ETV Bharat / sports

ವಿಶ್ವಕಪ್ ಫೈನಲ್‌: ಇಂಗ್ಲೆಂಡ್‌ಗೆ 241 ರನ್ ಟಾರ್ಗೆಟ್‌ ನೀಡಿದ ಕಿವೀಸ್!

ನ್ಯೂಜಿಲೆಂಡ್​ ಮತ್ತು ಇಂಗ್ಲೆಂಡ್​ ನಡುವಿನ ವಿಶ್ವಕಪ್​ ಫೈನಲ್​ ಮ್ಯಾಚ್​ನ ಮೊದಲ ಇನ್ನಿಂಗ್ಸ್​​ ಮುಗಿದಿದ್ದು, 50 ಓವರ್​ಗಳಲ್ಲಿ ನ್ಯೂಜಿಲೆಂಡ್​​ 8 ವಿಕೆಟ್‌ ನಷ್ಟಕ್ಕೆ 241 ರನ್​ಗಳಿಸಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ನ್ಯೂಜಿಲೆಂಡ್​​ಗೆ 241
author img

By

Published : Jul 14, 2019, 7:45 PM IST

Updated : Jul 14, 2019, 8:00 PM IST

ಲಂಡನ್​ : ನ್ಯೂಜಿಲೆಂಡ್​ ಮತ್ತು ಇಂಗ್ಲೆಂಡ್​ ನಡುವಿನ ವಿಶ್ವಕಪ್​ ಫೈನಲ್​ ಮ್ಯಾಚ್​ನ ಮೊದಲ ಇನ್ನಿಂಗ್ಸ್​​ ಮುಗಿದಿದ್ದು, ಇಂಗ್ಲೆಂಡ್‌ಗೆ ಕಿವೀಸ್ ​​ 241 ರನ್ ಸರಳ​ ಟಾರ್ಗೆಟ್‌ ನೀಡಿದೆ.

ಇದಕ್ಕೂ ಮೊದಲು ಟಾಸ್​ ಗೆದ್ದ ನ್ಯೂಜಿಲೆಂಡ್​ ಕ್ಯಾಪ್ಟನ್‌ ಕೇನ್‌ ವಿಲಿಯಮ್ಸನ್‌ ಮೊದಲು ಬ್ಯಾಟ್ ಮಾಡುವ ನಿರ್ಧಾರ ತೆಗೆದುಕೊಂಡರು. ಆರಂಭಿಕರಾಗಿ ಅಂಗಳಕ್ಕೆ ಬಂದ ಮಾರ್ಟಿನ್​ ಗಪ್ಟಿಲ್​ ತಂಡದ ಮೊತ್ತ ಕೇವಲ 29 ರನ್​ ತಲುಪಿದಾಗ ವಿಕೆಟ್ ಒಪ್ಪಿಸಿದ್ರು.
ಈ ವೇಳೆ ಹೆನ್ರಿ ನಿಕೋಲ್ಸ್ ಜೊತೆಗೂಡಿದ ನಾಯಕ ಕೇನ್ ವಿಲಿಯಮ್ಸನ್ ವಿಕೆಟ್ ನಷ್ಟವಾಗದಂತೆ ರಕ್ಷಣಾತ್ಮಕ ಆಟಕ್ಕೆ ಮುಂದಾದರು. ಇನ್ನಿಂಗ್ಸ್‌ ಕಟ್ಟುವತ್ತ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಕೇನ್ ರನ್‌ ಗಳಿಸಲು ಪರದಾಡಿದ್ರು. ಅವರು ಮೊದಲ 22 ಎಸೆತಗಳಲ್ಲಿ ಎರಡು ರನ್ ಮಾತ್ರ ದಾಖಲಿಸಿದ್ರು. ಅಂತಿಮವಾಗಿ 53 ಎಸೆತಗಳಲ್ಲಿ 30 ರನ್​ ಗಳಿಸಿ ಲಿಯಾಮ್ ಪ್ಲಂಕೆಟ್ ಎಸೆತದಲ್ಲಿ ವಿಕೆಟ್​ ಕೀಪರ್​ ಜೋಸ್​ ಬಟ್ಲರ್‌ಗೆ ಕ್ಯಾಚ್​​ ನೀಡಿದ ಕೇನ್ ಪೆವಿಲಿಯನ್ ಸೇರಿದರು.

ಆರಂಭಿಕ ಒತ್ತಡದಿಂದ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದ ಹೆನ್ರಿ ನಿಕೋಲ್ಸ್ ಅರ್ಧ ಶತಕ ಪೂರೈಸಿದರು. ಅಂತಿಮವಾಗಿ 77 ಎಸೆತಗಳಲ್ಲಿ 55 ರನ್​ ಗಳಿಸಿ ಲಿಯಾಮ್ ಪ್ಲಂಕೆಟ್ ಎಸೆತದಲ್ಲಿ ಬೌಲ್ಡ್​ ಆದರು.

ಇನ್ನು ರಾಸ್​ ಟೇಲರ್ ​31 ಎಸೆತಕ್ಕೆ 15 ರನ್​ ಪೇರಿಸಿ ಮಾರ್ಕ್​ ವುಡ್​ ಎಲ್​​ಬಿ ಬಲೆಗೆ ಬಿದ್ದರೆ, ಟಾಮ್​ ಲಾಥಮ್​ 56 ಎಸೆತಗಳಲ್ಲಿ 47 ರನ್​ ಪೇರಿಸಿ ಜೆ.ವಿನ್ಸ್‌ ಗೆ ಕ್ಯಾಚಿತ್ತರು.

ಜೆಮ್ಸ್​ ನಿಶಾಮ್​ 25 ಎಸೆತಗಳಲ್ಲಿ 19 ರನ್​ ಗಳಿಸಿ ಜೋ ರೂಟ್​ ಕೈಗೆ ಕ್ಯಾಚಿತ್ತು​ ಔಟ್​ ಆಗಿದ್ದಾರೆ. ಇನ್ನು ಗ್ರಾಂಡ್​ ಹೋಮ್​ ಕ್ರಿಸ್‌ ವೋಕ್ಸ್​ ಎಸೆತದಲ್ಲಿ ವಿನ್ಸ್​ಗೆ ಕ್ಯಾಚ್​ ನೀಡಿ ಔಟಾದ್ರು. ಅಲ್ಲದೇ ಹೆನ್ರಿ 2 ಎಸೆತಗಳಲ್ಲಿ 4 ರನ್​ಗಳಿಸಿ ಜೋಫ್ರಾಗೆ ಎಸೆತಕ್ಕೆ ಬೌಲ್ಡ್​ ಆದ್ರೆ, ಮಿಶೆಲ್‌ ಸ್ಯಾಂಟ್ನರ್‌​ ಮತ್ತು ಟ್ರೆಂಟ್​ ಬೋಲ್ಟ್​ ಔಟಾಗದೆ ಕ್ರಮವಾಗಿ 5 ಮತ್ತು 1 ರನ್​ಗಳಿಸಿದ್ದು, ಇನ್ನಿಂಗ್ಸ್​​ ಮುಕ್ತಾಯಕ್ಕೆ ನ್ಯೂಜಿಲೆಂಡ್​ 241 ಟಾರ್ಗೆಟ್​ ನೀಡಿದೆ.

ಇನ್ನು ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ ಮತ್ತು ಲಿಯಾಮ್ ಪ್ಲಂಕೆಟ್ ತಲಾ ಮೂರು ವಿಕೆಟ್ ಪಡೆದು ಮಿಂಚಿದ್ರು.

Intro:Body:Conclusion:
Last Updated : Jul 14, 2019, 8:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.