ETV Bharat / sports

ವರ್ಕೌಟ್​ನಲ್ಲಿ ಫುಲ್​ ಬ್ಯುಸಿಯಾದ ಕೆಎಲ್​... ಕಮೆಂಟ್ ಮಾಡಿದ ಆತಿಯಾ ಶೆಟ್ಟಿ! - ಕೆ.ಎಲ್ ರಾಹುಲ್​ ವರ್ಕೌಟ್​

ಸಂಪೂರ್ಣವಾಗಿ ಚೇತರಿಸಿಕೊಂಡಿರುವ ರಾಹುಲ್ ಇದೀಗ ಇಂಗ್ಲೆಂಡ್​​ ವಿಮಾನ ಹತ್ತಲು ಸಿದ್ಧವಾಗಿದ್ದು, ಅದಕ್ಕೋಸ್ಕರ ವರ್ಕೌಟ್​ ಮಾಡ್ತಿದ್ದಾರೆ.

Cricketer KL Rahul
Cricketer KL Rahul
author img

By

Published : May 26, 2021, 3:43 AM IST

ಹೈದರಾಬಾದ್​: ಇಂಡಿಯನ್​ ಪ್ರೀಮಿಯರ್ ಲೀಗ್​ ವೇಳೆ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಕ್ರಿಕೆಟಿಗ ಕೆ.ಎಲ್​ ರಾಹುಲ್​ ಇದೀಗ ಚೇತರಿಸಿಕೊಂಡಿದ್ದು, ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​​ನಲ್ಲಿ ಭಾಗಿಯಾಗಲು ತಯಾರಿ ನಡೆಸಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕಿಂಗ್ಸ್ ಪಂಜಾಬ್​ ತಂಡ ಮುನ್ನಡೆಸಿದ್ದ ಕೆ.ಎಲ್​ ರಾಹುಲ್​​ ಅಪೆಂಡಿಸೈಟಿಸ್​ ತೊಂದರೆಯಿಂದ ಬಳಲಿದ್ದರು. ಹೀಗಾಗಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಸದ್ಯ ಗುಣಮುಖರಾಗಿರುವ ರಾಹುಲ್​ ಟೀಂ ಇಂಡಿಯಾ ಪ್ಲೇಯರ್ಸ್​​ ಜತೆ ಇಂಗ್ಲೆಂಡ್​ಗೆ ತೆರಳಲಿದ್ದಾರೆ.

ಇದನ್ನೂ ಓದಿ: ಲಂಕಾ ವಿರುದ್ಧ 2ನೇ ಏಕದಿನ ಗೆದ್ದ ಬಾಂಗ್ಲಾ... 2-0 ಅಂತರದಿಂದ ಸರಣಿ ಕೈವಶ

ಇದರ ಮಧ್ಯೆ ತಾವು ವರ್ಕೌಟ್​ ಮಾಡ್ತಿರುವ ಕೆಲವೊಂದು ಫೋಟೋ ಇನ್​​ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ಅದಕ್ಕೆ ಆತಿಯಾ ಶೆಟ್ಟಿ ಸೇರಿ ಅನೇಕರು ಕಮೆಂಟ್ ಮಾಡಿದ್ದಾರೆ. ಈ ಹಿಂದಿನಿಂದಲೂ ಆತಿಯಾ ಶೆಟ್ಟಿ ಹಾಗೂ ಕೆ.ಎಲ್​ ರಾಹುಲ್​ ನಡುವೆ ಏನೋ ನಡೆಯುತ್ತಿದೆ ಎಂಬು ಮಾತು ಕೇಳಿ ಬರ್ತಿದ್ದು, ಇಲ್ಲಿಯವರೆಗೆ ಉತ್ತರ ಸಿಕ್ಕಿಲ್ಲ. ಇದೀಗ ಕಮೆಂಟ್​ ಬಾಕ್ಸ್​ನಲ್ಲಿ ಆತಿಯಾ Emoji ಹಾಕಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧದ ಐಸಿಸಿ ಟೆಸ್ಟ್​ ಚಾಂಪಿಯನ್​ ಫೈನಲ್​ ಹಾಗೂ ಇಂಗ್ಲೆಂಡ್​ ವಿರುದ್ಧದ ಐದು ಟೆಸ್ಟ್​ ಪಂದ್ಯಗಳಿಗಾಗಿ ಘೋಷಣೆಯಾಗಿರುವ ತಂಡದಲ್ಲಿ ಕೆ.ಎಲ್​ ರಾಹುಲ್​ ಇದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.