ETV Bharat / sports

ವಿರಾಟ್-ರೋಹಿತ್​ ನಡುವಿನ ಭಿನ್ನಮತ : ಸುದ್ದಿಗೋಷ್ಠಿಯಲ್ಲಿ ಕ್ಯಾಪ್ಟನ್​ ಕೊಹ್ಲಿ ಖುದ್ದಾಗಿ ತಿಳಿಸಿದ್ರು ಈ ವಿಷಯ! - ಸುದ್ದಿಗೋಷ್ಠಿಯಲ್ಲಿ ಕ್ಯಾಪ್ಟನ್​ ಕೊಹ್ಲಿ

ನನ್ನ - ರೋಹಿತ್​ ನಡುವೆ ಭಿನ್ನಮತವಿಲ್ಲ, ಆ ರೀತಿಯ ವರದಿ ಹಾಸ್ಯಾಸ್ಪದ ಎಂದು ಕ್ಯಾಪ್ಟನ್​ ಕೊಹ್ಲಿ ಹೇಳಿದ್ದಾರೆ. ವೆಸ್ಟ್​ ಇಂಡೀಸ್ ಟೂರ್​ಗೂ ಮುಂಚಿತವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಈ ಮಾತು ಹೇಳಿದರು.

ಮುಂಬೈನಲ್ಲಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಸುದ್ದಿಗೋಷ್ಠಿ
author img

By

Published : Jul 29, 2019, 7:02 PM IST

Updated : Jul 29, 2019, 7:17 PM IST

ನವದೆಹಲಿ: ಟೀಂ ಇಂಡಿಯಾ ಕ್ಯಾಪ್ಟನ್​​ ವಿರಾಟ್ ಕೊಹ್ಲಿ ಮತ್ತು ಆರಂಭಿಕ ಆಟಗಾರ ರೋಹಿತ್ ಶರ್ಮಾ ನಡುವಿನ ಒಳಜಗಳಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಕ್ಯಾಪ್ಟನ್​ ವಿರಾಟ್​ ಮಾತನಾಡಿದ್ದು, ಎಲ್ಲರಲ್ಲೂ ಉದ್ಭವವಾಗಿದ್ದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ವೆಸ್ಟ್​ ಇಂಡೀಸ್​ ವಿರುದ್ಧದ ಕ್ರಿಕೆಟ್​ ಸರಣಿಗಾಗಿ ಟೀಂ ಇಂಡಿಯಾ ಇಂದು ರಾತ್ರಿ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮುಂಚಿತವಾಗಿ ಕೋಚ್​ ರವಿಶಾಸ್ತ್ರಿ ಹಾಗೂ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾದರು.

ವಿರಾಟ್​ ಕೊಹ್ಲಿ ಸುದ್ದಿಗೋಷ್ಠಿ

ರೋಹಿತ್​ ಶರ್ಮಾ ಹಾಗೂ ನನ್ನ ನಡುವೆ ಯಾವುದೇ ರೀತಿಯ ಬಿರುಕು ಇಲ್ಲ. ಮಾಧ್ಯಮಗಳಲ್ಲಿ ಆ ರೀತಿಯ ವರದಿ ಬಿತ್ತಗೊಳ್ಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಯಾವ ಉದ್ದೇಶಕ್ಕಾಗಿ ಈ ರೀತಿಯ ವರದಿಗಳು ಪ್ರಕಟಗೊಳ್ಳುತ್ತಿವೆ ಎಂಬುದು ನನಗೆ ಗೊತ್ತಿಲ್ಲ ಎಂದು ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಇದೇ ವೇಳೆ ಹೇಳಿದರು.

ಡ್ರೆಸ್ಸಿಂಗ್​ ರೂಂನಲ್ಲಿ ಉತ್ತಮ ವಾತಾವರಣ ಇಲ್ಲದೇ ಹೋದರೆ ಯಾವುದೇ ತಂಡ ಸಕ್ಸಸ್​ ಕಾಣಲು ಸಾಧ್ಯವಿಲ್ಲ. ಒಂದು ವೇಳೆ ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದ ಸುದ್ದಿ ನಿಜವಾಗಿದ್ದರೇ ನಾವು ಅದ್ಭುತ ಕ್ರಿಕೆಟ್​ ಆಡಲು ಸಾಧ್ಯವಿರಲಿಲ್ಲ ಎಂದು ಅವರು ಹೇಳಿದರು.

ಕಳೆದ ಐದಾರು ವರ್ಷಗಳಿಂದ ನಾವು ಆಡುತ್ತಿರುವ ಕ್ರಿಕೆಟ್​​ನಲ್ಲಿ ಅದ್ಭುತ ಸಾಧನೆ ಸಾಧಿಸಿದ್ದು, ಒಂದು ವೇಳೆ ಡ್ರೆಸ್ಸಿಂಗ್​ ರೂಂನಲ್ಲಿ ಎಲ್ಲವೂ ಸರಿಯಿಲ್ಲ ಎಂದರೆ ಈ ರೀತಿಯ ಪ್ರದರ್ಶನ ಮೂಡಿ ಬರಲು ಅಸಾಧ್ಯ. ಡ್ರೆಸ್ಸಿಂಗ್​ ರೂಂನಲ್ಲಿ ಕುಲ್ದೀಪ್​ ಯಾದವ್​ಗೆ ಯಾವ ರೀತಿಯ ಗೌರವ ನೀಡುತ್ತೇನೆ. ಅದೇ ರೀತಿಯಲ್ಲಿ ಧೋನಿ ಸೇರಿದಂತೆ ಎಲ್ಲರಿಗೂ ನೀಡುತ್ತೇನೆ ಎಂದರು. ಇದೇ ವೇಳೆ ಮಧ್ಯೆ ಪ್ರವೇಶ ಮಾಡಿದ ಕೋಚ್​ ರವಿಶಾಸ್ತ್ರಿ ಈ ರೀತಿಯ ಸುದ್ದಿಗಳು ಅಸಂಬದ್ಧ ಎಂದು ಹೇಳಿದರು.

