ETV Bharat / sports

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಆಡುವ ಸಾಧ್ಯತೆ ಇದೆ: ರೋಹಿತ್ ಶರ್ಮಾ

ಡೆಂಗ್ಯೂ ಜ್ವರಕ್ಕೆ ತುತ್ತಾಗಿದ್ದ ಶುಭ್‌ಮನ್​ ಗಿಲ್​ ಪಾಕಿಸ್ತಾನದ ವಿರುದ್ಧದ ನಾಳಿನ ಪಂದ್ಯದಲ್ಲಿ ಆಡುವ ಸಾಧ್ಯತೆಯ ಬಗ್ಗೆ ನಾಯಕ ರೋಹಿತ್​ ಶರ್ಮಾ ಮಾಹಿತಿ ನೀಡಿದರು.

Etv Bharat
Etv Bharat
author img

By ETV Bharat Karnataka Team

Published : Oct 13, 2023, 10:44 PM IST

ಅಹಮದಾಬಾದ್ (ಗುಜರಾತ್): ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆಯಲಿರುವ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಹಣಾಹಣಿಯಲ್ಲಿ ಆರಂಭಿಕ ಬ್ಯಾಟರ್ ಶುಭ್‌ಮನ್​ ಗಿಲ್ ಆಡುತ್ತಾರಾ ಎಂಬ ಬಗ್ಗೆ ಭಾರತದ ನಾಯಕ ರೋಹಿತ್ ಶರ್ಮಾ ಮಹತ್ವದ ಮಾಹಿತಿ ನೀಡಿದರು. ವಿಶ್ವಕಪ್​​ ತಂಡ ಸೇರಿಕೊಂಡ ಗಿಲ್​ ಡೆಂಗ್ಯೂಗೆ ತುತ್ತಾಗಿ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಬುಧವಾರ ಅಹಮದಾಬಾದ್​ ತಲುಪಿದ ಗಿಲ್​, ನಿನ್ನೆ (ಗುರುವಾರ) ನೆಟ್ಸ್​ನಲ್ಲಿ ಅಭ್ಯಾಸ ಮಾಡಿದ್ದರು. ಅಲ್ಲದೇ ಇಂದೂ ಸಹ ತಂಡದೊಂದಿಗೆ ಮೈದಾನದಲ್ಲಿ ಬೆವರಿಳಿಸಿದ್ದಾರೆ.

  • " class="align-text-top noRightClick twitterSection" data="">

ಪಂದ್ಯದ ಮುನ್ನಾದಿನವಾದ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಯಕ ರೋಹಿತ್​ ಶರ್ಮಾ ಮಾತನಾಡಿ, "ಅವರು ಶೇ 99 ರಷ್ಟು ತಂಡದಲ್ಲಿ ಲಭ್ಯವಿರುತ್ತಾರೆ. ನಾಳೆ ನೋಡೋಣ" ಎಂದರು.

ತಂಡದ ಆಟಗಾರರ ಬಗ್ಗೆ ಕೇಳಿದಾಗ, "ನಾನಿನ್ನೂ ಪಿಚ್ ನೋಡಿಲ್ಲ. ಆದರೆ, ನಾವು ಯಾವುದೇ ಸಂಯೋಜನೆಯೊಂದಿಗೆ ಆಡಲು ಸಿದ್ಧ. ಯಾವುದೇ ರೀತಿಯ ಪರಿಸ್ಥಿತಿಯಲ್ಲೂ ಆಡುತ್ತೇವೆ ಎಂಬುದರ ಆಧಾರದ ಮೇಲೆ ತಂಡವಾಗಿ ಕಾರ್ಯನಿರ್ವಹಿಸುತ್ತೇವೆ. ತಂಡದಲ್ಲಿ ಬೇಕಾದರೆ ಎರಡು ಬದಲಾವಣೆ ಆಗಬಹುದು, ಅದಕ್ಕೆ ತಂಡದ ಮನಸ್ಥಿತಿ ಸಿದ್ಧವಾಗಿದೆ. ಬದಲಾವಣೆಗಳ ಬಗ್ಗೆ ಆಟಗಾರರಿಗೆ ಮುಂಚಿತವಾಗಿ ತಿಳಿಸಲಾಗಿದೆ. ಆದ್ದರಿಂದ ಆಟಗಾರರೊಂದಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನಮಗೆ ಮೂರು ಸ್ಪಿನ್ನರ್‌ಗಳನ್ನು ಆಡುವ ಅವಶ್ಯಕತೆ ಇದ್ದರೆ ನಾವು ಮೂರು ಸ್ಪಿನ್ನರ್‌ಗಳ ಜೊತೆ ಮೈದಾನಕ್ಕಿಳಿಯುತ್ತೇವೆ" ಎಂದರು.

