ಶಾರ್ಜಾ: ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಪ್ಲೇ ಆಫ್ ಪ್ರವೇಶಿಸಿದೆ.
ಶಾರ್ಜಾದಲ್ಲಿ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ 8 ವಿಕೆಟ್ ಕಳೆದುಕೊಂಡು 149 ರನ್ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಹೈದರಾಬಾದ್ 17.1 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿ ಜಯ ಸಾಧಿಸಿತು.
ನಾಯಕ ಡೇವಿಡ್ ವಾರ್ನರ್ 58 ಎಸೆತಗಳಲ್ಲಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 85 ರನ್ ಹಾಗೂ ವೃದ್ಧಿಮಾನ್ ಸಹಾ 45 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 58 ರನ್ಗಳಿಸಿ ಅಜೇಯರಾಗುಳಿದು ತಂಡವನ್ನು ಗೆಲವಿನ ಗಡಿ ದಾಟಿಸಿದರು.
-
A 10-wicket win over #MumbaiIndians as @SunRisers Qualify for #Dream11IPL 2020 Playoffs. pic.twitter.com/j1Ib16fw6b
— IndianPremierLeague (@IPL) November 3, 2020 " class="align-text-top noRightClick twitterSection" data="
">A 10-wicket win over #MumbaiIndians as @SunRisers Qualify for #Dream11IPL 2020 Playoffs. pic.twitter.com/j1Ib16fw6b
— IndianPremierLeague (@IPL) November 3, 2020A 10-wicket win over #MumbaiIndians as @SunRisers Qualify for #Dream11IPL 2020 Playoffs. pic.twitter.com/j1Ib16fw6b
— IndianPremierLeague (@IPL) November 3, 2020
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಮುಂಬೈ ತಂಡ ಸಂದೀಪ್ ಶರ್ಮಾ ಹಾಗೂ ಶಹ್ಬಾಜ್ ನದೀಮ್ ಅವರ ಬೌಲಿಂಗ್ಗೆ ನಲುಗಿ 20 ಓವರ್ಗಳಲ್ಲಿ 149 ರನ್ಗಳಿಸಿತ್ತು. ಪೊಲಾರ್ಡ್ 41 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ಸ್ ಆಗಿದ್ದರು.
ಹೈದರಾಬಾದ್ ಪರ ಸಂದೀಪ್ ಶರ್ಮಾ 34ಕ್ಕೆ 3, ಜೇಸನ್ ಹೋಲ್ಡರ್ 25ಕ್ಕೆ 2, ಶಹ್ಬಾಜ್ ನದೀಮ್ 19ಕ್ಕೆ2 ಹಾಗೂ ರಶೀದ್ ಖಾನ್ 32ಕ್ಕೆ 1 ವಿಕೆಟ್ ಪಡೆದು ಮುಂಬೈ ತಂಡವನ್ನು 150ರೊಳಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.
-
A look at the Road To The Final for #Dream11IPL 2020 pic.twitter.com/Zrz7Su7qa4
— IndianPremierLeague (@IPL) November 3, 2020 " class="align-text-top noRightClick twitterSection" data="
">A look at the Road To The Final for #Dream11IPL 2020 pic.twitter.com/Zrz7Su7qa4
— IndianPremierLeague (@IPL) November 3, 2020A look at the Road To The Final for #Dream11IPL 2020 pic.twitter.com/Zrz7Su7qa4
— IndianPremierLeague (@IPL) November 3, 2020
ಈ ಗೆಲುವಿನೊಂದಿಗೆ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರುವ ಮೂಲಕ ಪ್ಲೇ ಆಫ್ ಪ್ರವೇಶಿಸಿತು. 14 ಅಂಕಗಳೊಡನೆ ಹೈದಾರಾಬಾದ್ ಸೋಲನ್ನು ಬಯಸಿದ್ದ ಕೆಕೆಆರ್ ಟೂರ್ನಿಯಿಂದ 4ನೇ ತಂಡವಾಗಿ ಹೊರಬಿದ್ದಿತು. ಪ್ಲೇ ಆಫ್ ಪ್ರವೇಶಿಸಿರುವ ಹೈದರಾಬಾದ್ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಸವಾಲವನ್ನು ಎದುರಿಸಲಿದೆ.