ETV Bharat / sports

ಪಂದ್ಯ ಆರಂಭಕ್ಕೂ ಮುನ್ನ ಪತ್ನಿ ಜತೆ ಹುಕ್ಕಾ ಬಾರ್​​ನಲ್ಲಿ ಮೋಜು - ಮಸ್ತಿ ಮಾಡಿದ್ರಾ ಶೋಯೆಬ್​​​! - ಶೋಯೆಬ್​ ಮಲಿಕ್​

ಟೀಂ ಇಂಡಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಪಾಕ್​ ಹೀನಾಯ ಸೋಲು ಅನುಭವಿಸಿದ್ದು, ಬ್ಯಾಟಿಂಗ್​ಗೆ ಇಳಿದಿದ್ದ ಶೋಯೆಬ್​ ಮಲಿಕ್​ ತಾವು ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್​ ಒಪ್ಪಿಸಿದ್ದರು.

ಬಾರ್​​ನಲ್ಲಿ ಮೋಜು-ಮಸ್ತಿ ಮಾಡಿದ್ರಾ ಶೋಯೆಬ್
author img

By

Published : Jun 17, 2019, 5:19 PM IST

ಮ್ಯಾಂಚೆಸ್ಟರ್​: ನಿನ್ನೆ ಟೀಂ ಇಂಡಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಪಾಕ್​ ತಂಡ ಹೀನಾಯ ಸೋಲು ಕಂಡಿದೆ. ಕೊಹ್ಲಿ ಪಡೆ ನೀಡಿದ್ದ 336ರನ್​ಗಳ ಗುರಿ ಬೆನ್ನತ್ತಿದ್ದ ಪಾಕ್​ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ ಸೋಲು ಕಾಣುವಂತಾಯಿತು.

ಪಾಕ್​ ತಂಡ ಸೋಲು ಕಾಣುತ್ತಿದ್ದಂತೆ ಅಲ್ಲಿನ ಕ್ರೀಡಾಭಿಮಾನಿಗಳು ತಮ್ಮ ಕ್ರಿಕೆಟ್​ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವಿವಿಧ ರೀತಿಯಲ್ಲಿ ಟ್ವೀಟ್​ ಮಾಡಿದ್ದಾರೆ. ಇದರ ಮಧ್ಯೆ ಉಭಯ ತಂಡಗಳ ನಡುವೆ ಪಂದ್ಯ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಸರ್ಫರಾಜ್​ ಅಹ್ಮದ್​ ನಾಯಕತ್ವದ ಪ್ಲೇಯರ್​ ಶೋಯೆಬ್​ ಮಲಿಕ್​ ತಮ್ಮ ಪತ್ನಿ ಸಾನಿಯಾ ಜತೆ ಹುಕ್ಕಾ ಬಾರ್​​ನಲ್ಲಿ ಮೋಜು - ಮಸ್ತಿ ಮಾಡಿದ್ದರು ಎಂಬ ಚರ್ಚೆವೊಂದು ನಡೆಯುತ್ತಿದೆ.

ಕ್ರೀಡಾಭಿಮಾನಿಗಳು ಪಾಕ್​ ಕ್ರಿಕೆಟ್​ ಪ್ಲೇಯರ್​​​ ಹುಕ್ಕಾ ಬಾರ್​​ನಲ್ಲಿ ತಮ್ಮ ಪತ್ನಿಯೊಂದಿಗೆ ಮೋಜು-ಮಸ್ತಿ ಮಾಡುತ್ತಿದ್ದಾರು ಎನ್ನಲಾಗಿರುವ ಕೆಲವೊಂದು ಪೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದು, ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಮ್ಯಾಂಚೆಸ್ಟರ್​​ನ ಹೋಟೆಲ್​ವೊಂದಲ್ಲಿ ಇವರು ಉಪಸ್ಥಿತರಿದ್ದರು ಎಂಬುದು ಈ ಪೋಟೋದಲ್ಲಿ ಕಂಡು ಬಂದಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಗೊತ್ತಾಗಿಲ್ಲ. ಇನ್ನು ಕಾರ್​ವೊಂದರಲ್ಲಿ ಶೋಯೆಬ್​ ಮಲಿಕ್​ ತನ್ನ ಪತ್ನಿ ಸಾನಿಯಾ ಜತೆ ಇರುವ ಫೋಟೋ ಕೂಡ ಶೇರ್​ ಆಗಿದೆ.

ಪಾಕಿಸ್ತಾನ ಕ್ರಿಕೆಟ್​ ಮಂಡಳಿ ವಿಶ್ವಕಪ್​​ನಲ್ಲಿ ಭಾಗಿಯಾಗಿರುವ ಪ್ಲೇಯರ್ಸ್​ ಜತೆ ಪತ್ನಿಯರು ಉಳಿದುಕೊಳ್ಳಲು ಅವಕಾಶ ನೀಡಿದ್ದು, ಒಂದು ವೇಳೆ ಇವರು ಪಾರ್ಟಿಯಲ್ಲಿ ಭಾಗಿಯಾಗಿರಬಹುದು ಎಂಬ ಅನುಮಾನ ಮೂಡಿದೆ. ನಿನ್ನೆಯ ಪಂದ್ಯದಲ್ಲಿ ಶೋಯೆಬ್​ ತಾವು ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್​ ಒಪ್ಪಿಸಿದರು.

