ETV Bharat / sports

ವಿಶ್ವಕಪ್​ ಗೆದ್ದರೆ ಭಾರತದಲ್ಲಿ ಸಾಕಷ್ಟು ಪ್ರೀತಿ ಗಳಿಸಲಿದ್ದೇವೆ: ಹರ್ಮನ್​ ಪ್ರೀತ್​ ಕೌರ್​

2017ರ ಏಕದಿನ ವಿಶ್ವಕಪ್​ ನಂತರ ಭಾರತದಲ್ಲಿ ಮಹಿಳಾ ಕ್ರಿಕೆಟ್​ಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಇದೀಗ ಚೊಚ್ಚಲ ಬಾರಿಗೆ ಫೈನಲ್​ ತಲುಪಿರುವ ಭಾರತ ತಂಡ ವಿಶ್ವಕಪ್​ ಜಯಿಸಿದರೆ ಇಡೀ ಭಾರತವೇ ನಮ್ಮತ್ತ ತಿರುಗಲಿದೆ. ಜೊತೆಗೆ ನಮಗೆ ಅವರಿಂದ ಅಪಾರ ಪ್ರೀತಿ ಸಿಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

India skipper Harmanpreet Kaur
ಹರ್ಮನ್​ ಪ್ರೀತ್​ ಕೌರ್​
author img

By

Published : Mar 5, 2020, 11:54 PM IST

ಸಿಡ್ನಿ: ಫೈನಲ್​ನಲ್ಲಿ ಆಸ್ಟ್ರೇಲಿಯಾ ಮಣಿಸಿ ವಿಶ್ವಕಪ್​ ಜಯಿಸಿದ್ದೇ ಆದಲ್ಲಿ ನಮಗೆ ಭಾರತದಲ್ಲಿ ನಮಗೆ ಸಾಕಷ್ಟು ಪ್ರೀತಿ ಸಿಗಲಿದೆ ಎಂದು ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್​ ಕೌರ್​ ಅಭಿಪ್ರಾಯಪಟ್ಟಿದ್ದಾರೆ.

ಹರ್ಮನ್​ ಪ್ರೀತ್​ ಕೌರ್​

ಗುರುವಾರ ನಡೆಯಬೇಕಿದ್ದ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್​ ಪಂದ್ಯ ಮಳೆಯಿಂದ ರದ್ದಾಗಿತ್ತು. ಲೀಗ್​ನಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದರಿಂದ ಭಾರತ ಫೈನಲ್​ ಪ್ರವೇಶಿಸಿದೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ಇನ್ನು ಗುರುವಾರ ಸೆಮಿಫೈನಲ್​ ಪಂದ್ಯದ ವೀಕ್ಷಣೆಗೆ ಹರ್ಮನ್ ಪ್ರೀತ್​ ಕೌರ್​ ಪೋಷಕರು ತಮ್ಮ ಮಗಳ ಆಟವನ್ನು ಕಣ್ತುಂಬಿಕೊಳ್ಳಲು ಸಿಡ್ನಿಗೆ ಧಾವಿಸಿದ್ದರು. ಆದರೆ ಮಳೆ ಕಾರಣ ಪಂದ್ಯ ರದ್ದಾಗಿದ್ದರಿಂದ ಇದೇ ಮೊದಲ ಬಾರಿಗೆ ಮಗಳ ಆಟವನ್ನು ನೋಡಲು ಬಂದಿದ್ದವರಿಗೆ ಬೇಸರ ತರಿಸಿದೆ.

T20 world cup
ಮಹಿಳೆಯರ ಟಿ20 ವಿಶ್ವಕಪ್​ ಫೈನಲ್ಸ್​

"ನಾನು ಶಾಲಾ ದಿನಗಳಿಂದ ಕ್ರಿಕೆಟ್​ ಆಡುತ್ತಿದ್ದರೂ ನನ್ನ ತಂದೆ ನಾನು ಆಡುವುದನ್ನು ನೋಡಿರಲಿಲ್ಲ. ಆದರೆ ಇಂದು ಇದೇ ಮೊದಲ ಬಾರಿಗೆ ನನಗೂ ಕೂಡ ನನ್ನ ತಂದೆ-ತಾಯಿ ನಾನು ಕ್ರಿಕೆಟ್​ ಆಡುವುದನ್ನು ನೋಡಬೇಕು ಎಂದುಕೊಂಡಿದ್ದೆ, ಅದು ಈ ಸಮಯದಲ್ಲಿ ಸಾಧ್ಯವಾಗುತ್ತಿದೆ" ಎಂದು ಖುಷಿಪಟ್ಟರು.

ಮಾರ್ಚ್​ 8ರಂದು ಫೈನಲ್​ ಪಂದ್ಯ ನಡೆಯಲಿದ್ದು, ಅಂದೇ ಹರ್ಮನ್​ ಪ್ರೀತ್​ ಕೌರ್​ ತಮ್ಮ 31ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅಲ್ಲಿಯವರೆಗೆ ಅವರ ಪೋಷಕರು ಕೂಡ ಆಸ್ಟ್ರೇಲಿಯಾದಲ್ಲೇ ಉಳಿಯಲಿದ್ದು ಪಂದ್ಯ ವೀಕ್ಷಿಸಲಿದ್ದಾರೆ ಎಂದು ಕೌರ್​ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.