ಸಿಡ್ನಿ(ಆಸ್ಟ್ರೇಲಿಯಾ): ಮಂಗಳವಾರ ನಡೆಯಬೇಕಿದ್ದ ಎರಡು ಲೀಗ್ ಪಂದ್ಯಗಳು ಮಳೆಗೆ ಆಹುತಿಯಾಗಿವೆ. ಹಾಗಾಗಿ ದಕ್ಷಿಣ ಆಫ್ರಿಕಾ ತಂಡ ಬಿ ಗುಂಪಿನಲ್ಲಿ ಮುಂಚೂಣಿ ಸ್ಥಾನ ಪಡೆದು ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಇನ್ನೊಂದೆಡೆ ಎ ಗುಂಪಿನ ಅಗ್ರತಂಡ ಭಾರತ, ಇಂಗ್ಲೆಂಡ್ ಜೊತೆ ಸೆಣಸಲಿದೆ.
ಲೀಗ್ ಹಂತದಲ್ಲಿ ಮೂರು ಪಂದ್ಯಗಳನ್ನು ಗೆದ್ದಿರುವ ದಕ್ಷಿಣ ಆಫ್ರಿಕಾ ಕೊನೆಯ ಲೀಗ್ ಪಂದ್ಯದಲ್ಲಿ ವಿಂಡೀಸ್ ತಂಡವನ್ನು ಎದುರಿಸಬೇಕಾಗಿತ್ತು. ಈ ಪಂದ್ಯ ಅಷ್ಟೇನೂ ಮಹತ್ವವಿಲ್ಲದಿದ್ದರೂ, ಸೆಮಿಯಲ್ಲಿ ಯಾವ ತಂಡವನ್ನು ಎದುರಿಸಬೇಕು ಎಂಬುದನ್ನು ಈ ಪಂದ್ಯದ ಫಲಿತಾಂಶವೇ ನಿರ್ದರಿಸಬೇಕಿತ್ತು. ಆದರೆ ಪಂದ್ಯ ರದ್ದಾದ ನಂತರ 4 ಪಂದ್ಯಗಳಲ್ಲಿ 7 ಅಂಕ ಪಡೆದ ದ.ಆಫ್ರಿಕಾ ಬಿ ಗುಂಪಿನ ಅಗ್ರಸ್ಥಾನಿಯಾಗಿ ಲೀಗ್ನಿಂದ ತೇರ್ಗಡೆಯಾಯಿತು. ಇನ್ನು ಇಂಗ್ಲೆಂಡ್ ದ್ವಿತೀಯ ಸ್ಥಾನ ಪಡೆಯಿತು.
-
The #T20WorldCup semi-final draw:
— T20 World Cup (@T20WorldCup) March 3, 2020 " class="align-text-top noRightClick twitterSection" data="
3pm local time: 🇮🇳 v 🏴
7pm local time: 🇿🇦 v 🇦🇺
Who are you backing to make it to the final? pic.twitter.com/ar3vcAI7Re
">The #T20WorldCup semi-final draw:
— T20 World Cup (@T20WorldCup) March 3, 2020
3pm local time: 🇮🇳 v 🏴
7pm local time: 🇿🇦 v 🇦🇺
Who are you backing to make it to the final? pic.twitter.com/ar3vcAI7ReThe #T20WorldCup semi-final draw:
— T20 World Cup (@T20WorldCup) March 3, 2020
3pm local time: 🇮🇳 v 🏴
7pm local time: 🇿🇦 v 🇦🇺
Who are you backing to make it to the final? pic.twitter.com/ar3vcAI7Re
ಐಸಿಸಿ ವೇಳಾಪಟ್ಟಿಯಂತೆ ಎ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ತಂಡ ಬಿ ಗುಂಪಿನ ದ್ವಿತೀಯ ಸ್ಥಾನಿಯನ್ನು, ಬಿ ಗುಂಪಿನ ಅಗ್ರಸ್ಥಾನಿ ಎ ಗುಂಪಿನ ದ್ವಿತೀಯ ಸ್ಥಾನ ಪಡೆದ ತಂಡವನ್ನು ಎದುರಿಸಬೇಕು. ಇದರಂತೆ ಗುರುವಾರ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಇಂಗ್ಲೆಂಡ್ ತಂಡವೂ, ಎರಡನೇ ಪಂದ್ಯದಲ್ಲಿ ದ.ಆಫ್ರಿಕಾ ತಂಡ ಆಸೀಸ್ ಮಹಿಳೆಯರ ಸವಾಲನ್ನು ಎದುರಿಸಲಿದೆ.
ಭಾರತಕ್ಕೆ ಮತ್ತೆ ಇಂಗ್ಲೆಂಡ್ ಸವಾಲು!
2018ರಲ್ಲೂ ಭಾರತ ತಂಡ ಎ ಗುಂಪಿನಲ್ಲಿ ಪ್ರಥಮ ಪಡೆದು ಸೆಮಿಫೈನಲ್ ಪ್ರವೇಶಿಸಿತ್ತು. ದುರಾದೃಷ್ಟ ಅಂದ್ರೆ, ಬಲಿಷ್ಠ ಇಂಗ್ಲೆಂಡ್ ಎದುರು ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಸೋಲು ಕಂಡಿತ್ತು. ಇದೀಗ 2020ರಲ್ಲೂ ಭಾರತ ಅಜೇಯ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದ್ದು ಮತ್ತೆ ಇಂಗ್ಲೆಂಡ್ ವಿರುದ್ಧವೇ ಸ್ಪರ್ಧಿಸಬೇಕಾದ ಪರಿಸ್ಥಿತಿಗೆ ತಲುಪಿದೆ. ಆದರೆ ಕಳೆದ ಬಾರಿಯ ತಂಡಕ್ಕಿಂತ ಭಾರತ ತಂಡ ಈ ಬಾರಿ ಬಲಿಷ್ಠವಾಗಿದ್ದು ಚೊಚ್ಚಲ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದೆ.