ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟಿವ್ ಸ್ಮಿತ್ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
'ನಿಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜರ್ನಿ ಅದ್ಭುತವಾಗಿದೆ. ನೀವೊಬ್ಬ ನಂಬಲಸಾಧ್ಯವಾದ ಕಠಿಣ ಎದುರಾಳಿ. ಯಾವಾಗಲೂ ನಾನು ಮೆಚ್ಚಿಕೊಳ್ಳುವ ಆಟಗಾರ. ಪುಣೆ ತಂಡದಲ್ಲಿ ಕೆಲವು ವರ್ಷಗಳ ಕಾಲ ನಿಮ್ಮೊಂದಿಗೆ ಆಟವಾಡಿರುವುದಕ್ಕೆ ಬಹಳ ಸಂತೋಷವಿದೆ. ನಿಜವಾದ ಜಂಟಲ್ಮ್ಯಾನ್. ನಿಮ್ಮ ನಿವೃತ್ತಿ ಜೀವನ ಸುಖಮಯವಾಗಿರಲಿ' ಎಂದು ಸ್ಮಿತ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ. ಧೋನಿ ಜೊತೆ ಇರುವ ಫೋಟೋವನ್ನು ಅವರು ಶೇರ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಸಿಲುಕಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 2016 ಮತ್ತು 2017ರಲ್ಲಿ 2 ವರ್ಷ ನಿಷೇಧಕ್ಕೊಳಗಾಗಿತ್ತು. ಈ ವೇಳೆ ಧೋನಿ ಹಾಗೂ ಸ್ಮಿತ್ ಇಬ್ಬರೂ ಪುಣೆ ಸೂಪರ್ ಜೇಂಟ್ಸ್ ತಂಡದ ಪರ ಆಡಿದ್ದರು. 2017ರಲ್ಲಿ ಸ್ಮಿತ್ ನಾಯಕತ್ವದಲ್ಲಿ ರೈಸಿಂಗ್ ಪುಣೆ ತಂಡದ ಫೈನಲ್ ಪ್ರವೇಶಿಸಿತ್ತಾದರೂ 1 ರನ್ನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಕಾಣುವ ಮೂಲಕ ನಿರಾಶೆ ಅನುಭವಿಸಿತ್ತು.