ಅಬುಧಾಬಿ: ಟಿ-20 ವಿಶ್ವಕಪ್ನ ಅರ್ಹತಾ ಪಂದ್ಯದಲ್ಲಿ ನಮೀಬಿಯಾ ತಂಡವನ್ನು ಶ್ರೀಲಂಕಾ ತಂಡ ಮಣಿಸಿದೆ. ಎ ಗುಂಪಿನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಏಳು ವಿಕೆಟ್ಗಳ ಗೆಲುವು ಸಾಧಿಸಿದೆ.
ಬೌಲಿಂಗ್ನಿಂದಲೇ ನಮೀಬಿಯಾ ತಂಡವನ್ನು ಕಟ್ಟಿಹಾಕಿದ ಶ್ರೀಲಂಕಾ ಪರ ಮಹೇಶ್ ತೀಕ್ಷನ (25 ರನ್ಗೆ 3 ವಿಕೆಟ್), ವನಿಂದು ಹಸರಂಗ(24 ರನ್ಗೆ 2 ವಿಕೆಟ್) ಕೇವಲ 96 ರನ್ಗಳಿಗೆ ನಮೀಬಿಯಾವನ್ನು ಸೀಮಿತಗೊಳಿಸಿದರು.
ಅದಲ್ಲದೇ ಭಾನುಕ ರಾಜಪಕ್ಸೆ 42 ಮತ್ತು ಅವಿಷ್ಕ ಫೆರ್ನಾಂಡೋ 30 ರನ್ಗಳಿಸುವ ಮೂಲಕ ಕೇವಲ 14.3 ಓವರ್ಗಳಲ್ಲಿ ನಮೀಬಿಯಾ ನೀಡಿದ್ದ ಅಲ್ಪಮೊತ್ತವನ್ನು ಭೇದಿಸಿ, ಗೆಲುವು ಸಾಧಿಸಿದರು.
ಇದೇ ವೇಳೆ ಶ್ರೀಲಂಕಾ ಟೀಂನ ಮಾಜಿ ನಾಯಕ ಬಂದುಲಾ ವರ್ನಾಪುರ ಅವರ ನಿಧನಕ್ಕಾಗಿ ಸಂತಾಪ ಸೂಚಿಸಿದ ಶ್ರೀಲಂಕಾ ತಂಡ ಕೈಗೆ ಪಟ್ಟಿ ಧರಿಸಿದ್ದರು.
ಇದನ್ನೂ ಓದಿ: T20 World Cup ಅಭ್ಯಾಸ ಪಂದ್ಯ : ಕಿಶನ್, ರಾಹುಲ್ ಬ್ಯಾಟಿಂಗ್ ಅಬ್ಬರ .. ಟೀಂ ಇಂಡಿಯಾಗೆ ಗೆಲುವು