್ಕರ್ ಟ್ರೋಫಿ ಗಾಯದ ಮೇಲಿನ ಬರೆ ಎಂಬಂತಾಗಿದೆ. ಆಸ್ಟನ್ ಅಗರ್, ವಾರ್ನರ್, ಹ್ಯಾಸಲ್ ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಗಾಯದಿಂದ ತಂಡದಲ್ಲಿ ಸ್ಥಾನ ಪಡೆದಿಲ್ಲ. ಇದು ಭಾರತದಲ್ಲಿ ಪಂದ್ಯದಲ್ಲಿ ಸೋಲಿಗೆ ಕಾರಣವಾಗಿ ಪರಿಣಮಿಸುತ್ತಿದೆ. ಸ್ಟಾರ್ಕ್ ಕೊನೆಯ ಪಂದ್ಯಕ್ಕೆ ತಂಡ ಸೇರುವ ಸಾಧ್ಯತೆ ಇದೆ. ಮೂರನೇ ಪಂದ್ಯ ಮಾರ್ಚ್ 1ರಿಂದ 5 ವರೆಗೆ ಇಂದೋರ್ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದಿದೆ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರು ಯಾರು ಗೊತ್ತೇ..? ಇಲ್ಲಿದೆ ಅವರ ಲಿಸ್ಟ್