ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯ 35ನೇ ಪಂದ್ಯದಲ್ಲಿ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತಿದ್ದು, ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಫೀಲ್ಡಿಂಗ್ ಆಯ್ದುಕೊಂಡಿದೆ.
-
News from the toss at The Riverside Durham!
— Cricket World Cup (@cricketworldcup) June 28, 2019 " class="align-text-top noRightClick twitterSection" data="
Faf du Plessis wins the toss and South Africa will bowl first 🏏 #SLvSA | #CWC19 pic.twitter.com/bChnq2x67b
">News from the toss at The Riverside Durham!
— Cricket World Cup (@cricketworldcup) June 28, 2019
Faf du Plessis wins the toss and South Africa will bowl first 🏏 #SLvSA | #CWC19 pic.twitter.com/bChnq2x67bNews from the toss at The Riverside Durham!
— Cricket World Cup (@cricketworldcup) June 28, 2019
Faf du Plessis wins the toss and South Africa will bowl first 🏏 #SLvSA | #CWC19 pic.twitter.com/bChnq2x67b
ದಕ್ಷಿಣ ಆಫ್ರಿಕಾ ತಂಡ ಈಗಾಗಲೆ ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದ್ದು, ಇಂದಿನ ಪಂದ್ಯ ಹರಿಣ ಪಡೆಗೆ ಮಹತ್ವದ್ದೇನಲ್ಲ. ಆದರೆ, ಶ್ರೀಲಂಕಾ ತಂಡ ಮಾತ್ರ ಇಂದಿನ ಪಂದ್ಯವನ್ನ ಗೆಲ್ಲಲೇ ಬೇಕಾಗಿದೆ. ಲಂಕನ್ನರು 2 ಪಂದ್ಯದಲ್ಲಿ ಜಯ ಸಾಧಿಸಿದ್ರೆ, ಎರಡು ಪಂದ್ಯ ಮಳೆಯಿಂದ ರದ್ದಾಗಿದ್ದು, ಎರಡು ಪಂದ್ಯದಲ್ಲಿ ಸೋಲು ಕಂಡಿದೆ. ಒಟ್ಟು 6 ಅಂಕ ಗಳಿಸಿದ್ದು, ಅಂತಿಮ ನಾಲ್ಕರ ಘಟ್ಟ ತಲುಪುವ ಕನಸು ಕಾಣುತ್ತಿದೆ.
ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡ 5 ಬಾರಿ ಮುಖಾಮುಖಿಯಾಗಿವೆ. ದಕ್ಷಿಣ ಆಫ್ರಿಕಾ ತಂಡ ಮೂರು ಪಂದ್ಯದಲ್ಲಿ ಜಯಗಳಿಸಿದ್ದರೆ, ಲಂಕಾ ತಂಡ ಒಂದು ಪಂದ್ಯದಲ್ಲಿ ಜಯ ಸಾಧಿಸಿದ್ದು, ಒಂದು ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ.
ಮೊದಲ ಬಾರಿಗೆ ಚಸ್ಟರ್ ಲಿ ಸ್ಟ್ರೀಟ್ನ ರಿವರ್ಸೈಡ್ ಗ್ರೌಂಡ್ನಲ್ಲಿ ಈ ಪಂದ್ಯ ನಡೆಯುತ್ತಿದ್ದು, ಎರಡೂ ತಂಡಗಳಿಗೆ ಪಿಚ್ ಕಂಡಿಷನ್ ಬಗ್ಗೆ ಗೊತ್ತಿಲ್ಲ. ಇಲ್ಲಿಯವರೆಗೂ ಈ ಮೈದಾನದಲ್ಲಿ ಚೇಸಿಂಗ್ ಮಾಡಿದ ತಂಡಗಳೇ ಹೆಚ್ಚು ಬಾರಿ ಗೆಲುವು ಸಾಧಿಸಿವೆ.
ತಂಡಗಳು
ಶ್ರೀಲಂಕಾ ತಂಡ: ದಿಮುತ್ ಕರುಣರತ್ನೆ (ನಾಯಕ), ಧನಂಜಯ್ ಡಿ ಸಿಲ್ವಾ, ಲಸಿತ್ ಮಲಿಂಗ, ಏಂಜೆಲೊ ಮ್ಯಾಥ್ಯೂಸ್, ಕುಶಾಲ್ ಮೆಂಡಿಸ್, ತಿಸಾರ ಪೆರೆರ, ಇಸುರು ಉದಾನ, ನುವಾನ್ ಪ್ರದೀಪ್, ಕುಶಾಲ್ ಪೆರೆರ, ಅವಿಶ್ಕ ಫರ್ನಾಂಡೋ, ಸುರಂಗ ಲಕ್ಮಲ್.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್, ಹಾಶಿಮ್ ಆಮ್ಲಾ, ಮಾರ್ಕ್ರಾಮ್, ಫಾಫ್ ಡು ಪ್ಲೆಸಿಸ್ (ನಾಯಕ), ಡೆರ್ ಡಸೆನ್, ಡ್ವೇನ್ ಪ್ರಿಟೋರಿಯಸ್, ಆಂಡಿಲೆ ಫೆಹಲುಕ್ವೇವೊ, ಕ್ರಿಸ್ ಮೋರಿಸ್, ಕಾಗಿಸೊ ರಬಾಡ, ಇಮ್ರಾನ್ ತಾಹಿರ್, ಜೆಪಿ ಡುಮಿನಿ.