ನಾಟಿಂಗ್ಹ್ಯಾಂ: ವಿಂಡೀಸ್ ಕ್ರಿಕೆಟ್ ತಂಡದ ದೈತ್ಯ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಸಿಕ್ಸರ್ ಬಾರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
-
Chris Gayle has now hit more sixes than anyone in Cricket World Cup history! #CWC19 pic.twitter.com/j4SG3UCzBP
— Cricket World Cup (@cricketworldcup) May 31, 2019 " class="align-text-top noRightClick twitterSection" data="
">Chris Gayle has now hit more sixes than anyone in Cricket World Cup history! #CWC19 pic.twitter.com/j4SG3UCzBP
— Cricket World Cup (@cricketworldcup) May 31, 2019Chris Gayle has now hit more sixes than anyone in Cricket World Cup history! #CWC19 pic.twitter.com/j4SG3UCzBP
— Cricket World Cup (@cricketworldcup) May 31, 2019
ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ನಿನ್ನೆಯ ಪಂದ್ಯದಲ್ಲಿ ಗೇಲ್ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡವನ್ನು ಬೇಗನೆ ಜಯದ ಹಾದಿಗೆ ತಂದು ನಿಲ್ಲಿಸಿದರು. ಅರ್ಧ ಶತಕ ಗಳಿಸಿದ ಗೇಲ್, ಮೂರು ಸಿಕ್ಸರ್ ಬಾರಿಸುವ ಮೂಲಕ ವಿಶ್ವಕಪ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಸರದಾರ ಎನ್ನಿಸಿಕೊಂಡರು.
ಇದಕ್ಕೂ ಮುಂಚಿನ ವಿಶ್ವಕಪ್ ಪಂದ್ಯಗಳಲ್ಲಿ 37 ಸಿಕ್ಸರ್ ಬಾರಿಸಿದ್ದ ಗೇಲ್ ನಿನ್ನೆ ಪಾಕ್ ವಿರುದ್ಧ ನಡೆದ ಪಂದ್ಯದಲ್ಲಿ ಮೂರು ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದರು.
ಇನ್ನು ಈ ಮುನ್ನ ವಿಶ್ವಕಪ್ನಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿರುವ ದಾಖಲೆ ಎಬಿ ಡಿವಿಲಿಯರ್ಸ್ ಹಾಗೂ ಗೇಲ್ ಹೆಸರಲ್ಲಿತ್ತು. ಇಬ್ಬರೂ ಕೂಡಾ 37 ಸಿಕ್ಸರ್ ಸಿಡಿಸಿದ್ದರು. ಆದರೆ ನಿನ್ನೆಯ ಪಂದ್ಯದಲ್ಲಿ ಗೇಲ್ 3 ಸಿಕ್ಸರ್ ಸಿಡಿಸಿ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.