ಬರ್ಮಿಂಗ್ಯಾಮ್: 2019ರ ವಿಶ್ವಕಪ್ನಲ್ಲಿ ಇಲ್ಲಿಯವರೆಗೂ ಟೀಂ ಇಂಡಿಯಾದ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯದ ಆಲ್ರೌಂಡರ್ ರವೀಂದ್ರ ಜಡೇಜಾ ಆಂಗ್ಲರ ಅದ್ಭುತ ಕ್ಯಾಚ್ ಪಡೆಯುವ ಮೂಲಕ ರನ್ ಮಳೆಗೆ ಬ್ರೇಕ್ ಹಾಕಿದರು.
ಭಾರತದ ವಿರುದ್ಧ ಇಂಗ್ಲೆಂಡ್ ಭರ್ಜರಿ ಆರಂಭ ಪಡೆಯಿತು. ಆಂಗ್ಲರ ಆರಂಭಿಕ ದಾಂಡಿಗರಾದ ಜಾಸನ್ ರಾಯ್ ಹಾಗೂ ಜಾನಿ ಬೇರ್ಸ್ಟೋವ್ ಕೊಹ್ಲಿ ಪಡೆಯ ಬೌಲರ್ಗಳ ಬೆವರಿಳಿಸಿದರು. ಸಿಕ್ಸರ್ ಹಾಗೂ ಬೌಂಡರಿಗಳ ಮಳೆಗರೆದ ಈ ಜೋಡಿ ಮೊದಲ ವಿಕೆಟ್ಗೆ ಕೇವಲ 22.1 ಓವರ್ಗಳಲ್ಲಿ 160 ರನ್ ಪೇರಿಸಿತು.
ಈ ವೇಳೆ ಕುಲ್ದೀಪ್ ಯಾದವ್ ಬೌಲಿಂಗ್ನಲ್ಲಿ ರಾಯ್ ಭರ್ಜರಿ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು. ಲಾಂಗ್ ಆನ್ನತ್ತ ಸಿಕ್ಸರ್ ಸಿಡಿಸಲು ಯತ್ನಿಸಿದ ರಾಯ್ ಅವರು ಜಡೇಜಾರ ಅದ್ಭುತ ಕ್ಯಾಚ್ಗೆ ಬಲಿಯಾದರು. ಡೈವ್ ಮೂಲಕ ಜಡೇಜಾ ಪಡೆದ ಕ್ಯಾಚ್ ಟೀಂ ಇಂಡಿಯಾ ಆಟಗಾರರ ಮುಖದಲ್ಲಿ ಮಂದಹಾಸ ಮೂಡಿಸಿತು. ಈ ಕ್ಯಾಚ್ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅತ್ಯುತ್ತಮ ಆರಂಭ ಪಡೆದ ಇಂಗ್ಲೆಂಡ್ ಬೃಹತ್ ಮೊತ್ತ ಗಳಿಸುವತ್ತ ಸಾಗುತ್ತಿದೆ.
-
Waow What A catch @imjadeja ❤️✌️ pic.twitter.com/Qj0BReY73G
— Bili Kiani17 🇵🇰 (@BiliKiani) June 30, 2019 " class="align-text-top noRightClick twitterSection" data="
">Waow What A catch @imjadeja ❤️✌️ pic.twitter.com/Qj0BReY73G
— Bili Kiani17 🇵🇰 (@BiliKiani) June 30, 2019Waow What A catch @imjadeja ❤️✌️ pic.twitter.com/Qj0BReY73G
— Bili Kiani17 🇵🇰 (@BiliKiani) June 30, 2019