ETV Bharat / sports

38ನೇ ವಯಸ್ಸಲ್ಲೂ 54 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ ಕಮ್ರನ್​ ಅಕ್ಮಲ್​... ವಿಡಿಯೋ

author img

By

Published : Feb 22, 2020, 11:02 PM IST

38 ವರ್ಷದ ಕಮ್ರನ್​ ಅಕ್ಮಲ್​ 54 ಎಸೆತಗಳಲ್ಲಿ 3ನೇ ಶತಕ ದಾಖಲಿಸಿದರು. ಅವರ ಈ ಇನ್ನಿಂಗ್ಸ್​ನಲ್ಲಿ 13 ಬೌಂಡರಿ ಹಾಗೂ 4 ಸಿಕ್ಸರ್​ ಸೇರಿತ್ತು. ಇವರ ಅದ್ಭುತ ಬ್ಯಾಟಿಂಗ್​ ನೆರವಿನಿಂದ ಪೇಶಾವರ್​ ತಂಡ ಪಿಎಸ್​ಎಲ್​ನ ಈ ಆವೃತ್ತಿಯಲ್ಲಿ ಮೊದಲ ಜಯ ದಾಖಲಿಸಿತು

PSL 2020
ಪಿಎಸ್​ಎಲ್​ 2020

ಕರಾಚಿ: ಪಾಕಿಸ್ತಾನದ ಹಿರಿಯ ವಿಕೆಟ್​ ಕೀಪರ್​ ಕಮ್ರನ್​ ಅಕ್ಮಲ್​ ಪಿಎಸ್​ಎಲ್​ ಲೀಗ್​ನಲ್ಲಿ ಕೇವಲ 54 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ.

ಹಾಲಿ ಚಾಂಪಿಯನ್​ ಕ್ವೆಟ್ಟಾ ಗ್ಲಾಡಿಯೇಡರ್​ ನೀಡಿದ 149 ರನ್​ಗಳ ಟಾರ್ಗೆಟ್​ ಬೆನ್ನಟ್ಟಿದ ಪೇಶಾವರ್​ ಜಲ್ಮಿ ತಂಡ ವಿಕೆಟ್​ ಕೀಪರ್​ ಕಮ್ರನ್​ ಅಕ್ಮಲ್​ ಅವರ ಅಮೋಘ ಶತಕ ಹಾಗೂ ಯುವ ಬ್ಯಾಟ್ಸ್​ಮನ್​ ಹೈದರ್​ 25 ರನ್​ಗಳ ನೆರವಿನಿಂದ 18.3 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ಗುರಿ ತಲುಪಿತು.

38 ವರ್ಷದ ಕಮ್ರನ್​ ಅಕ್ಮಲ್​ 54 ಎಸೆತಗಳಲ್ಲಿ ತಮ್ಮ ಪಿಎಸ್​ಎಲ್​ನ 3ನೇ ಶತಕ ದಾಖಲಿಸಿದರು. ಅವರ ಈ ಇನ್ನಿಂಗ್ಸ್​ನಲ್ಲಿ 13 ಬೌಂಡರಿ ಹಾಗೂ 4 ಸಿಕ್ಸರ್​ ಸೇರಿತ್ತು. ಇವರ ಅದ್ಭುತ ಬ್ಯಾಟಿಂಗ್​ ನೆರವಿನಿಂದ ಪೇಶಾವರ್​ ತಂಡ ಈ ಆವೃತ್ತಿಯಲ್ಲಿ ಮೊದಲ ಜಯ ದಾಖಲಿಸಿತು.

ಕಮ್ರನ್​ ಅಕ್ಮಲ್​ ಸೆಂಚುರಿ ಇನ್ನಿಂಗ್ಸ್​ ಹೈಲೈಟ್ಸ್​

ಇದಕ್ಕೂ ಮೊದಲು ಬ್ಯಾಟಿಂಗ್​ ನಡೆಸಿದ್ದ ಕ್ವೆಟ್ಟಾ ಗ್ಲಾಡಿಯೇಟರ್​ ಜೇಸನ್​ ರಾಯ್​(73) ಅವರ ಅರ್ಧಶತಕ ಹಾಗೂ ಸರ್ಫರಾಜ್​ ಅಹ್ಮದ್​ ಅವರ 41 ರನ್​ಗಳ ನೆರವಿನಿಂದ 148 ರನ್​ಗಳಿಸಿತ್ತು.

ಜಲ್ಮಿ ತಂಡದ ವೇಗಿ ವಹಾಬ್​ ರಿಯಾಜ್​ 4 ಓವರ್​ಗಳಲ್ಲಿ ಕೇವಲ 21 ರನ್​ ನೀಡಿದ 2 ವಿಕೆಟ್​ ಪಡೆದರೆ, ರಹತ್​ ಅಲಿ, ಅಮಿರ್ ಖಾನ್​ ಮತ್ತು ಡರೇನ್​ ಸಮಿ ತಲಾ ಒಂದು ವಿಕೆಟ್​ ಪಡೆದರು.

ಕಮ್ರನ್​ ಅಕ್ಮಲ್​ ಪಾಕಿಸ್ತಾನ ಪ್ರೀಮಿಯರ್​ ಲೀಗ್​ನಲ್ಲಿ 1,430 ರನ್​ಗಳಿಸುವ ಮೂಲಕ ಅಧಿಕ ರನ್​ಗಳಿಸಿದ ಬ್ಯಾಟ್ಸ್​ಮನ್​ ಕೂಡಾ ಆಗಿ ಹೊರ ಹೊಮ್ಮಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.