ದುಬೈ: ಕಳೆದ 10 ವರ್ಷಗಳಲ್ಲಿ ನಮ್ಮ ದೇಶದ ಕ್ರಿಕೆಟ್ ತಂಡ ಸಾಕಷ್ಟು ಬೆಳವಣಿಗೆ ಕಂಡಿದೆ ಎಂದು ಅಫ್ಘಾನಿಸ್ತಾನ ಲೆಗ್ ಸ್ಪಿನ್ನರ್ ರಶೀದ್ ಖಾನ್ ಹೇಳಿದ್ದು, ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನ ಟಿ-20 ವಿಶ್ವಕಪ್ ಗೆಲ್ಲುವುದು ಖಚಿತ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ನಾವು ಬಂದ ಸ್ಥಳದಲ್ಲಿ ನಮಗೆ ಸರಿಯಾದ ಸೌಲಭ್ಯಗಳಿಲ್ಲ. ಅಂತಹ ಸ್ಥಳದಿಂದ ನಾವು ಬಂದಿದ್ದೇವೆ. ನಾವೂ ವಿಶ್ವಕಪ್ಗಳನ್ನು ಆಡಿದ್ದೇವೆ. ಟೆಸ್ಟ್ ತಂಡವಾಗಬೇಕೆಂದು ಪ್ರತಿ ದೇಶದ ಕನಸಾಗಿದೆ. ನಾವೂ ಟೆಸ್ಟ್ ಪಂದ್ಯಗಳನ್ನು ಆಡಿದ್ದೇವೆ ಇದು ನಮ್ಮ ಸಾಧನೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಲ್ಲಿ ರಶೀದ್ ಖಾನ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮತ್ತಷ್ಟು ಮಾತನಾಡಿರುವ ರಶೀದ್ ಖಾನ್ ನಾವು ಟಿ-20 ವಿಶ್ವಕಪ್ ಗೆಲ್ಲುವ ಸಾಮರ್ಥ್ಯ ಹೊಂದಿದ್ದೇವೆ ಮತ್ತು ಇಡೀ ದೇಶ ನಾವು ವಿಶ್ವಕಪ್ ಗೆಲ್ಲಲು ಬಯಸುತ್ತದೆ. ಇದು ಪ್ರತಿಯೊಬ್ಬರ ಕನಸು, ಇದು ಪ್ರತಿಯೊಬ್ಬ ಆಟಗಾರನ ಗುರಿಯಾಗಿದೆ. ಭವಿಷ್ಯದಲ್ಲಿ ನಾವು ಕಪ್ ಗೆಲ್ಲುವ ಭರವಸೆಯಿದೆ ಎಂದಿದ್ದಾರೆ.
2016 ಟಿ-20 ವಿಶ್ವಕಪ್‌ನಲ್ಲಿ ಆಡಿದ್ದ ರಶೀದ್ ಖಾನ್ 16.33 ಸರಾಸರಿಯಲ್ಲಿ 11 ವಿಕೆಟ್ ಪಡೆದು ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಸ್ಥಾನದಲ್ಲಿದ್ದರು. ಈಗ ಯುಎಇ ಮತ್ತು ಒಮನ್ನಲ್ಲಿ ಟಿ-20 ವಿಶ್ವಕಪ್ ನಡೆಯಲಿದ್ದು, ಗ್ರೂಪ್ 2ರಲ್ಲಿ ಭಾರತ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ಇರುವ ಗುಂಪಿನಲ್ಲಿ ಅಫ್ಘಾನಿಸ್ತಾನವೂ ಇದೆ.
ಇದನ್ನೂ ಓದಿ: ಸೂರ್ಯಕುಮಾರ್, ಇಶಾನ್ಗೆ ಗೆಲುವಿನ ಹಸಿವು ಮುಗಿದಿರಬೇಕು: ಬ್ರಿಯಾನ್ ಲಾರಾ