ETV Bharat / sports

ಅಮೀರ್​ ವಿರುದ್ಧ ಅತಿದೊಡ್ಡ ಆರೋಪ ಮಾಡಿದ ಕನೇರಿಯಾ.. ಪಾಕ್​ ಕ್ರಿಕೆಟ್​​ನಲ್ಲಿ ಸುಂಟರಗಾಳಿ?

author img

By

Published : May 17, 2021, 9:09 PM IST

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೇಲೆ ಮೊಹಮ್ಮದ್​ ಅಮೀರ್​​ ಬ್ಲ್ಯಾಕ್​ ಮೇಲ್ ಯತ್ನ ನಡೆಸುತ್ತಿದ್ದಾರೆ ಎಂದು ಪಾಕ್​ನ ಮಾಜಿ ಕ್ರಿಕೆಟರ್​ ದಾನೀಶ್​​ ಕನೇರಿಯಾ ಹೇಳಿಕೊಂಡಿದ್ದಾರೆ.

Danish Kaneria
Danish Kaneria

ಕರಾಚಿ: ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಲೆಗ್​ ಸ್ಪಿನ್ನರ್​​ ದಾನೀಶ್​ ಕನೇರಿಯಾ ಮಾಜಿ ವೇಗದ ಬೌಲರ್ ಮೊಹಮ್ಮದ್​​ ಅಮೀರ್​​ ವಿರುದ್ಧ ಅತಿದೊಡ್ಡ ಆರೋಪ ಮಾಡಿದ್ದು, ಇದು ಪಾಕ್​​ ಕ್ರಿಕೆಟ್ ಮಂಡಳಿಯಲ್ಲಿ ಸುಂಟರಗಾಳಿ ಎಬ್ಬಿಸುವ ಸಾಧ್ಯತೆ ಇದೆ.

ಟ್ವಿಟರ್​ನಲ್ಲಿ ಆರೋಪ ಮಾಡಿರುವ ಕನೇರಿಯಾ, ಮಾಜಿ ವೇಗದ ಬೌಲರ್ ಮೊಹಮ್ಮದ್​ ಅಮೀರ್​ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನ ಬ್ಲ್ಯಾಕ್​ ಮೇಲ್ ಮಾಡಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ವರ್ಷ ದಿಢೀರ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿರುವ ಮೊಹಮ್ಮದ್​ ಅಮೀರ್​, ಪಾಕ್​ ಕ್ರಿಕೆಟ್​ ಮಂಡಳಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಆದರೆ ಇದನ್ನ ಅಲ್ಲಗೆಳೆದಿರುವ ಕನೇರಿಯಾ ಇದೊಂದು ಬ್ಲ್ಯಾಕ್​ ಮೇಲ್​ ತಂತ್ರವಾಗಿದೆ ಎಂದಿದ್ದಾರೆ.

  • Jai Shree Ram 🙏 Why I was not treated like Aamir why Salman Butt not got chance to play for Pakistan again why Mohd Asif the lethal and finest art of swing bowling carrier finished and not treated like Aamir.What Aamir gives ? Bitter truth https://t.co/vUDEVMovP0

    — Danish Kaneria (@DanishKaneria61) May 15, 2021 " class="align-text-top noRightClick twitterSection" data=" ">

ಕಳೆದ ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಮೊಹಮ್ಮದ್​ ಅಮೀರ್​​​, ತಮಗೆ ಕ್ರಿಕೆಟ್ ಮಂಡಳಿ ಅವಮಾನ ಮಾಡಿದ್ದು, ಗೌರವ ನೀಡುತ್ತಿಲ್ಲ. ಹೀಗಾಗಿ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು.

mohammad amir
ಮೊಹಮ್ಮದ್ ಅಮೀರ್​​

ಇದನ್ನೂ ಓದಿ: ಎಲ್ಲರಿಗೂ ಒಂದು ನ್ಯಾಯ, ನನಗೆ ಮಾತ್ರ ಬೇರೆ ಏಕೆ ? ಪಿಸಿಬಿ ನಡವಳಿಕೆ ವಿರುದ್ಧ ಕನೇರಿಯಾ ಆಕ್ರೋಶ

ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸಂಪೂರ್ಣ ಸ್ವಾತಂತ್ರ್ಯವಿದೆ. ಆದರೆ, ಮೊಹಮ್ಮದ್​ ಅಮೀರ್​ ಇದೇ ತಂತ್ರಗಾರಿಕೆ ಮೂಲಕ ಪಾಕ್ ಕ್ರಿಕೆಟ್ ಮಂಡಳಿಯನ್ನ ಬ್ಲ್ಯಾಕ್​ ಮೇಲ್​ ಮಾಡ್ತಿದ್ದು, ತಂಡಕ್ಕೆ ಕಮ್​ಬ್ಯಾಕ್ ಮಾಡುವ ಇರಾದೆ ಅವರಿಗೆ ಇದೆ ಎಂದಿದ್ದಾರೆ. ಇದರ ಜತೆಗೆ ಅವರು ಇಂಗ್ಲೆಂಡ್​ನ ಪೌರತ್ವ ತೆಗೆದುಕೊಂಡು ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಆಡುವ ಇರಾದೆ ಇಟ್ಟುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಿಸ್ಬಾ ಮತ್ತು ಸಹಚರರು ತಂಡ ಬಿಟ್ಟರೆ ಮತ್ತೆ ಪಾಕ್ ಪರ ಆಡುವೆ; ಮೊಹಮ್ಮದ್ ಅಮೀರ್​

ಮ್ಯಾಚ್​ ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ದ ಮೊಹಮ್ಮದ್​ ಅಮೀರ್ ತದನಂತರ ಪಾಕ್​ ಕ್ರಿಕೆಟ್ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದರು. ಅನೇಕ ಲೀಗ್​ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವೇಗದ ಬೌಲರ್​ ಕಳೆದ ವರ್ಷ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡು, ವಿದೇಶಿ ಲೀಗ್​ಗಳಲ್ಲಿ ಮಾತ್ರ ಭಾಗಿಯಾಗುತ್ತಿದ್ದಾರೆ. ಈ ಹಿಂದೆ ಕೂಡ ಕನೇರಿಯಾ ಪಾಕ್​ ಕ್ರಿಕೆಟ್ ಮಂಡಳಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅನಿಲ್​ ದಲ್ಪತ್​ ನಂತರ ಪಾಕಿಸ್ತಾನ ಪರ ಆಡಿದ ಎರಡನೇ ಹಿಂದೂ ಆಟಗಾರನಾಗಿದ್ದ ಕನೇರಿಯಾ 2012ರಲ್ಲಿ ಮ್ಯಾಚ್​ ಫಿಕ್ಸಿಂಗ್​ನಲ್ಲಿ ಸಿಲುಕಿ ಅಜೀವ ನಿಷೇಧಕ್ಕೊಳಗಾಗಿದ್ದಾರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.