ನವದೆಹಲಿ: ಭಾರತ ತಂಡದ ಸ್ಪಿನ್ ಲೆಜೆಂಡ್ ಹರ್ಭಜನ್ ಸಿಂಗ್ ಖಲಿಸ್ತಾನ ಉಗ್ರನ ಫೋಟೋವೊಂದನ್ನು ತನ್ನ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಹಾಕಿ, ಆತನನ್ನ ಹುತಾತ್ಮ ಎಂದು ಸ್ಮರಿಸುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
1984ರಲ್ಲಿ ಭಾರತ ಸೇನೆಯ ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಪಂಜಾಬ್ನ ಪ್ರಸಿದ್ಧ ಸ್ವರ್ಣ ಮಂದಿರಲ್ಲಿ ಅಡಗಿದ್ದ ಪ್ರತ್ಯೇಕ ಖಲಿಸ್ತಾನಕ್ಕಾಗಿ ಹೋರಾಟ ಮಾಡುತ್ತಿದ್ದ ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಅದರಲ್ಲಿ ಜರ್ನೈಲ್ ಸಿಂಗ್ ಬಿಂದ್ರನ್ವಾಲೆ ಕೂಡ ಹತನಾಗಿದ್ದನು.
-
My heartfelt apology to my people..🙏🙏 pic.twitter.com/S44cszY7lh
— Harbhajan Turbanator (@harbhajan_singh) June 7, 2021 " class="align-text-top noRightClick twitterSection" data="
">My heartfelt apology to my people..🙏🙏 pic.twitter.com/S44cszY7lh
— Harbhajan Turbanator (@harbhajan_singh) June 7, 2021My heartfelt apology to my people..🙏🙏 pic.twitter.com/S44cszY7lh
— Harbhajan Turbanator (@harbhajan_singh) June 7, 2021
ಭಾರತಕ್ಕಾಗಿ 20 ವರ್ಷಗಳ ಕಾಲ ಕ್ರಿಕೆಟ್ ಆಡಿರುವ ಹರ್ಭಜನ್ ಸಿಂಗ್ ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಅಂದು ಸೇನೆಯಿಂದ ಹತ್ಯೆಯಾಗಿದ್ದ ಉಗ್ರರ ಫೋಟೋಗಳನ್ನು ಶೇರ್ ಮಾಡಿ ಪ್ರಾಣಂ ಶಹೀದ ನು (Salute to martyr- ಹುತಾತ್ಮರಿಗೆ ಪ್ರಣಾಮ) ಎಂದು ಬರೆದುಕೊಂಡಿದ್ದರು.
ಆದರೆ ಸಾವಿರಾರು ಹಿಂದೂಗಳ ಮಾರಣಹೋಮಕ್ಕೆ ಕಾರಣನಾಗಿದ್ದ ಬಿಂದ್ರನ್ವಾಲೆಯನ್ನು ಸ್ಮರಿಸಿದ್ದರಿಂದ ಭಾರತೀಯ ಅಭಿಮಾನಿಗಳು ಹರ್ಭಜನ್ ವಿರುದ್ಧ ಕಿಡಿಕಾರಿದ್ದರು.
ಆದರೆ ಇಂದು ಭಜ್ಜಿ ಟ್ವಿಟರ್ನಲ್ಲಿ ಪೋಸ್ಟ್ ಮಾಡುವ ಮೂಲಕ ಭಾರತೀಯರ ಕ್ಷಮೆಯಾಚಿಸಿದ್ದಾರೆ.
"ನಿನ್ನೆ ನಾನು ನನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಕುರಿತು ಸ್ಪಷ್ಟನೆ ಮತ್ತು ಕ್ಷಮೆಯಾಚಿಸುತ್ತಿದ್ದೇನೆ. ಅದು ಏನನ್ನು ಸೂಚಿಸುತ್ತದೆ ಮತ್ತು ಯಾವುದರ ಮೇಲೆ ನಿಂತಿದೆ ಎಂದು ಅರಿವಿಲ್ಲದೆ ವಾಟ್ಸಪ್ನಲ್ಲಿ ಬಂದ ಫಾರ್ವರ್ಡ್ ಸಂದೇಶವನ್ನು ನಾನು ಆತುರದಿಂದ ಪೋಸ್ಟ್ ಮಾಡಿದ್ದೇನೆ. ಅದು ನನ್ನ ತಪ್ಪು, ನಾನು ಅದನ್ನು ಸ್ವೀಕರಿಸುತ್ತೇನೆ.
ನಾನು ಯಾವುದೇ ಸಂದರ್ಭದಲ್ಲಿ ಅಂತಹ ಪೋಸ್ಟ್ಗಳನ್ನು ಅನುಮೋದಿಸುವುದಿಲ್ಲ ಅಥವಾ ಚಿತ್ರಗಳನ್ನು ಹರಿಬಿಬಿಡುವ ಜನರನ್ನು ಬೆಂಬಲಿಸುವುದಿಲ್ಲ, ನಾನು ಭಾರತಕ್ಕಾಗಿ ಹೋರಾಡುವ ಸಿಖ್ ಹೊರತೂ ಅದರ ವಿರುದ್ಧ ಹೋರಾಡುವವನಲ್ಲ. ನನ್ನ ಈ ಅರಿವಿಲ್ಲದ ತಪ್ಪಿನಿಂದ ರಾಷ್ಟ್ರದ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಇದು ನನ್ನ ಬೇಷರತ್ತಾದ ಕ್ಷಮೆಯಾಚನೆಯಾಗಿದೆ, ವಾಸ್ತವವಾಗಿ ನನ್ನ ಜನರ ವಿರುದ್ಧ ರಾಷ್ಟ್ರ ವಿರೋಧಿ ಗುಂಪನ್ನು ಬೆಂಬಲಿಸುವ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ." ಎಂದು ಟ್ವಿಟರ್ನಲ್ಲಿ ಕ್ಷಮೆ ಕೋರಿದ್ದಾರೆ.
ಮುಂದುವರಿಸಿ- ನಾನು ಈ ದೇಶಕ್ಕಾಗಿ 20 ವರ್ಷಗಳಿಂದ ನನ್ನ ರಕ್ತ ಮತ್ತು ಬೆವರನ್ನು ಹರಿಸಿದ್ದೇನೆ ಮತ್ತು ಭಾರತ ವಿರೋಧಿಯಾದ ಯಾವುದನ್ನೂ ಎಂದಿಗೂ ಬೆಂಬಲಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನು ಓದಿ: WTC ಫೈನಲ್: ಪಿಚ್ ಸ್ವಿಂಗ್ಗೆ ನೆರವಾದರೆ ಕೊಹ್ಲಿ-ಭಾರತೀಯ ಬ್ಯಾಟ್ಸ್ಮನ್ಸ್ ನಮ್ಮ ಬೌಲರ್ಗಳೆದುರು ಪರದಾಡ್ತಾರೆ!