ETV Bharat / sports

ತಮಿಳುನಾಡಿನ ಮಾಜಿ ಕ್ರಿಕೆಟಿಗರನ್ನು​​ ಗೌರವಿಸಿ, 7 ಲಕ್ಷರೂ. ನೆರವು ನೀಡಿದ ಸಿಎಸ್​ಕೆ - Shri R Prabhakar and Shri K Parthasarathy

ತಮಿಳು ನಾಡು ಕ್ರಿಕೆಟ್​ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿರುವ ಮಾಜಿ ಕ್ರಿಕೆಟಿಗರನ್ನು ಗೌರವಿಸುವುದಕ್ಕಾಗಿ ಮಂಡಳಿ ಕೆಲವು ಹಿರಿಯ ಕ್ರಿಕೆಟಿಗರನ್ನು ಗುರುತಿಸಿ ಮೊದಲು 5 ಲಕ್ಷ ರೂ.ನೀಡಲು ತೀರ್ಮಾನಿಸಿತ್ತು. ಈ ಮಹತ್ಕಾರ್ಯಕ್ಕೆ ಕೈ ಜೋಡಿಸಿದ ಸಿಎಸ್​ಕೆ ಪ್ರತ್ಯೇಕವಾಗಿ ಪ್ರತಿಯೊಬ್ಬ ಫಲಾನುಭವಿಗಳಿಗೆ ತಲಾ 7 ಲಕ್ಷ ರೂ ನೀಡಿ ಗೌರವಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ಸೂಪರ್ ಕಿಂಗ್ಸ್
author img

By

Published : Aug 10, 2021, 9:59 PM IST

ಚೆನ್ನೈ: 3 ಬಾರಿಯ ಐಪಿಎಲ್ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್​ ತಮಿಳುನಾಡಿನ ನಾಲ್ಕು ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್​ಗೆ ತಮ್ಮದೇ ಆದ ಸೇವೆ ಸಲ್ಲಿಸಿರುವ ಪಿಚ್​ ಕ್ಯೂರೇಟರ್​ ಕೆ ಪಾರ್ಥಸಾರಥಿ ಅವರಿಗೆ ಸನ್ಮಾನ ಮಾಡಿ, ತಲಾ 7 ಲಕ್ಷ ರೂಪಾಯಿಗಳನ್ನು ನೀಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್​ ಟಿಎನ್​ಸಿಎ ಕಾರ್ಯದರ್ಶಿ ಆರ್​ಎಸ್​ ರಾಮಸ್ವಾಮಿ ಅವರ ಸಮ್ಮುಖದಲ್ಲಿ ರಾಜ್ಯ ಕಂಡ ಲೆಜೆಂಡರಿ ಕ್ರಿಕೆಟಿಗರಿಗೆ ಚೆಕ್​ ವಿತರಿಸಿದ್ದಾರೆ.

ತಮಿಳು ನಾಡು ಕ್ರಿಕೆಟ್​ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿರುವ ಮಾಜಿ ಕ್ರಿಕೆಟಿಗರನ್ನು ಗೌರವಿಸುವುದಕ್ಕಾಗಿ ಮಂಡಳಿ ಕೆಲವು ಹಿರಿಯ ಕ್ರಿಕೆಟಿಗರನ್ನು ಗುರುತಿಸಿ ಮೊದಲು 5 ಲಕ್ಷ ರೂ. ನೀಡಲು ತೀರ್ಮಾನಿಸಿತ್ತು. ಈ ಮಹತ್ಕಾರ್ಯಕ್ಕೆ ಕೈ ಜೋಡಿಸಿದ ಸಿಎಸ್​ಕೆ ಪ್ರತ್ಯೇಕವಾಗಿ ಪ್ರತಿಯೊಬ್ಬ ಫಲಾನುಭವಿಗಳಿಗೆ ತಲಾ 7 ಲಕ್ಷ ರೂ ನೀಡಿ ಗೌರವಿಸಿದೆ.

ತಮಿಳುನಾಡಿನ ಪರ 50 ರಿಂದ 60ರ ದಶಕದಲ್ಲಿ ಆಡಿದ್ದ ಕೆಆರ್ ರಾಜಗೋಪಾಲ್, ನಜಮ್ ಹುಸೇನ್, ಎಸ್​ವಿಎಸ್ ಮಣಿ ಮತ್ತು ಆರ್. ಪ್ರಭಾಕರ್ ಅವರು ತಮಿಳುನಾಡು ಕ್ರಿಕೆಟ್​ ಮಂಡಳಿ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿಯಿಂದ ಗೌರವಕ್ಕೆ ಪಾತ್ರರಾಗಿದ್ದಾರೆ.

ಇತ್ತೀಚೆಗೆ ಚೆನ್ನೈ ಸೂಪರ್​ ಕಿಂಗ್ಸ್​ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಜಾವಲಿನ್ ಥ್ರೋವರ್​ ನೀರಜ್​ ಚೋಪ್ರಾ ಅವರಿಗೂ ಒಂದು ಕೋಟಿ ರೂಪಾಯಿಯನ್ನು ಬಹುಮಾನವಾಗಿ ಪ್ರಕಟಿಸಿತ್ತು. ಜೊತೆಗೆ 87.58 ಮೀಟರ್​ ಜಾವಲಿನ್ ಎಸೆದಿದ್ದಕ್ಕಾಗಿ 8,758 ನಂಬರ್​ನ ವಿಶೇಷ ಜರ್ಸಿಯನ್ನು ನೀರಜ್​ಗೆ ಗೌರವಪೂರ್ವಕವಾಗಿ ನೀಡುವುದಾಗಿ ಘೋಷಿಸಿತ್ತು.

ಇನ್ನೂ ಕೋವಿಡ್ 19 ಸಂದರ್ಭದಲ್ಲೂ ಸಿಎಸ್​ಕೆ ತಮಿಳುನಾಡು ಸರ್ಕಾರಕ್ಕೆ 450 ಆಮ್ಲಜನಕ ಸಾಂದ್ರಕಗಳನ್ನು ದೇಣಿಗೆಯಾಗಿ ನೀಡಿ ಅಭಿಮಾನಿಗಳಿಂದ ಪ್ರಶಂಸೆಗೆ ಪಾತ್ರವಾಗಿತ್ತು.​

ಇದನ್ನು ಓದಿ:ಎನ್​ಸಿಎ ಮುಖ್ಯಸ್ಥ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ ಬಿಸಿಸಿಐ.. ದ್ರಾವಿಡ್ ಮುಂದಿದೆ ಡಬಲ್​ ಆಯ್ಕೆ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.