ETV Bharat / sports

ವಿಶ್ವಕಪ್​ನಲ್ಲಿ ಮಿಂಚಿದ ವಿಶ್ವದ ಟಾಪ್​ 5 ಉದಯೋನ್ಮುಖ ಆಟಗಾರರು - ನಿಕೋಲಸ್​ ಪೂರನ್​

ವಿಶ್ವಕಪ್​ನಲ್ಲಿ ಸಿಕ್ಕ ಅವಕಾಶಗಳನ್ನು ಉಪಯೋಗಿಸಿ ಕೊಂಡು ಇದೇ ಮೊದಲ ಬಾರಿಗೆ ಐಸಿಸಿಯ ಟೂರ್ನಿಯಲ್ಲಿ ಆಡುವ 11ರ ಬಳಗದಲ್ಲಿ ಅವಕಾಶಗಿಟ್ಟಿಸಿಕೊಂಡು ತಂಡದ ಗೆಲುವಿಗೆ ಶ್ರಮಿಸಿದ ಕೆಲವು ಆಟಗಾರರ ವಿವರ ಇಲ್ಲಿದೆ.

World Cup 2019
author img

By

Published : Jul 17, 2019, 3:36 PM IST

ಲಂಡನ್​: 2019ರ ವಿಶ್ವಕಪ್​ ಹಲವು ಗೊಂದಲಗಳೊಂದಿಗೆ ಇಂಗ್ಲೆಂಡ್​ ಪಾಲಾಗಿದೆ. ಆದರೆ, ಟೂರ್ನಿಯಲ್ಲಿ ಕೆಲವು ತಂಡಗಳ ಯುವ ಆಟಗಾರರು ವಿಶ್ವಕಪ್​ನಲ್ಲಿ ನಿರೀಕ್ಷೆಗೂ ಮೀರಿ ಅದ್ಭುತ ಪ್ರದರ್ಶನ ತೋರುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬದ್ರವಾಗಿ ನೆಲೆಯೂರುವ ಮುನ್ಸೂಚನೆ ನೀಡಿದ್ದಾರೆ.

ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ಇದೇ ಮೊದಲ ಬಾರಿಗೆ ಐಸಿಸಿಯ ಟೂರ್ನಿಯಲ್ಲಿ ಆಡುವ 11ರ ಬಳಗದಲ್ಲಿ ಅವಕಾಶಗಿಟ್ಟಿಸಿಕೊಂಡು ತಂಡದ ಗೆಲುವಿಗೆ ಶ್ರಮಿಸಿದ ಕೆಲವು ಅಟಗಾರರ ವಿವಿರ ಇಲ್ಲಿದೆ.

ಶಾಹೀನ್​ ಅಫ್ರಿದಿ

World Cup 2019
ಶಾಹೀನ್ ಆಫ್ರಿದಿ

ಪಾಕಿಸ್ತಾನ ತಂಡದಲ್ಲಿ ಕಳೆದ ವರ್ಷಾಂತ್ಯದಲ್ಲಿ ಪದಾರ್ಪಣೆ ಮಾಡಿದ್ದ ಯುವ ಕ್ರಿಕೆಟಿಗ ಶಾಹೀನ್​ ಅಫ್ರಿದಿ ವಿಶ್ವಕಪ್​ನಲ್ಲಿ ಪಾಕಿಸ್ತಾನದ ಪರ ಅದ್ಭುತ ಬೌಲಿಂಗ್​ ಪ್ರದರ್ಶನ ತೋರಿದರು. 19 ವರ್ಷದ ಶಾಹೀನ್​ 5 ಪಂದ್ಯಗಳಲ್ಲಿ 16 ವಿಕೆಟ್​ ಪಡೆದಿದ್ದರು. ಕೊನೆಯ ಲೀಗ್​ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 35 ರನ್​ ನೀಡಿ 6 ವಿಕೆಟ್​ ಪಡೆಯುವ ಮೂಲಕ ಪಾಕಿಸ್ತಾನದ ಪರ ವಿಶ್ವಕಪ್​ನಲ್ಲಿ ಕಡಿಮೆ ರನ್​ ನೀಡಿ 6 ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡರು.

ಮೊಹಮ್ಮದ್​ ಸೈಫುದ್ದೀನ್​

World Cup 2019
ಮೊಹಮ್ಮದ್​ ಸೈಫುದ್ದೀನ್​

ಬಾಂಗ್ಲಾದೇಶದ 22 ವರ್ಷದ ಮೊಹಮ್ಮದ್​ ಸೈಪುದ್ದೀನ್​ ಅಂಡರ್​ 19 ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ನಂತರ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅವಕಾಶ ಪಡೆದಿದ್ದರು. ಈ ವಿಶ್ವಕಪ್​ನಲ್ಲಿ ಸೈಫುದ್ದೀನ್​ 6 ಪಂದ್ಯಗಳಲ್ಲಿ 13 ವಿಕೆಟ್ ಪಡೆಯುವ ಮೂಲಕ ಮುಸ್ತಫಿಜುರ್​ ನಂತರ ಹೆಚ್ಚು ವಿಕೆಟ್​ ಪಡೆದ ಬಾಂಗ್ಲಾದೇಶ ಬೌಲರ್​ ಎನಿಸಿಕೊಂಡರು. ಅಲ್ಲದೆ ಕೆಳಕ್ರಮಾಂಕದ ಬ್ಯಾಟಿಂಗ್​ನಲ್ಲಿ ಆಕರ್ಷಕ ಇನ್ನಿಂಗ್ಸ್​ ಕಟ್ಟಿದ್ದರು.

