ಮುಂಬೈ: ಭಾರತದ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಟಿ20 ಪಂದ್ಯಗಳಿಗೆ ಸ್ಪಿನ್ನರ್ ನರೈನ್ ಹಾಗೂ ಆಲ್ರೌಂಡರ್ ಕೀರನ್ ಪೊಲಾರ್ಡ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಸೋಮವಾರ ಘೋಷಣೆ ಮಾಡಿದ 14 ಸದಸ್ಯರ ತಂಡದಲ್ಲಿ ಈ ಇಬ್ಬರಿಗೂ ಅವಕಾಶ ಕಲ್ಪಸಲಾಗಿದೆ. ಮತ್ತೊಬ್ಬ ಆಲ್ರೌಂಡರ್ ಆ್ಯಂಡ್ರ್ಯೂ ರಸೆಲ್ ಗಾಯದಿಂದೂ ಚೇತರಿಸಿಕೊಂಡಿದ್ದಾರೆ. ಆದರೆ ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕೆಂದು ಮಂಡಳಿ ತಿಳಿಸಿದೆ.
ಸುನೀಲ್ ನರೈನ್ ಸೆಪ್ಟಂಬರ್ 16 ರಂದು ಇಂಗ್ಲೆಂಡ್ ವಿರುದ್ಧ ಕೊನೆಯ ಟಿ20 ಪಂದ್ಯವಾಡಿದ್ದರು. ಇದೀಗ 2 ವರ್ಷಗಳ ನಂತರ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ್ದಾರೆ. ಮತ್ತೊಬ್ಬ ಆಲ್ರೌಂಡರ್ ಕೀರನ್ ಪೊಲಾರ್ಡ್ ಭಾರತದ ವಿರುದ್ಧ 2018ರಲ್ಲಿ ಕೊನೆಯ ಬಾರಿಗೆ ಆಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಿದ್ದರು.
-
BREAKING: WEST INDIES SQUAD RELEASED FOR 1ST AND 2ND T20I vs INDIA IN FLORIDA. #ItsOurGame pic.twitter.com/gGU5Gde77E
— Windies Cricket (@windiescricket) July 22, 2019 " class="align-text-top noRightClick twitterSection" data="
">BREAKING: WEST INDIES SQUAD RELEASED FOR 1ST AND 2ND T20I vs INDIA IN FLORIDA. #ItsOurGame pic.twitter.com/gGU5Gde77E
— Windies Cricket (@windiescricket) July 22, 2019BREAKING: WEST INDIES SQUAD RELEASED FOR 1ST AND 2ND T20I vs INDIA IN FLORIDA. #ItsOurGame pic.twitter.com/gGU5Gde77E
— Windies Cricket (@windiescricket) July 22, 2019
ಈ ಇಬ್ಬರು ವಿಶ್ವದೆಲ್ಲೆಡೆ ಹಲವಾರ ಟಿ20 ಲೀಗ್ಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿರುವ ಹಿನ್ನಲೆಯಲ್ಲಿ ಅವರನ್ನು ಟಿ20 ತಂಡಕ್ಕೆ ಆಯ್ಕೆಮಾಡಿಕೊಳ್ಳಲಾಗಿದೆ. ಅಲ್ಲದೆ ಮುಂದಿನ ವರ್ಷ ಟಿ20 ವಿಶ್ವಕಪ್ ಇರುವುದರಿಂದ ಈ ಇಬ್ಬರಿಗೆ ಮತ್ತೊಂದು ಅವಕಾಶ ನೀಡಲಾಗಿದೆ ಎಂದು ವಿಂಡೀಸ್ ಕ್ರಿಕೆಟ್ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