Intro:Body:

ಪಂದ್ಯ ಆರಂಭಕ್ಕೂ ಮುನ್ನ ಪತ್ನಿ ಜತೆ ಹುಕ್ಕಾ ಬಾರ್​​ನಲ್ಲಿ ಮೋಜು-ಮಸ್ತಿ ಮಾಡಿದ್ರಾ ಶೋಯೆಬ್​​​! ಹೀಗೊಂದು ಚರ್ಚೆ! 

ಮ್ಯಾಂಚೆಸ್ಟರ್​: ನಿನ್ನೆ ಟೀಂ ಇಂಡಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಪಾಕ್​ ತಂಡ ಹೀನಾಯ ಸೋಲು ಕಂಡಿದೆ. ಕೊಹ್ಲಿ ಪಡೆ ನೀಡಿದ್ದ 336ರನ್​ಗಳ ಗುರಿ ಬೆನ್ನತ್ತಿದ್ದ ಪಾಕ್​ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ ಸೋಲು ಕಾಣುವಂತಾಯಿತು. 

ಪಾಕ್​ ತಂಡ ಸೋಲು ಕಾಣುತ್ತಿದ್ದಂತೆ ಅಲ್ಲಿನ ಕ್ರೀಡಾಭಿಮಾನಿಗಳು ತಮ್ಮ ಕ್ರಿಕೆಟ್​ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವಿವಿಧ ರೀತಿಯಲ್ಲಿ ಟ್ವೀಟ್​ ಮಾಡಿದ್ದಾರೆ. ಇದರ ಮಧ್ಯೆ ಉಭಯ ತಂಡಗಳ ನಡುವೆ ಪಂದ್ಯ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಸರ್ಫರಾಜ್​ ಅಹ್ಮದ್​ ಟೀಂನ ಪ್ಲೇಯರ್​ ಶೋಯೆಬ್​ ತಮ್ಮ ಪತ್ನಿ ಸಾನಿಯಾ ಜತೆ  ಹುಕ್ಕಾಂ ಬಾರ್​​ನಲ್ಲಿ ಮೋಜು-ಮಸ್ತಿ ಮಾಡಿದ್ದರು ಎಂಬ ಚರ್ಚೆವೊಂದು ನಡೆಯುತ್ತಿದೆ. 

 ಕ್ರೀಡಾಭಿಮಾನಿಗಳು ಪಾಕ್​ ಕ್ರಿಕೆಟ್​ ಪ್ಲೇಯರ್​​​ ಹುಕ್ಕಾ ಬಾರ್​​ನಲ್ಲಿ ತಮ್ಮ ಪತ್ನಿಯೊಂದಿಗೆ ಮೋಜು-ಮಸ್ತಿ ಮಾಡುತ್ತಿದ್ದಾರೆನ್ನಲಾಗಿರುವ ಕೆಲವೊಂದು ಪೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದು, ಇದು ಅನೇಕ ಚರ್ಚೆಗೆ ಗ್ರಾಸವಾಗಿದೆ. ಮ್ಯಾಂಚೆಸ್ಟರ್​​ನ ಹೋಟೆಲ್​ವೊಂದಲ್ಲಿ ಇವರು ಉಪಸ್ಥಿತರಿದ್ದರೂ ಎಂಬುದು ಈ ಪೋಟೋದಲ್ಲಿ ಕಂಡು ಬಂದಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಗೊತ್ತಾಗಿಲ್ಲ. ಇನ್ನು ಕಾರ್​ವೊಂದರಲ್ಲಿ ಶೋಯೆಬ್​ ಮಲಿಕ್​ ತನ್ನ ಪತ್ನಿ ಸಾನಿಯಾ ಜತೆ ಇರುವ ಫೋಟೋ ಕೂಡ ಶೇರ್​ ಆಗಿದೆ. 

ಪಾಕಿಸ್ತಾನ ಕ್ರಿಕೆಟ್​ ಮಂಡಳಿ ವಿಶ್ವಕಪ್​​ನಲ್ಲಿ ಭಾಗಿಯಾಗಿರುವ ಪ್ಲೇಯರ್ಸ್​ ಜತೆ ಪತ್ನಿಯರು ಉಳಿದುಕೊಳ್ಳಲು ಅವಕಾಶ ನೀಡಿದ್ದು, ಒಂದು ವೇಳೆ ಇವರು ಪಾರ್ಟಿಯಲ್ಲಿ ಭಾಗಿಯಾಗಿರಬಹುದು ಎಂಬ ಅನುಮಾನ ಮೂಡಿದೆ. ನಿನ್ನೆಯ ಪಂದ್ಯದಲ್ಲಿ ಶೋಯೆಬ್​ ತಾವು ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್​ ಒಪ್ಪಿಸಿದರು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.