ಸಿಡ್ನಿ : ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ಗೆ ಹಿಂದಿನ ದಿನವಾದ ಇಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತದ ಮುಖ್ಯ ಕೋಚ್ ರವಿಶಾಸ್ತ್ರಿ ಬೌರಲ್ ಮ್ಯೂಸಿಯಂಗಾಗಿ ತಮ್ಮ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರ ಭಾವಚಿತ್ರವನ್ನು ಅನಾವರಣಗಳಿಸಿದರು.
ಗವಾಸ್ಕರ್ ನಾಯಕತ್ವದಲ್ಲಿ ಆಡಿರುವ ರವಿಶಾಸ್ತ್ರಿ ತಮ್ಮ ನೆಚ್ಚಿನ ನಾಯಕನ ಬಗ್ಗೆ ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಗವಾಸ್ಕರ್ರನ್ನು ತಾವು ನೋಡಿದ ಅತ್ಯುತ್ತಮ ಆರಂಭಿಕ ಬ್ಯಾಟ್ಸ್ಮನ್ ಎಂದು ಶ್ಲಾಘಿಸಿದ್ದಾರೆ.
"ಗವಾಸ್ಕರ್ರನ್ನು ಅತ್ಯುತ್ತಮ ಆರಂಭಿಕ ಬ್ಯಾಟ್ಸ್ಮನ್ ಎಂದು ನಾನು ಸುಲಭವಾಗಿ ಹೇಳುತ್ತೇನೆ. ನನಗೆ ಅವರ ನಾಯಕತ್ವದಲ್ಲಿ ಆಡಲು ಅವಕಾಶ ಸಿಕ್ಕಿದ್ದು, ನನ್ನ ಸೌಭಾಗ್ಯ. ಅವರು ತಂತ್ರಗಾರಿಕೆಯ ಮಾಸ್ಟರ್. ಅವರನ್ನು ಬೆರಗುಗೊಳಿಸುವಂತಹದ್ದೇನು ಇರಲಿಲ್ಲ. ವೆಸ್ಟ್ ಇಂಡೀಸ್ನಂತಹ ಪ್ರಬಲ ತಂಡದ ವಿರುದ್ಧ ಅವರು 13 ಶತಕ ಸಿಡಿಸಿರುವುದು ಅವರ ಆಟಕ್ಕೆ ಸಾಕ್ಷಿಯಾಗಿದೆ.
-
#TeamIndia Head Coach @RaviShastriOfc launched 'India's 71-Year Test: The Journey to Triumph in Australia', a new book by @BradmanBowral , at the @scg today.
— BCCI (@BCCI) January 6, 2021 " class="align-text-top noRightClick twitterSection" data="
He also unveiled a portrait of the legendary Sunil Gavaskar. pic.twitter.com/EP4UXoqHAq
">#TeamIndia Head Coach @RaviShastriOfc launched 'India's 71-Year Test: The Journey to Triumph in Australia', a new book by @BradmanBowral , at the @scg today.
— BCCI (@BCCI) January 6, 2021
He also unveiled a portrait of the legendary Sunil Gavaskar. pic.twitter.com/EP4UXoqHAq#TeamIndia Head Coach @RaviShastriOfc launched 'India's 71-Year Test: The Journey to Triumph in Australia', a new book by @BradmanBowral , at the @scg today.
— BCCI (@BCCI) January 6, 2021
He also unveiled a portrait of the legendary Sunil Gavaskar. pic.twitter.com/EP4UXoqHAq
ಅವರ ಆ ಶತಕಗಳನ್ನು ಸಿಡಿಸುತ್ತಿದ್ದ ಸಂದರ್ಭದಲ್ಲಿ ಮುಂಬೈ ಬ್ರಾಡ್ಮನ್ ಎಂದು ಕರೆಯಲಾಗುತ್ತಿತ್ತು. ಇಂದು ನಾನು ಅವರ ಭಾವಚಿತ್ರವನ್ನು ಇಲ್ಲಿ ಅನಾವರಣಗೊಳಿಸುತ್ತಿರುವುದು ನನಗೆ ಸಿಕ್ಕ ಗೌರವ" ಎಂದು ಬಿಸಿಸಿಐ ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.
ಟೀಂ ಇಂಡಿಯಾ ಕೋಚ್ ಇದೇ ಸಂದರ್ಭದಲ್ಲಿ "ಇಂಡಿಯಾಸ್ 71 ಇಯರ್ ಟೆಸ್ಟ್ : ದಿ ಜರ್ನಿ ಟು ಟ್ರಿಯಾಂಪ್ ಇನ್ ಆಸ್ಟ್ರೇಲಿಯಾ" ಪುಸ್ತಕವನ್ನು ಬಿಡುಗಡೆ ಮಾಡಿದರು.
ಇದನ್ನು ಓದಿ:ಹೊಸದನ್ನು ಕಲಿಯುವ ಅಶ್ವಿನ್ ಜಾಣ್ಮೆ, ಜಡೇಜಾ ಬ್ಯಾಟಿಂಗ್ ಸುಧಾರಣೆ ತಂಡದ ದೊಡ್ಡ ಬಲ: ರಹಾನೆ