ಪಂದ್ಯದ ಗೆಲುವಿಗೆ ಟಾಸ್​ ಎಷ್ಟು ಮುಖ್ಯವಾಗುತ್ತದೆ ಎಂಬ ಪ್ರಶ್ನೆಗೆ, "ದೆಹಲಿಯಲ್ಲಿ ನಾವು ಮಂಜು ನಿರೀಕ್ಷಿಸಿದ್ದೆವು. ಆದರೆ, ಮಂಜು ಇರಲಿಲ್ಲ. ಚೆನ್ನೈನಲ್ಲೂ 25 ಓವರ್‌ಗಳ ನಂತರ ಅಂದರೆ ಶೇ.75ರಷ್ಟು ಆಟ ಮುಗಿದಿತ್ತು. ಹಾಗಾಗಿ, ಇಬ್ಬನಿ ಒಂದು ಪ್ರಮುಖ ಅಂಶ ಎಂದು ನಾನು ಭಾವಿಸುವುದಿಲ್ಲ. ತಂಡವು ಆರಾಮವಾಗಿ ಆಡುವುದನ್ನು ನಾವು ಬಯಸುತ್ತೇವೆ" ಎಂದು ಹೇಳಿದರು.

ಕಳೆದ ಪಂದ್ಯದ ಶತಕದ ಆಟದ ಪರಿಣಾಮದ ಬಗ್ಗೆ ಕೇಳಿದಾಗ, " ನನಗೆ, ತಯಾರಿ ಬಹಳ ಮುಖ್ಯ. ಪ್ರತಿ ಪಂದ್ಯಕ್ಕೂ ಉತ್ತಮ ತಯಾರಿಗಾಗಿ ನನ್ನ ಕಡೆಯಿಂದ ಎಲ್ಲವನ್ನೂ ಮಾಡಿದ್ದೇನೆ. ಕಳೆದ ಪಂದ್ಯದಲ್ಲಿ ಏನು ಮಾಡಿದ್ದೇನೆ ಎಂಬುದು ಮುಖ್ಯವಲ್ಲ. ಅದರಿಂದ ಸ್ವಲ್ಪ ಆತ್ಮವಿಶ್ವಾಸವನ್ನು ತೆಗೆದುಕೊಳ್ಳಬಹುದು. ಆದರೆ ಕ್ರೀಡೆಯಲ್ಲಿ ಪ್ರತಿದಿನವೂ ತಾಜಾ ದಿನವೇ. ನೀವು ವಿಭಿನ್ನ ಎದುರಾಳಿಗಳನ್ನು ಎದುರಿಸುತ್ತೇವೆ, ಹೊಸ ಸವಾಲುಗಳು ಇರುತ್ತವೆ. ಎಲ್ಲವನ್ನೂ ಎದುರಿಸಲು ಸಿದ್ಧರಾಗಿರಬೇಕು" ಎಂದು ರೋಹಿತ್​ ತಿಳಿಸಿದರು.

ಇದನ್ನೂ ಓದಿ: ಕೇನ್‌ ವಿಲಿಯಮ್ಸನ್, ಡೇರಿಲ್‌ ಮಿಚೆಲ್‌ ಜವಾಬ್ದಾರಿಯುತ ಆಟ; ಬಾಂಗ್ಲಾ ಮಣಿಸಿದ ನ್ಯೂಜಿಲೆಂಡ್‌ಗೆ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ವಿಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.