ರೋಹಿತ್​ ಶರ್ಮಾ ಕ್ರಿಕೆಟ್​ ಆಡುವ ರೀತಿಗೆ ಅನೇಕ ಸಲ ನಾನು ಮೆಚ್ಚುಗೆ ವ್ಯಕ್ತಪಡಿಸಿರುವೆ. ಅವರ ಬ್ಯಾಟಿಂಗ್​ ವೈಖರಿ ನಿಜಕ್ಕೂ ಅದ್ಭುತವಾಗಿರುತ್ತದೆ. ನಮ್ಮಿಬ್ಬರ ನಡುವೆ ಯಾವುದೇ ರೀತಿಯ ವೈಮನಸ್ಸು ಇಲ್ಲ ಎಂದು ಹೇಳಿದರು.

ಇದೇ ವೇಳೆ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾಗಿಯಾಗಲು ಉತ್ಸುಕನಾಗಿದ್ದು, ಆಯ್ಕೆ ಸಮಿತಿ ನನಗೆ ವಿಶ್ರಾಂತಿ ನೀಡಿಲ್ಲವಾದ್ದರಿಂದ ಕ್ರಿಕೆಟ್​ ಆಡುತ್ತಿದ್ದೇನೆ. ಮುಂಬರುವ ಟಿ20 ವಿಶ್ವಕಪ್​​ನಲ್ಲಿ ಅದ್ಭುತ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ನಮ್ಮ ಮುಂದೆ ಇದೆ ಎಂದು ತಿಳಿಸಿದರು.

Intro:Body:

ನನ್ನ-ರೋಹಿತ್​ ನಡುವೆ ಭಿನ್ನಮತವಿಲ್ಲ: ಈ ರೀತಿಯ ವರದಿ ಹಾಸ್ಯಾಸ್ಪದ ಎಂದ ಕ್ಯಾಪ್ಟನ್​ ಕೊಹ್ಲಿ! 

ನವದೆಹಲಿ: ಟೀಂ ಇಂಡಿಯಾ ಕ್ಯಾಪ್ಟನ್​​ ವಿರಾಟ್ ಕೊಹ್ಲಿ ಮತ್ತು ಆರಂಭಿಕ ಆಟಗಾರ ರೋಹಿತ್ ಶರ್ಮಾ ನಡುವಿನ ಒಳಜಗಳಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಕ್ಯಾಪ್ಟನ್​ ವಿರಾಟ್​ ಮಾತನಾಡಿದ್ದು, ಎಲ್ಲರಲ್ಲೂ ಉದ್ಭವವಾಗಿದ್ದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. 

ವೆಸ್ಟ್​ ಇಂಡೀಸ್​ ವಿರುದ್ಧದ ಕ್ರಿಕೆಟ್​ ಸರಣಿಗಾಗಿ ಟೀಂ ಇಂಡಿಯಾ ಇಂದು ರಾತ್ರಿ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮುಂಚಿತವಾಗಿ ಕೋಚ್​ ರವಿಶಾಸ್ತ್ರಿ ಹಾಗೂ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾದರು. 

ರೋಹಿತ್​ ಶರ್ಮಾ ಹಾಗೂ ನನ್ನ ನಡುವೆ ಯಾವುದೇ ರೀತಿಯ ಬಿರುಕು ಇಲ್ಲ. ಮಾಧ್ಯಮಗಳಲ್ಲಿ ಆ ರೀತಿಯ ವರದಿ ಬಿತ್ತಗೊಳ್ಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಯಾವ ಉದ್ದೇಶಕ್ಕಾಗಿ ಈ ರೀತಿಯ ವರದಿಗಳು ಪ್ರಕಟಗೊಳ್ಳುತ್ತಿವೆ ಎಂಬುದು ನನಗೆ ಗೊತ್ತಿಲ್ಲ ಎಂದು ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಇದೇ ವೇಳೆ ಹೇಳಿದರು. 

ಡ್ರೆಸ್ಸಿಂಗ್​ ರೂಂನಲ್ಲಿ ಉತ್ತಮ ವಾತಾವರಣ ಇಲ್ಲದೇ ಹೋದರೆ ಯಾವುದೇ ತಂಡ ಸಕ್ಸಸ್​ ಕಾಣಲು ಸಾಧ್ಯವಿಲ್ಲ. ಒಂದು ವೇಳೆ ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದ ಸುದ್ದಿ ನಿಜವಾಗಿದ್ದರೇ ನಾವು ಅದ್ಭುತ ಕ್ರಿಕೆಟ್​ ಆಡಲು ಸಾಧ್ಯವಿರಲಿಲ್ಲ ಎಂದು ಅವರು ಹೇಳಿದರು. 

Conclusion:
Last Updated : Jul 29, 2019, 7:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.