ಆವಿಶ್ಕಾ ಫರ್ನಾಂಡೋ

World Cup 2019
ಆವಿಶ್ಕಾ ಫರ್ನಾಂಡೋ

ಶ್ರೀಲಂಕಾದ 21 ವರ್ಷದ ಆವಿಶ್ಕಾ ಫರ್ನಾಂಡೋ ಎರಡು ವರ್ಷಗಳ ಹಿಂದೆ ಆಸ್ಟ್ರೆಲಿಯಾ ವಿರುದ್ಧ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರಾದರೂ ಹೇಳಿಕೊಳ್ಳುವ ಪ್ರದರ್ಶನ ನೀಡದ ಕಾರಣ ಮತ್ತೆ 2 ವರ್ಷಗಳ ತನಕ ತಂಡದಲ್ಲಿ ಅವಕಾಶ ಕಳೆದುಕೊಂಡಿದ್ದರು. ಇದೀಗ ಮತ್ತೆ ವಿಶ್ವಕಪ್​ನಲ್ಲಿ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡು ಸಿಕ್ಕ 4 ಪಂದ್ಯಗಳಲ್ಲಿ 203 ರನ್​ಗಳಿಸಿ ಮಿಂಚಿದರು. ವಿಂಡೀಸ್​ ವಿರುದ್ಧ ಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ನಿಕೋಲಸ್​ ಪೂರನ್​

World Cup 2019
ನಿಕೋಲಸ್​ ಪೂರನ್​

ವೆಸ್ಟ್​ ಇಂಡೀಸ್​ ತಂಡದ 23 ವರ್ಷದ ಪೂರನ್​ 8 ಇನ್ನಿಂಗ್ಸ್​ಗಳಲ್ಲಿ 367 ರನ್​ಗಳಿಸುವ ಮೂಲಕ ವಿಂಡೀಸ್​ ಪರ ಗರಿಷ್ಠ ಸ್ಕೋರರ್​ ಆಗಿದ್ದರು. ಇದೇ ವರ್ಷ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಪೂರನ್​ ವಿಶ್ವಕಪ್​ನಲ್ಲಿ ಒಂದು ಶತಕ ಹಾಗೂ 2 ಅರ್ಧಶತಕ ಸಿಡಿಸಿ ಮಿಂಚಿದ್ದು, ವಿಂಡೀಸ್​ ತಂಡದಲ್ಲಿ ಖಾಯಂ ಸದಸ್ಯರಾಗಿದ್ದಾರೆ. ಅಲ್ಲದೆ ಇದೇ ವಿಂಡೀಸ್​ ಮಂಡಳಿಯಿಂದ ವಾರ್ಷಿಕ ಗುತ್ತಿಯಲ್ಲೂ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

ಜೋಫ್ರಾ ಆರ್ಚರ್​

World Cup 2019
ಜೋಫ್ರಾ ಆರ್ಚರ್​

ವೆಸ್ಟ್​ ಇಂಡೀಸ್​ ಮೂಲದ ಜೋಫ್ರಾ ಆರ್ಚರ್​ ಇಂಗ್ಲೆಂಡ್​ ತಂಡಕ್ಕೆ ಇದೇ ವರ್ಷ ವಿಶ್ವಕಪ್​ಗೂ ಮುನ್ನ ನಡೆದಿದ್ದ ಪಾಕಿಸ್ತಾನದ ವಿರುದ್ಧದ ಏಕದಿನ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದರು. ಆಕಸ್ಮಿಕವಾಗಿ ವಿಶ್ವಕಪ್​ನಲ್ಲಿ ಅವಕಾಶ ಪಡೆದ ಆರ್ಚರ್​ 20 ವಿಕೆಟ್​ ಪಡೆಯುವ ಮೂಲಕ 3ನೇ ಗರಿಷ್ಠ ವಿಕೆಟ್​ ಟೇಕರ್​ ಎಂಬ ದಾಖಲೆಗೆ ಪಾತ್ರರಾದರು. ಅಲ್ಲದೆ ವಿಶ್ವಕಪ್​ ಟೂರ್ನಿಯಲ್ಲಿ ಗರಿಷ್ಠ ವಿಕೆಟ್​ ಪಡೆದ ಇಂಗ್ಲೆಂಡ್​ ಬೌಲರ್​ ಎಂಬ ಖ್ಯಾತಿಗೆ ಪಾತ್ರರಾದರು.

ಇವರಲ್ಲದೆ ಆಸ್ಟ್ರೇಲಿಯಾದ ವಿಕೆಟ್​ ಕೀಪರ್​ ಅಲೆಕ್ಸ್​ ಕ್ಯಾರಿ, ದಕ್ಷಿಣ ಆಫ್ರಿಕಾದ ವ್ಯಾನ್​ ಡರ್​ ಡಾಸ್ಸೆನ್​, ಪಾಕಿಸ್ತಾನದ ಹ್ಯಾರೀಸ್​ ಸೊಹೈಲ್ ಕೂಡ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ 2019 ರ ವಿಶ್ವಕಪ್​ನ ಉದಯೋನ್ಮುಖ ಆಟಗಾರರ ಸಾಲಿನಲ್ಲಿ ಕಂಡು ಬಂದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.