ಮ್ಯಾಂಚೆಸ್ಟರ್: ಇಂಗ್ಲೆಂಡ್ ತಂಡದ ಮಾಜಿ ಬ್ಯಾಟ್ಸ್ಮನ್ ಜಾನ್ ಎಡ್ರಿಚ್ ತಮ್ಮ 83ನೇ ವಯಸ್ಸಿನಲ್ಲಿ ಸ್ಕಾಟ್ಲೆಂಡ್ನ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
70ರ ದಶಕದಲ್ಲಿ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದ ಅವರು 1,963 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಎಡ್ರಿಚ್ ಇಂಗ್ಲೆಂಡ್ ಪರ 77 ಟೆಸ್ಟ್ ಪಂದ್ಯಗಳನ್ನಾಡಿದ್ದರು. 43.54 ಸರಾಸರಿಯಲ್ಲಿ 5,138 ರನ್ ಬಾರಿಸಿದ್ದಾರೆ. ಅವರು ಪದಾರ್ಪಣೇ ಮಾಡಿದ 13 ವರ್ಷಕ್ಕೆ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಪಂದ್ಯವನ್ನಾಡಿದ್ದರು.
13 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿದ್ದ ಅವರು ಸೀಮಿತ ಓವರ್ಗಳಲ್ಲಿ ಕೇವಲ 7 ಪಂದ್ಯಗಳನ್ನು ಆಡಿದ್ದರು. 7 ಪಂದ್ಯಗಳಿಂದ 37ರ ಸರಾಸರಿಯಲ್ಲಿ 223 ರನ್ಗಳಿಸಿದರು.
2000ರಲ್ಲಿ ಲುಕೇಮಿಯಾದಿಂದ ಬಳಲುತ್ತಿದ್ದ ಚಿಕಿತ್ಸೆ ನೀಡಿದ್ದ ವೈದ್ಯರು ಅವರಿಗೆ ಕೇವಲ 7 ವರ್ಷ ಬದುಕಬಹುದು ಎಂದು ಸಮಯ ನೀಡಿದ್ದರು. ಆದರೆ, ನಿರಂತರ ವೈದ್ಯರ ಸಲಹೆ ಮತ್ತು ಖಾಯಿಲೆಗೆ ಚುಚ್ಚುಮದ್ದನ್ನು ತೆಗೆದುಕೊಂಡಿದ್ದರಿಂದ ದೀರ್ಘ ಸಮಯ ಬದುಕುಳಿದಿದ್ದರು.