ಬರ್ಮಿಂಗ್ಹ್ಯಾಮ್: ವಿಶ್ವಕಪ್ನಲ್ಲಿ ಇಂದು ಬಲಿಷ್ಠ ತಂಡಗಳು ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ.
ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು,ಆಲ್ರೌಡರ್ ವಿಜಯ್ ಶಂಕರ್ ಬದಲು ರಿಷಭ್ ಪಂತ್ ಸ್ಥಾನ ಪಡೆದುಕೊಂಡಿದ್ದಾರೆ.
-
England wins the toss and they will bat first.#TeamIndia #CWC19 pic.twitter.com/SYLoVLG0G5
— BCCI (@BCCI) June 30, 2019 " class="align-text-top noRightClick twitterSection" data="
">England wins the toss and they will bat first.#TeamIndia #CWC19 pic.twitter.com/SYLoVLG0G5
— BCCI (@BCCI) June 30, 2019England wins the toss and they will bat first.#TeamIndia #CWC19 pic.twitter.com/SYLoVLG0G5
— BCCI (@BCCI) June 30, 2019
ವಿಶ್ವಕಪ್ ಟೂರ್ನಿ ಸದ್ಯ ಬಹುಮುಖ್ಯ ಘಟ್ಟ ತಲುಪಿದ್ದು, ಸೆಮಿಫೈನಲ್ ಬಗ್ಗೆ ಲೆಕ್ಕಾಚಾರಗಳು ಶುರುವಾಗಿವೆ. ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಸೆಮಿಸ್ ರೇಸ್ನಲ್ಲಿ ಮುಂಚೂಣಿಯಲ್ಲಿದ್ದು, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ಬಾಂಗ್ಲಾದೇಶ, ಮತ್ತು ಶ್ರೀಲಂಕಾ ತಂಡಗಳು ನಾಲ್ಕರ ಘಟ್ಟ ತಲುಪಲು ಹವಣಿಸುತ್ತಿವೆ. ಇನ್ನ ಅಗ್ರ ಶ್ರೇಯಾಂಕದೊಂದಿಗೆ ಟೂರ್ನಿ ಆರಂಭಿಸಿ ಆರಂಭದಲ್ಲಿ ಅಬ್ಬರಿಸಿದ್ದ ಇಂಗ್ಲೆಂಡ್ ನಂತರ ಶ್ರೀಲಂಕಾ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋತು ಸೆಮೀಸ್ ರೇಸ್ನಲ್ಲಿ ಹಿಂದೆ ಬಿದ್ದಿದೆ.
ವಿಶ್ವಕಪ್ನಲ್ಲಿ ಭಾರತ ಇಂಗ್ಲೆಂಡ್ ಇದುವರೆಗೂ 7 ಬಾರಿ ಮುಖಾಮುಖಿಯಾಗಿದ್ದು, 3 ಬಾರಿ ಇಂಗ್ಲೆಂಡ್ ಮತ್ತು 3 ಬಾರಿ ಭಾರತ ಜಯಸಾಧಿಸಿವೆ. ಮತ್ತೊಂದು ಪಂದ್ಯ ಟೈ ಮಾಡಿಕೊಳ್ಳುವ ಮೂಲಕ ಸಮಬಲ ಸಾಧಿಸಿವೆ.
ತಂಡಗಳು:
ಭಾರತ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ರಿಷಭ್ ಪಂತ್, ಕೆ.ಎಲ್. ರಾಹುಲ್, ಕೇದಾರ್ ಜಾಧವ್, ಎಂ.ಎಸ್.ಧೋನಿ, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ , ಜಸ್ಪ್ರೀತ್ ಬುಮ್ರಾ.
ಇಂಗ್ಲೆಂಡ್ : ಜಾಸನ್ ರಾಯ್, ಇಯಾನ್ ಮಾರ್ಗನ್(ನಾಯಕ), ಜಾನಿ ಬೇರ್ಸ್ಟೋ, ಜೋ ರೂಟ್, ಬೆನ್ ಸ್ಟೋಕ್ಸ್, ಜಾಸ್ ಬಟ್ಲರ್, ಕ್ರಿಸ್ ವೋಕ್ಸ್, ಅದಿಲ್ ರಶೀದ್, ಲಿಯಮ್ ಪ್ಲುಂಕೆಟ್, ಜೋಫ್ರಾ ಅರ್ಚರ್, ಮಾರ್ಕ್ ವುಡ್.