ETV Bharat / sports

2021ರ ಟಿ-20 ವಿಶ್ವಕಪ್​ ಭಾರತದಿಂದ ಯುಎಇಗೆ ಸ್ಥಳಾಂತರಿಸಲು ಪಾಕ್​​ ಮನವಿ

ಬಿಸಿಸಿಐ ಕೂಡ ಇಂಗ್ಲೆಂಡ್​​ ವಿರುದ್ಧದ ತವರು ಸರಣಿಯನ್ನು ಮತ್ತು 2021ರ ಐಪಿಎಲ್​ನ ಮೊದಲಾರ್ಧವನ್ನು ಯುಎಇಯಲ್ಲಿ ಆಯೋಜಿಸುವ ಆಲೋಚನೆಯಲ್ಲಿದೆ.

author img

By

Published : Dec 1, 2020, 3:29 PM IST

ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​
ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​

ಕರಾಚಿ: ಭಾರತದಲ್ಲಿ ಮುಂದಿನ ವರ್ಷ ನಡೆಯಲಿರುವ 2021ರ ಟಿ-20 ವಿಶ್ವಕಪ್​ ಸರಣಿಯನ್ನು ಭಾರತದಿಂದ ಯುಎಇಗೆ ಸ್ಥಳಾಂತರಿಸುವಂತೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಸಿಇಒ ವಾಸಿಮ್ ಖಾನ್ ಐಸಿಸಿಗೆ ಮನವಿ ಮಾಡಿದ್ದಾರೆ.

ಭಾರತದಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ಆದ್ದರಿಂದ ಭಾರತದಲ್ಲಿ ಟಿ-20 ವಿಶ್ವಕಪ್ ನಡೆಸುವುದು ಸೂಕ್ತವಲ್ಲ ಎಂದು ವಾಸಿಮ್ ಖಾನ್ ಹೇಳಿದ್ದಾರೆ.

"ಭಾರತದಲ್ಲಿ ಟಿ-20 ವಿಶ್ವಕಪ್​ ಆಯೋಜನೆ ಮಾಡಲು ಕೆಲವು ಅನಿಶ್ಚಿತತೆ ಇದೆ. ಏಕೆಂದರೆ ಅಲ್ಲಿ ಕೋವಿಡ್​-19 ಹೆಚ್ಚಾಗಿದೆ. ಹಾಗಾಗಿ ಯುಎಇನಲ್ಲಿ ಆಯೋಜಿಸಬೇಕು" ಎಂದು ಖಾನ್​ ಕ್ರಿಕೆಟ್ ಬಝ್​ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಬಿಸಿಸಿಐ ಕೂಡ ಇಂಗ್ಲೆಂಡ್​​ ವಿರುದ್ಧದ ತವರು ಸರಣಿಯನ್ನು ಮತ್ತು 2021ರ ಐಪಿಎಲ್​ನ ಮೊದಲಾರ್ಧವನ್ನು ಯುಎಇಯಲ್ಲಿ ಆಯೋಜಿಸುವ ಆಲೋಚನೆಯಲ್ಲಿದೆ. ಆದರೆ ಏಪ್ರಿಲ್​ ವೇಳೆಗೆ ಇದರ ಬಗ್ಗೆ ಸ್ಪಷ್ಟ ಚಿತ್ರಣ ಬರಬೇಕು ಎಂದು ಅವರು ಹೇಳಿದ್ದಾರೆ.

ಭಾರತಕ್ಕೆ 2021 ಟಿ-20 ವಿಶ್ವಕಪ್​ ಆಯೋಜನೆಯ ಹಕ್ಕು ನೀಡಲಾಗಿದೆ. 2022ರ ಆವೃತ್ತಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. 2023ರ 50 ಓವರ್‌ಗಳ ವಿಶ್ವಕಪ್ ಸಹ ಭಾರತದಲ್ಲಿ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.