ETV Bharat / sports

ವೈರಲ್​ ಆಯ್ತು ಮಕ್ಕಳ ಜತೆ ಗಲ್ಲಿ ಕ್ರಿಕೆಟ್ ಆಡಿದ ವಿರಾಟ್ ಕೊಹ್ಲಿ ವಿಡಿಯೋ - ಭಾರತ ಬಾಂಗ್ಲಾ ಇಂದೋರ್ ಟೆಸ್ಟ್​ ಕ್ರಿಕೆಟ್​

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು ಇಂದೋರ್​ನ ಗಲ್ಲಿಯೊಂದರಲ್ಲಿ ಮಕ್ಕಳ ಜೊತೆಗೆ ಕ್ರಿಕೆಟ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಟಿ-20 ಸರಣಿಯಲ್ಲಿ ವಿಶ್ರಾಂತಿ ಪಡೆದ ಕೊಹ್ಲಿ, ಈಗ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಆದರೆ, ತಂಡದ ಜೊತೆಗೆ ಅಭ್ಯಾಸ ಮಾಡುವ ಬದಲು ಮಕ್ಕಳೊಂದಿಗೆ ಬ್ಯಾಟ್ ಬೀಸಿ ಗಮನಸೆಳೆದಿದ್ದಾರೆ.

ವಿರಾಟ್ ಕೊಹ್ಲಿ
author img

By

Published : Nov 13, 2019, 5:54 AM IST

ಇಂದೋರ್: ಬಾಂಗ್ಲಾ ವಿರುದ್ಧ ಆರಂಭವಾಗಲಿರುವ 2 ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಗಲ್ಲಿ ಕ್ರಿಕೆಟ್​ ವಿಡಿಯೋ ಹರಿದಾಡುತ್ತಿದೆ.

ಟಿ-20 ಸರಣಿಯಲ್ಲಿ ವಿಶ್ರಾಂತಿ ಪಡೆದ ಕೊಹ್ಲಿ, ಈಗ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಆದರೆ, ತಂಡದ ಜೊತೆಗೆ ಅಭ್ಯಾಸ ಮಾಡವ ಬದಲಿಗೆ ಮಕ್ಕಳ ಜತೆ ಇಂದೋರ್​ ಬೀದಿಯಲ್ಲಿ ಗಲ್ಲಿ ಕ್ರಿಕೆಟ್​ ಆಡಿ ಗಮನಸೆಳೆದಿದ್ದಾರೆ.

ಜಾಹೀರಾತು ಶೂಟಿಂಗ್​ಗಾಗಿ ವಿರಾಟ್​ ಮಕ್ಕಳ ಜೊತೆಯಲ್ಲಿ ಕ್ರಿಕೆಟ್ ಆಡಿದ್ದಾರೆ. ಜಾಹೀರಾತು ಹಾಗೂ ಶೂಟಿಂಗ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ನಗರದ ಶ್ರೀಜಿ ವ್ಯಾಲಿಯ ಬಿಚೋಲಿ ಪ್ರದೇಶದಲ್ಲಿ ಕೊಹ್ಲಿ, ಚೆಕ್ಡ್ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿ ಮಕ್ಕಳೊಂದಿಗೆ ನಸುನಗುತ್ತಾ ಬ್ಯಾಟ್ ಬೀಸಿದ್ದಾರೆ. ಈ ಬಳಿಕ ಮಕ್ಕಳಿಗೆ ಕೊಹ್ಲಿ ಬೌಲಿಂಗ್ ಮಾಡಿದ್ದಾರೆ.

ಮಕ್ಕಳ ಜತೆ ಗಲ್ಲಿ ಕ್ರಿಕೆಟ್ ಆಡಿದ ವಿರಾಟ್

ನವೆಂಬರ್​ 14ರಿಂದ ಇಂದೋರ್​ನಲ್ಲಿ ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ನವೆಂಬರ್ 22ರಿಂದ ಕೋಲ್ಕತ್ತಾದಲ್ಲಿ 2ನೇ ಹಾಗೂ ಅಂತಿಂ ಟೆಸ್ಟ್​​ ಪಂದ್ಯ ನಡೆಯಲಿದೆ. ಈ ಪಂದ್ಯ ಹಗಲು- ರಾತ್ರಿ ಟೆಸ್ಟ್​ ಪಂದ್ಯವಾಗಿರಲಿದ್ದು, ಇದೇ ಮೊದಲ ಬಾರಿಗೆ ಭಾರತ ಡೇ ಆ್ಯಂಡ್​ ನೈಟ್​ ಪಂದ್ಯ ಆಯೋಜಿಸುತ್ತಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.